ಅಂತರಂಗ, ಬಹಿರಂಗ ಶುಚಿತ್ವದಿಂದ ಬದುಕು ಸಾರ್ಥಕ: ಅಭಿನವ ಬೂದೀಶ್ವರ ಶ್ರೀ

| Published : Feb 27 2024, 01:37 AM IST

ಅಂತರಂಗ, ಬಹಿರಂಗ ಶುಚಿತ್ವದಿಂದ ಬದುಕು ಸಾರ್ಥಕ: ಅಭಿನವ ಬೂದೀಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನ ಜನ್ಮ ಅತ್ಯಂತ ಪವಿತ್ರವಾಗಿದ್ದು, ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಅಂತರಂಗ, ಬಹಿರಂಗ ಶುಚಿತ್ವ ಹೊಂದಬೇಕು ಎಂದು ಗದಗ ತಾಲೂಕಿನ ಹೊಸಹಳ್ಳಿ ಅಭಿನವ ಬೂದೀಶ್ವರ ಸ್ವಾಮೀಜಿ ಹೇಳಿದರು.

ರೋಣ: ಮನುಷ್ಯನ ಜನ್ಮ ಅತ್ಯಂತ ಪವಿತ್ರವಾಗಿದ್ದು, ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಅಂತರಂಗ, ಬಹಿರಂಗ ಶುಚಿತ್ವ ಹೊಂದಬೇಕು ಎಂದು ಗದಗ ತಾಲೂಕಿನ ಹೊಸಹಳ್ಳಿ ಅಭಿನವ ಬೂದೀಶ್ವರ ಸ್ವಾಮೀಜಿ ಹೇಳಿದರು.ಅವರು ಸೋಮವಾರ ಪಟ್ಟಣದ ಹೊಸ ಸಂತೆ ಮಾರುಕಟ್ಟೆ ಜಾಗೆಯಲ್ಲಿ ತಲಾಬಕಟ್ಟಾ ಮಕಾನ್ ಕಮಿಟಿ, ಆಝಾದ ಯುವಕ ಸಂಘ ರೋಣ ವತಿಯಿಂದ ಪ್ರವಾದಿ ಹಜರತ್ ಮುಹಮ್ಮದ ಮುಸ್ತಪಾ ಅವರ ಜನ್ಮ ದಿನೋತ್ಸವ ಪ್ರಯುಕ್ತ 24ನೇ ವರ್ಷದ ಸರ್ವ ಧರ್ಮ ಸಾಮೂಹಿಕ ವಿವಾಹಗಳು ಸಮಾರಂಭದಲ್ಲಿ‌ ಮಾತನಾಡಿದರು.ಜೀವನ ಹೇಗಿರಬೇಕು, ಮನುಷ್ಯನಾಗಿ ಜನ್ಮ ತಾಳಿದ ಪ್ರತಿಯೊಬ್ಬರು ಮಾನವೀಯತೆಯನ್ನು ಹೊಂದಿರಬೇಕು. ಪರೋಪಕಾರ, ಸಾಮರಸ್ಯ ಬಗ್ಗೆ ಪ್ರವಾದಿ ಮಹಮ್ಮದ್ ಸಂದೇಶವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ವರದಕ್ಷಿಣೆ ಎಂಬುದು ಸಮಾಜದ ಬಹುದೊಡ್ಡ ಕೆಟ್ಟ ಪಿಡುಗಾಗಿದೆ. ಇದರಿಂದ ತನ್ನ ಅಪ್ಪ, ಅಮ್ಮ, ಅಣ್ಣ ,ತಮ್ಮಂದಿರು ಸೇರಿದಂತೆ ತುಂಬು ಕುಟುಂಬವನ್ನೇ ಬಿಟ್ಟು ಪತಿಯನ್ನೇ ನಂಬಿ ಬಂದಿರುವ ಬಂದಿರುವ ಮಹಿಳೆಗೆ ಶೋಷಣೆಯಾಗುತ್ತದೆ. ಆದ್ದರಿಂದ ವರದಕ್ಷಿಣೆ ಸಂಪೂರ್ಣ ನಿಷಿದ್ಧವಾಗಬೇಕು. ಬಡವರಿಗೆ ಅನುಕೂಲವಾಗುವಲ್ಲಿ ಆಝಾದ ಯುವಕ ಸಂಘ ಕಳೆದ 24 ವರ್ಷದಿಂದ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಬಂದಿದ್ದು