ದೇವನಹಳ್ಳಿ: ಸಹಕಾರ ಸಂಘಗಳು ಸಹಕಾರ ತತ್ವದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಖಾಸಗಿ ಬ್ಯಾಂಕಿಗಿಂತಲೂ ಸಹಕಾರ ಸಂಘಗಳಲ್ಲಿ ಕಡಿಮೆ ದರದಲ್ಲಿ ಸಾಲಗಳನ್ನು ನೀಡಿ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಿತ್ತರಹಳ್ಳಿ ರಮೇಶ್ ತಿಳಿಸಿದರು.
ದೇವನಹಳ್ಳಿ: ಸಹಕಾರ ಸಂಘಗಳು ಸಹಕಾರ ತತ್ವದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಖಾಸಗಿ ಬ್ಯಾಂಕಿಗಿಂತಲೂ ಸಹಕಾರ ಸಂಘಗಳಲ್ಲಿ ಕಡಿಮೆ ದರದಲ್ಲಿ ಸಾಲಗಳನ್ನು ನೀಡಿ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಿತ್ತರಹಳ್ಳಿ ರಮೇಶ್ ತಿಳಿಸಿದರು.
ಪಟ್ಟಣದ ಕಸಬಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಹಮ್ಮಿಕೊಂಡಿದ್ದ ನೂತನ ಬಿಡಿಸಿಸಿ ಬ್ಯಾಂಕ್‌ನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಡಿಸಿಸಿ ಬ್ಯಾಂಕ್‌ನಿಂದ ಕೆಸಿಸಿ ಸಾಲ ೯೮೦ ಕೋಟಿ ನೀಡಿದ್ದೇವೆ. ೧೦೦೦ ಕೋಟಿ ಆಭರಣ ಸಾಲ ನೀಡಿದ್ದೇವೆ. ಮಹಿಳಾ ಸ್ವಸಹಾಯ ಸಂಘಗಳಿಗೆ ೫ರಿಂದ ೧೫ ಲಕ್ಷದವರೆಗೆ ಸಾಲ ನೀಡುತ್ತಿದ್ದೇವೆ. ೭೫ ಪರ್ಸೆಂಟ್ ನಲ್ಲಿ ನಮ್ಮ ಸಹಕಾರ ಸಂಘಗಳಲ್ಲಿ ಆಭರಣ ಸಾಲವನ್ನು ಶೇ.75ರಷ್ಟು ನೀಡುತ್ತಿದ್ದೇವೆ. ಗೃಹ ಸಾಲಕ್ಕೆ ಸರಿಯಾದ ದಾಖಲೆ ನೀಡಿದರೆ ಸಾಲ ನೀಡುತ್ತೇವೆ. ಕುರಿ, ಹಸು, ಕೋಳಿ ಸಾಕಾಣಿಕೆಗಳಿಗೆ ಸಾಲ ಸೌಲಭ್ಯ ನೀಡುತ್ತಿದ್ದೇವೆ ಎಂದು ಹೇಳಿದರು.ದೇವನಹಳ್ಳಿ ತಾಲೂಕಿನಲ್ಲಿ ಸಹಕಾರ ಸಂಘಗಳು ಶೇ.೮೫ರಷ್ಟು ಕಟ್ಟಡ ಹೊಂದಿದೆ. ಕೆಲವು ಸಂಘಗಳು ಸ್ವಂತ ಕಟ್ಟಡವನ್ನು ಹೊಂದಬೇಕಾಗಿದೆ. ದೇವನಹಳ್ಳಿ ಕಸಬಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ನಿವೇಶನ ಮಂಜೂರು ಮಾಡಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಬಿಡಿಸಿಸಿ ಬ್ಯಾಂಕ್ ಸಹಕಾರ ನೀಡಲಾಗುವುದು. ನಿಮ್ಮ ಸಹಕಾರ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಾಲು ಉತ್ಪಾದಕ ಸಹಕಾರ ಸಂಘಗಳು ಸಹ ಬಿಡಿಸಿಸಿ ಬ್ಯಾಂಕ್ ನಲ್ಲಿ ಖಾತೆ ತೆರೆದರೆ ಅನುಕೂಲವಾಗುತ್ತದೆ ಎಂದು ಹೇಳಿದರು.
ದೇವನಹಳ್ಳಿ ಕಸಬಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎನ್.ರಘು ಮಾತನಾಡಿ, ಸಹಕಾರ ಸಂಘಕ್ಕೆ ಜಾಗ ಗುರುತಿಸಿ ಈ ವರ್ಷದಲ್ಲಿ ಕಟ್ಟಡ ನಿರ್ಮಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಯಪಾ ಅಧ್ಯಕ್ಷರೊಂದಿಗೆ ಚರ್ಚಿಸಿ ಜಾಗ ಮಂಜೂರು ಮಾಡಿಸಲಾಗುವುದು ಎಂದು ಹೇಳಿದರು.ಈ ವೇಳೆ ಕಸಬಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷ ಸುನಿಲ್ ಕುಮಾರ್, ನಿರ್ದೇಶಕರಾದ ವೇಣುಗೋಪಾಲ್, ಗೋಕರೆ ಗೇಟ್ ಮಂಜುನಾಥ್, ಎಸ್ ಗೋಪಾಲ್, ಸೊಸೈಟಿ ರಾಜಣ್ಣ, ನರಸಿಂಹ ಮೂರ್ತಿ, ಜಿ.ಸಿ.ಮಂಜುನಾಥ್, ಗಾಯತ್ರಿದೇವಿ, ಮಂಜುಳಾ, ಎನ್.ರಾಜು, ಕೆ.ಅನಿಲ್ ಕುಮಾರ್, ಸಿಇಒ ಎನ್.ವೆಂಕಟೇಶ್, ಲೆಕ್ಕಿಗ ರಾಜೇಶ್, ಸಹಾಯಕ ವಿ.ಸತೀಶ್ ಇತರರಿದ್ದರು.
(ಫೋಟೋ ಕ್ಯಾಫ್ಷನ್)ದೇವನಹಳ್ಳಿ ಪಟ್ಟಣದ ಕಸಬಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಹಮ್ಮಿಕೊಂಡಿದ್ದ ಬಿಡಿಸಿಸಿ ಬ್ಯಾಂಕ್ ನೂತನ ಉಪಾಧ್ಯಕ್ಷ ಹಿತ್ತರಹಳ್ಳಿ ರಮೇಶ್ ಅವರನ್ನು ಸಂಘದ ಅಧ್ಯಕ್ಷ ಎನ್.ರಘು ಅಭಿನಂದಿಸಿದರು.