ಸಾರಾಂಶ
ರಾಜ್ಯದಲ್ಲಿ ಪಶು ಸಂಗೋಪನಾ ಇಲಾಖೆಯು ಕೇಂದ್ರ ಪಶುಸಂಗೋಪನ ಇಲಾಖೆಯಿಂದ ನೂತನವಾಗಿ ಅಭಿವೃದ್ಧಿಪಡಿಸಿರುವ 21ನೇ ಲೈವ್ ಸ್ಟಾಕ್ ಸೆನ್ಸೆಸ್ ಎಂಬ ಆ್ಯಪ್ ಮುಖಾಂತರ ಜಾನುವಾರು ಗಣತಿಯನ್ನು ಮಾಡುತ್ತಿದೆ. ಅಕ್ಟೋಬರ್ ತಿಂಗಳಿನಿಂದ ಮುಂದಿನ 4 ತಿಂಗಳ ಕಾಲ ಜಾನುವಾರು ಗಣತಿಯನ್ನು ವಿವಿಧ ಹಂತಗಳಲ್ಲಿ ತರಬೇತಿ ಪಡೆದವರು ಬೃಹತ್ ಸಮೀಕ್ಷೆ ಕಾರ್ಯ ನಡೆಸಲು ಸರ್ವ ಸನ್ನದ್ಧವಾಗಿದೆ.
ಕನ್ನಡಪ್ರಭ ವಾರ್ತೆ ರಾವಂದೂರು
21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಅನುಷ್ಠಾನಗೊಳಿಸಲು ಮೊದಲ ಬಾರಿಗೆ 21ನೇ ಲೈವ್ ಸ್ಟಾಕ್ ಸೆನ್ಸಸ್ ಎಂಬ ಆಪ್ ಆಧರಿಸಿ ನಡೆಸಲಾಗುತ್ತಿದೆ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ಹೇಳಿದರು.ಪಿರಿಯಾಪಟ್ಟಣ ತಾಲೂಕಿನ ಮರದೂರು ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜಿಪಂ ಶ್ರಯದಲ್ಲಿ ಆಯೋಜಿಸಿದ್ದ 21ನೇ ಜಾನುವಾರು ಗಣತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪಶು ಸಂಗೋಪನಾ ಇಲಾಖೆಯು ಕೇಂದ್ರ ಪಶುಸಂಗೋಪನ ಇಲಾಖೆಯಿಂದ ನೂತನವಾಗಿ ಅಭಿವೃದ್ಧಿಪಡಿಸಿರುವ 21ನೇ ಲೈವ್ ಸ್ಟಾಕ್ ಸೆನ್ಸೆಸ್ ಎಂಬ ಆ್ಯಪ್ ಮುಖಾಂತರ ಜಾನುವಾರು ಗಣತಿಯನ್ನು ಮಾಡುತ್ತಿದೆ. ಅಕ್ಟೋಬರ್ ತಿಂಗಳಿನಿಂದ ಮುಂದಿನ 4 ತಿಂಗಳ ಕಾಲ ಜಾನುವಾರು ಗಣತಿಯನ್ನು ವಿವಿಧ ಹಂತಗಳಲ್ಲಿ ತರಬೇತಿ ಪಡೆದ ಟ್ರೈನರ್ ಗಳು ಮೇಲ್ವಿಚಾರಕರು ಹಾಗೂ ಗಣತಿದಾರದಿಂದ ಬೃಹತ್ ಸಮೀಕ್ಷೆ ಕಾರ್ಯ ನಡೆಸಲು ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದರು.ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ನಾಗರಾಜು ಮಾತನಾಡಿದರು.
ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ, ತಾಪಂ ಮಾಜಿ ಸದಸ್ಯ ಶಂಕರೇಗೌಡ, ಎಪಿಎಂಸಿ ಮಾಜಿ ಸದಸ್ಯ ಜಯಶಂಕರ್, ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೋಲದಪ್ಪ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಸೋಮಯ್ಯ, ವೈದ್ಯಾಧಿಕಾರಿಗಳಾದ ಮಧುಸೂದನ್, ಚಾಮರಾಜ, ಸಂದೇಶ್ , ಕೃತಿಕಾ, ಮುಖಂಡರಾದ ಕೀರ್ತಿ ಮಂಜುನಾಥ್, ಇಲಾಖೆಯ ಸಿಬ್ಬಂದಿ, ಪಶುಸಖಿಯರು, ಸಹಾಯಕರು ಇದ್ದರು.ಮಾರನಾಯಕರ ಪ್ರತಿಮೆಗೆ ಪುಷ್ಪಾರ್ಚನೆ
ಕನ್ನಡಪ್ರಭ ವಾರ್ತೆ ಮೈಸೂರುಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಾಲಯದಲ್ಲಿ ಇರುವ ಮೈಸೂರು ಮೂಲ ದೊರೆ ಶ್ರೀ ಮಾರನಾಯಕರ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಲಾಯಿತು.ಈ ವೇಳೆ ದ್ಯಾವಪ್ಪನಾಯಕ, ಕೆ.ಜೆ. ಶ್ರೀಧರ್ ನಾಯಕ, ಪ್ರಭಾಕರ ಹುಣಸೂರು, ಡಿ. ಮಂಜುನಾಥ್, ಪಿ. ದೇವರಾಜ್, ನಂಜನಗೂಡು ಮಂಜುನಾಥ್, ಶಿವಣ್ಣ ಹೊಸ ರಾಮನಹಳ್ಳಿ, ಬಂಡಳ್ಳಿ ಕುಮಾರ್, ಮಣಿ ನಾಯಕ, ಮಯೂರ, ಮಾದೇಶ, ಕೆರೆಹಳ್ಳಿ ರಘು, ಕರಿನಾಯಕ, ಉತ್ತನಹಳ್ಳಿ ಶಿವಣ್ಣ ಮೊದಲಾದವರು ಇದ್ದರು.