ಶ್ಲಾಘನೀಯವಾಗಿದೆ. ಸಂಸಾರ ಎಂಬುದು ಸಸಾರವಾಗಿ ಸಾಗಲು ಹೊಂದಾಣಿಕೆ, ಆತ್ಮವಿಶ್ವಾಸ, ಸಹಭಾಳ್ವೆ ಅತೀ ಮುಖ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೆಸಿಸಿ ಬ್ಯಾಂಕ ಮಾಜಿ ಅಧ್ಯಕ್ಷ ಐ.ಎಸ್‌. ಪಾಟೀಲ ಮಾತನಾಡಿ, ಆರ್ಥಿಕ ಹೊರೆಯನ್ನು ನೀಗಿಸಲು, ದುಂದು ವೆಚ್ಚಕ್ಕೆ ಕಡಿವಾಣ ಹಾಕುವಲ್ಲಿ ಆಝಾದ ಯುವಕ ಸಂಘ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಉತ್ತಮ‌ ಕಾರ್ಯವಾಗಿದೆ. ಸಮಾಜಮುಖಿ ಕಾರ್ಯಗಳು ಅತ್ಯಂತ ಶ್ರೇಷ್ಠವಾಗಿವೆ ಎಂದರು.ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಸುಲೇಮಾನ ಶಾವಲಿ ದರಗಾದ ಅಜ್ಜನವರು ವಹಿಸಿದ್ದರು.ಪ್ರಾಸ್ತಾವಿಕವಾಗಿ ಆಝಾದ ಯುವಕ ಸಂಘ ಅಧ್ಯಕ್ಷ ಶಫೀಕ ಮೂಗನೂರ ಮಾತನಾಡಿದರು.ನಿವೃತ್ತ ಮುಖ್ಯೋಪಾಧ್ಯಾಯ ಎ.ಎಸ್. ಖತೀಬ ಅವರಿಂದ ಕುರಾಣ ಪಠಣ ಜರುಗಿತು. ವೇದಿಕೆ ಮೂಲಕ 10 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ರಂಗವ್ವ ಭಜಂತ್ರಿ, ಉಪಾಧ್ಯಕ್ಷ ಮಿಥುನ ಪಾಟೀಲ, ವ್ಹಿ.ಬಿ. ಸೋಮನಕಟ್ಟಿಮಠ, ಸದಸ್ಯರಾದ ಮಲ್ಲಯ್ಯ ಮಹಾಪುರುಷಮಠ, ಬಾವಾಸಾಬ ಬೆಟಗೇರಿ, ಗದಿಗೆಪ್ಪ‌ಕಿರೇಸೂರ, ಸಂಗಪ್ಪ ಜೊಡ್ಡಿಬಾಗಿಲ, ಬುಡ್ನೇಸಾಬ ಬೆಟಗೇರಿ, ಕೆ.ಬಿ. ಹರ್ಲಾಪೂರ, ಹಾವೇರಿ ಜಿಲ್ಲಾ ವಕ್ಫ ಬೋರ್ಡ್‌ ಅಧ್ಯಕ್ಷ ನಾಸೀರಖಾನ ಪಠಾಣ, ದಾವಲಸಾಬ ಬಾಡಿನ, ಅಪ್ತಾಬ ತಹಶಿಲ್ದಾರ, ಸಂಗಪ್ಪ ಜಿಡ್ಡಿಬಾಗಿಲ, ರವಿ ಸಂಗನಬಶೆಟ್ಟರ, ಇನಾಯತ ತರಪದಾರ, ಮಹಾದೇವಗೌಡ ಲಿಂಗನಗೌಡ್ರ, ಭರಮಗೌಡ ಲಿಂಗನಗೌಡ್ರ, ಮಹಮ್ಮದರಫಿಕ ಕಲೇಗಾರ, ನಾಜಬೇಗಂ ಯಲಿಗಾರ, ಲಕ್ಷ್ಮೀ ಗಡಗಿ, ವಿದ್ಯಾ ಬಡಿಗೇರ, ನಿಂಬಣ್ಣ ಗಾಣಿಗೇರ,ಬಸನಗೌಡ ಪಾಟೀಲ, ದಾವಸಾಬ ಚೌರದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮುಕ್ತಾರ ಅಹ್ಮದ ಮುಲ್ಲಾ ಸ್ವಾಗತಿಸಿದರು. ಶಿಕ್ಷಕ ರಫೀಕ‌ ಮುಲ್ಲಾ ನಿರೂಪಿಸಿದರು.