ಮಾತೃಭಾಷೆ ಬಿಟ್ಟು ಬದುಕುವ ಸ್ಥಿತಿ ಸರಿಯಲ್ಲ: ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ

| Published : May 04 2025, 01:32 AM IST

ಮಾತೃಭಾಷೆ ಬಿಟ್ಟು ಬದುಕುವ ಸ್ಥಿತಿ ಸರಿಯಲ್ಲ: ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಈಗ ಇಂಗ್ಲಿಷ್‌ ಕಲಿಕೆ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳು ತಲೆಯತ್ತಿ ಕನ್ನಡ ಮಾಧ್ಯಮ ಶಾಲೆಗಳು ಗೌಣವಾಗುವ ವಾತಾವರಣ ನಿರ್ಮಾಣವಾಗುತ್ತಿದೆ.

ಹಾನಗಲ್ಲ: ಭಾಷೆಗೆ ಮೇಲು ಕೀಳಿಲ್ಲ. ವ್ಯವಹಾರ ಅಧ್ಯಯನ ಹಾಗೂ ಉದ್ಯೋಗಕ್ಕಾಗಿ ಅಗತ್ಯವಿರುವ ಯಾವುದೇ ಭಾಷೆಯನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ ಮಾತೃ ಭಾಷೆಯನ್ನು ಬಿಟ್ಟು ಬದುಕುವ ಮನೋಸ್ಥಿತಿಯಿಂದ ದೂರವಿರಬೇಕು ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.ಶುಕ್ರವಾರ ಇಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಒಂದು ತಿಂಗಳ ಕಾಲ ನಡೆದ ಸ್ಪೋಕನ್ ಇಂಗ್ಲಿಷ್ ತರಬೇತಿ ಸಮಾರೋಪ ಮಾತುಗಳನ್ನಾಡಿದ ಅವರು, ಈಗ ಇಂಗ್ಲಿಷ್‌ ಕಲಿಕೆ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳು ತಲೆಯತ್ತಿ ಕನ್ನಡ ಮಾಧ್ಯಮ ಶಾಲೆಗಳು ಗೌಣವಾಗುವ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ ಇದೆಲ್ಲದರ ನಡುವೆ ಹಳ್ಳಿಯ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಅತ್ಯುತ್ತಮ ಶೈಕ್ಷಣಿಕ ಸಾಧನೆಯನ್ನು ಸಾಧಿಸಿದ್ದಾರೆ. ಭಾಷೆ ನಮ್ಮ ಸಂವಹನ ಮಾಧ್ಯಮವಷ್ಟೆ. ಮಾತೃಭಾಷೆ ಮೂಲಕ ನಮ್ಮ ಸಂಸ್ಕೃತಿ ಹಾಗೂ ಭಾಷೆಯ ಪ್ರೀತಿಯನ್ನು ಹೊಂದಿರುತ್ತೇವೆ. ಮಾತೃ ಭಾಷೆಯನ್ನು ಪ್ರೀತಿಸೋಣ. ಇತರ ಭಾಷೆಗಳನ್ನು ಗೌರವಿಸೋಣ ಎಂದರು.ರೋಶನಿ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಸಿಸ್ಟರ್ ರೇಷ್ಮಾ ಮಾತನಾಡಿ, ಸಧ್ಯದ ಸಂಧರ್ಭದಲ್ಲಿ ಶಾಲಾ ಶಿಕ್ಷಣಕ್ಕೆ ಹಾಗೂ ವ್ಯವಹಾರಿಕವಾಗಿ ಇಂಗ್ಲಿಷ್‌ ಅನಿವಾರ್ಯ ಅನ್ನುವಂತಿದೆ. ಇಲ್ಲಿ ಸ್ಪೋಕನ್‌ ಇಂಗ್ಲಿಷ್ ತರಬೇತಿ ಪಡೆದ ವಿದ್ಯಾರ್ಥಿಗಳು ಇದನ್ನು ನಿರಂತರವಾಗಿ ಅಧ್ಯಯನ ಮಾಡುವ ಮೂಲಕ ಇಂಗ್ಲಿಷ್‌ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂದರು.ರೋಶನಿ ಸಂಯೋಜಕ ಕಲ್ಲಪ್ಪ ನಾಯ್ಕರ ಮಾತನಾಡಿ, ನಮ್ಮರೋಶನಿ ಸಮಾಜ ಸೇವಾ ಸಂಸ್ಥೆ ಸಾಮಾಜಿಕ, ಶೈಕ್ಷಣಿಕ ತರಬೇತಿಗಳ ಜತೆಗೆ ಆರ್ಥಿಕ ಅಭಿವೃದ್ಧಿಗೂ ಬೇಕಾಗುವ ಮಾರ್ಗದರ್ಶನ ನೀಡುತ್ತದೆ. ನಿರಂತರವಾಗಿ ಸಮಾಜ ಸೇವೆ ನಮ್ಮಗುರಿ. ಮುಂದಿನ ವರ್ಷ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಸ್ಪೋಕನ್‌ ಇಂಗ್ಲಿಷ್‌ ವರ್ಗ ನಡೆಸುತ್ತೇವೆ ಎಂದರು.ಜನವೇದಿಕೆ ಮುಖಂಡರಾದ ಕಲೀಂ ಮಾಸನಕಟ್ಟಿ, ಮಂಜುನಾಥ ಕುದರಿ, ಮೋಹನ ಬಸವಂತಕರ ವೇದಿಕೆಯಲ್ಲಿದ್ದರು. ನೀಲಮ್ಮ ಸ್ವಾಗತಿಸಿದರು. ಸಿ. ಚಿರಂತನ ನಿರೂಪಿಸಿದರು. ತೇಜಸ್ವಿನಿ ವಂದಿಸಿದರು.ಲಯನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶೇ. 95.45 ಫಲಿತಾಂಶ

ರಾಣಿಬೆನ್ನೂರು: ಕಳೆದ ಮಾರ್ಚ್/ಏಪ್ರಿಲ್ ತಿಂಗಳಿನಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಲಯನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶೇ. 95.45 ಫಲಿತಾಂಶ ಲಭಿಸಿದೆ.11 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 30 ಪ್ರಥಮ ಶ್ರೇಣಿ, 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಬನಶ್ರೀ ಲಕ್ಷ್ಮೇಶ್ವರ 618(ಶೇ. 98.88) ಶಾಲೆಗೆ ಪ್ರಥಮ, ಸಿರಿ ಅಜ್ಜೇವಡಿಮಠ 616(ಶೇ. 98.56) ದ್ವಿತೀಯ, ಈಶ್ವರಿ ಚಕ್ರಸಾಲಿ 612(ಶೇ.97.92) ತೃತೀಯ ಸ್ಥಾನ ಗಳಿಸಿದ್ದಾರೆ.