ಕಲಕಬಂಡಿ ಚಿಕ್ಕ ಹಳ್ಳಿಯಾದರೂ ಚೊಕ್ಕವಾಗಿದೆ. ಪ್ರತಿವರ್ಷ ಸಾಮೂಹಿಕ ವಿವಾಹ,ರಥೋತ್ಸವ, ಅನ್ನಸಂರ್ತಪಣೆ ಹೀಗೆ ಹಲವಾರು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವ ಕಾರ್ಯ ಶ್ಲಾಘನೀಯ

ಯಲಬುರ್ಗಾ: ನಾಟಕ ರಂಗಭೂಮಿಯಲ್ಲಿ ನಿಜವಾದ ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ-ಬೆಳೆಸುವ ಕೆಲಸ ನಡೆಯಬೇಕಿದೆ ಎಂದು ವೇದಮೂರ್ತಿ ಮಹೇಶ್ವರಯ್ಯ ಲಿಂಗನಬಂಡಿ ಹೇಳಿದರು.

ತಾಲೂಕಿನ ಕಲಕಬಂಡಿ ಗ್ರಾಮದಲ್ಲಿ ಶ್ರೀಕರಿಯಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಶರಣಬಸವೇಶ್ವರರ ಪುರಾಣ ಮಹಾಮಂಗಲದ ನಿಮಿತ್ತ ಮಾರುತೇಶ್ವರ ಯುವನಾಟ್ಯ ಸಂಘದಿಂದ ಏರ್ಪಡಿಸಿದ್ದ ಕಳ್ಳ ಕಟ್ಟಿದ ತಾಳಿ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.

ಕಲಕಬಂಡಿ ಚಿಕ್ಕ ಹಳ್ಳಿಯಾದರೂ ಚೊಕ್ಕವಾಗಿದೆ. ಪ್ರತಿವರ್ಷ ಸಾಮೂಹಿಕ ವಿವಾಹ,ರಥೋತ್ಸವ, ಅನ್ನಸಂರ್ತಪಣೆ ಹೀಗೆ ಹಲವಾರು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವ ಕಾರ್ಯ ಶ್ಲಾಘನೀಯ. ಇತರೆ ಗ್ರಾಮಗಳಿಗೆ ಮಾದರಿಯಾಗಿದೆ ಎಂದರು.

ಕರವೇ ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ ಮಾತನಾಡಿ, ಚಲನಚಿತ್ರದಲ್ಲಿ ದೃಶ್ಯ ಮತ್ತು ನಟನೆಯಲ್ಲಿ ಏನಾದರೂ ಲೋಪದೋಷಗಳಾದಲ್ಲಿ ಅದನ್ನು ಸರಿಪಡಿಸಿಕೊಳ್ಳುವ ಅವಕಾಶ ಇರುತ್ತದೆ. ಆದರೆ ರಂಗಭೂಮಿ ಪ್ರದರ್ಶನದಲ್ಲಿ ತಿದ್ದುಪಡೆಗೆ ಹಾಗೂ ತಿರುಚಲು ಯಾವುದೇ ಅವಕಾಶ ಇಲ್ಲ ಎಂದರು.

ಪತ್ರಕರ್ತ ಮಲ್ಲು ಮಾಟರಂಗಿ ಮಾತನಾಡಿ, ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸುವಲ್ಲಿ ಹಾಗೂ ಮಾನವೀಯತೆ ಬೆಳೆಸುವಲ್ಲಿ ರಂಗಭೂಮಿ ಕಲೆ ಸಹಕಾರಿಯಾಗಿದೆ ಎಂದರು.

ಈ ಸಂದರ್ಭ ಮುಖಂಡರಾದ ರಾಮನಗೌಡ ಭಾವಿಕಟ್ಟಿ, ಬಸವರಾಜ ಜಂಬಾಳಿ, ಶರಣಬಸಪ್ಪ ದಾನಕೈ, ಪ್ರಭುಗೌಡ ಪಾಟೀಲ್, ನಾಗರಾಜ ಹುಡೇದ, ಶರಣಗೌಡ ಮಾಲಿಪಾಟೀಲ್, ಚನ್ನಪ್ಪ ಟೆಂಗಿನಕಾಯಿ, ಮುದಕನಗೌಡ ಪಾಟೀಲ್, ಕರಬಸಪ್ಪ ಸಣ್ಣಗ್ಯಾನನಗೌಡ್ರ, ಹನುಮೇಶ ಗಾಳಿ, ವೀರಣ್ಣ ಕರಡಿಮಠ, ಸುರೇಶರಾವ್ ದೇಸಾಯಿ, ಪೊಲೀಸ್ ಇಲಾಖೆಯ ಶರಣಪ್ಪ ಗ್ಯಾನನಗೌಡ್ರ, ಶರಣಪ್ಪ ಕಟ್ಟಿಮನಿ, ಹೊನ್ನನಗೌಡ ಪಾಟೀಲ್, ಶಿವಶರಣಪ್ಪ ರಾಮತ್ನಾಳ, ಶರಣಪ್ಪ ಮುದಿಗೌಡ್ರ, ನಾಗರಾಜ ಹಡಪದ, ಸರಸ್ವತಿಗೌಡ ಪಾಟೀಲ್, ಶಿವು ಗಡಾದ, ಶರಣಪ್ಪ ಬೇನ್ನಳ್ಳಿ, ಗಿರಿಧರ ಈಳಿಗೇರ್ ಸೇರಿದಂತೆ ಇತರರು ಇದ್ದರು.