ಬೀರೂರು: ಕಡೂರು ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ 25 ಅಂಗನವಾಡಿ ಕೇಂದ್ರಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಎಲ್‌.ಕೆ.ಜಿ ಮತ್ತು ಯಕೆಜಿ ತರಗತಿಗಳನ್ನು ಆರಂಭಿಸಲು ಅನುಮೋದನೆ ದೊರೆತಿದೆ ಎಂದು ತಾಲೂಕು ಶಿಶುಕಲ್ಯಾಣ ಅಭಿವೃದ್ಧಿ ಅಧಿಕಾರಿ ಶಿವಪ್ರಕಾಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಬೀರೂರು: ಕಡೂರು ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ 25 ಅಂಗನವಾಡಿ ಕೇಂದ್ರಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಎಲ್‌.ಕೆ.ಜಿ ಮತ್ತು ಯಕೆಜಿ ತರಗತಿಗಳನ್ನು ಆರಂಭಿಸಲು ಅನುಮೋದನೆ ದೊರೆತಿದೆ ಎಂದು ತಾಲೂಕು ಶಿಶುಕಲ್ಯಾಣ ಅಭಿವೃದ್ಧಿ ಅಧಿಕಾರಿ ಶಿವಪ್ರಕಾಶ್ ತಿಳಿಸಿದರು.

ಬೀರೂರಿನ ಶಿವಾಜಿನಗರದ ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ತರಗತಿ ಉದ್ಘಾಟಿಸಿ ಮಾತನಾಡಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತರಲ್ಲಿ ಅನೇಕರು ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ತರಬೇತಿ ನೀಡಿ ಮಾಂಟೇಸರಿ ಶಾಲೆ ಬಗ್ಗೆ ಹೆಚ್ಚಿನ ಜ್ಞಾನವನ್ನು ನೀಡಿ ಅವರಲ್ಲಿರುವ ಸಾಮರ್ಥ್ಯದ ಬಳಕೆಯ ಮೂಲಕ ಎಲ್ಕೆಜ. ಯುಕೆಜಿ ತರಗತಿ ನಡೆಸಲು ಉದ್ದೇಶಿಸಲಾಗಿದೆ. ಕಡೂರು ತಾಲ್ಲೂಕಿನಲ್ಲಿ 462 ಅಂಗನವಾಡಿ ಕೇಂದ್ರಗಳಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೇಸರಿ ಶಾಲೆಗಳನ್ನು ಆರಂಭಿಸ ಲಾಗುವುದು ಎಂದರು.

ಈ ತರಗತಿಗಳನ್ನು ನಡೆಸಲು ಹೊಸದಾಗಿ ಯಾವುದೇ ಶಿಕ್ಷಕರನ್ನು ನೇಮಕ ಮಾಡಿಲ್ಲ. ಈಗಿರುವ ಅಂಗನವಾಡಿ ಕಾರ್ಯ ಕರ್ತೆಯರಿಗೆ ಹೆಚ್ಚಿನ ತರಬೇತಿ ನೀಡಿ ಅವರ ಮೂಲಕ ತರಗತಿನ್ನು ಆರಂಭಿಸಲಾಗುವುದು. ತಾಲ್ಲೂಕಿನಲ್ಲಿ ಉಡುಗೆರೆ, ಶೆಟ್ಟಿಹಳ್ಳಿ, ಅಣ್ಣಿಗೆರೆ, ಚೌಡಿಪಾಳ್ಯ, ಸಿಂಗಟಗೆರೆ, ಎಸ್.ಮಾದಾಪುರ, ಸೋಮನಹಳ್ಳಿ, ಜೋಡಿತಿಮ್ಮಾಪುರ, ಹೊಗರೇಹಳ್ಳಿ, ದೊಡ್ಡಘಟ್ಟ, ಕಡೂರು, ಬೀರೂರು ಪಟ್ಟಣಗಳು ಸೇರಿದಂತೆ 25 ಅಂಗನವಾಡಿಗಳಲ್ಲಿ ತರಗತಿ ಆರಂಭಗೊಂಡಿದ್ದು, ಮಕ್ಕಳಿಗೆ ಶಿಕ್ಷಣ ನೀಡಲು ಅಗತ್ಯವಿರುವ ಪಠ್ಯಪುಸ್ತಕ ಮತ್ತು ಡಿಜಿಟಲ್ ಮಾದರಿ ಶಿಕ್ಷಣಕ್ಕಾಗಿ ಅಂಗನವಾಡಿ ಸಕ್ತಮ ಯೋಜನೆ ಅಡಿ ಟಿ.ವಿ.ಗಳನ್ನು ವಿತರಿಸಲಾಗಿದೆ. ಪೋಷಕರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಂಗನವಾಡಿ ಶಿಕ್ಷಕಿಯರಾದ ಮುತ್ತುಲಕ್ಷ್ಮಿ, ರೇಖಾ, ಭಾಗ್ಯ, ಪಲ್ಲವಿ, ಸುಜಾತಾ, ರತ್ನಮ್ಮ, ಪೋಷಕರು ಹಾಜರಿದ್ದರು.

18 ಬೀರೂರು 1ಬೀರೂರಿನ ಶಿವಾಜಿನಗರದ ಅಂಗನವಾಡಿ ಕೇಂದ್ರದಲ್ಲಿ ಎಲ್ಕಜಿ, ಯುಕಜಿ ತರಗತಿ ಆರಂಭವಾಯಿತು.