ಸಹಕಾರಿ ಕ್ಷೇತ್ರದಲ್ಲಿ ಸಾಲ ಮರುಪಾವತಿ ದೊಡ್ಡ ಪಿಡುಗಾಗಿದೆ-ಮಾಳಗಿ

| Published : Sep 20 2025, 01:01 AM IST

ಸಾರಾಂಶ

ಸಹಕಾರಿ ಕ್ಷೇತ್ರದಲ್ಲಿ ಹಣಕಾಸು ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನ ನೀಡುವ ಜನರಿಗೆ ಅನುಕೂಲವಾದ ವ್ಯವಹಾರ ಕೇಂದ್ರಗಳಾಗಿದ್ದವು. ಸಹಕಾರಿ ಕ್ಷೇತ್ರ ಉತ್ತಮವಾಗಿ ನಡೆಯಬೇಕೆಂದರೆ ಗ್ರಾಹಕರು ಸಾಲ ಮರುಪಾವತಿ, ಠೇವಣಿ ಇತ್ಯಾದಿಗಳ ಬಗ್ಗೆ ಆದ್ಯತೆ ನೀಡಿದರೆ ಸಹಕಾರಿ ಕ್ಷೇತ್ರ ಬೆಳವಣಿಗೆಯಾಗಲು ಸಾಧ್ಯ ಎಂದು ಪಿಕಾರ್ಡ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಂ.ಎನ್.ಮಾಳಗಿ ಹೇಳಿದರು.

ಲಕ್ಷ್ಮೇಶ್ವರ:ಸಹಕಾರಿ ಕ್ಷೇತ್ರದಲ್ಲಿ ಹಣಕಾಸು ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನ ನೀಡುವ ಜನರಿಗೆ ಅನುಕೂಲವಾದ ವ್ಯವಹಾರ ಕೇಂದ್ರಗಳಾಗಿದ್ದವು. ಸಹಕಾರಿ ಕ್ಷೇತ್ರ ಉತ್ತಮವಾಗಿ ನಡೆಯಬೇಕೆಂದರೆ ಗ್ರಾಹಕರು ಸಾಲ ಮರುಪಾವತಿ, ಠೇವಣಿ ಇತ್ಯಾದಿಗಳ ಬಗ್ಗೆ ಆದ್ಯತೆ ನೀಡಿದರೆ ಸಹಕಾರಿ ಕ್ಷೇತ್ರ ಬೆಳವಣಿಗೆಯಾಗಲು ಸಾಧ್ಯ ಎಂದು ಪಿಕಾರ್ಡ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಂ.ಎನ್.ಮಾಳಗಿ ಹೇಳಿದರು.

ಪಟ್ಟಣದ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಗುರುವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ವರದಿ ವಾಚನ ಮಾಡಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರವನ್ನು ಬಲಪಡಿಸುವಲ್ಲಿ ಸಾಲ ಮರುಪಾವತಿಯ ಹೆಚ್ಚಳ ಅವಶ್ಯವಾಗಿದೆ. ಸಾಲ ತೆಗೆದುಕೊಂಡ ವ್ಯಕ್ತಿಗಳು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದಲ್ಲಿ ಬೇರೊಬ್ಬರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ಸರ್ಕಾರ ಸಹಕಾರಿ ರಂಗದಲ್ಲಿನ ಸಾಲ ನೀಡುವಲ್ಲಿ ಕೆಲ ಮಾರ್ಗ ಸೂಚಿ ರೂಪಿಸಿದ್ದು, ಆ ವಲಯಗಳಿಗೆ ಮಾತ್ರ ಸಾಲ ನೀಡಬಹುದಾಗಿದೆ. ರೈತರು ಮರುಪಾವತಿ ಮಾಡುವ ನಿಟ್ಟಿನಲ್ಲಿ ಮುಂದಾದರೆ ಬ್ಯಾಂಕ್ ಮುಂಚೂಣಿಯಲ್ಲಿ ನಿಲ್ಲುವಂತಾಗುತ್ತದೆ. ಪ್ರಸಕ್ತ ವರ್ಷ ಬ್ಯಾಂಕ್ ಸುಮಾರು ರು. ೭೬ ಲಕ್ಷಕ್ಕೂ ಅಧಿಕ ಹಾನಿಯಲ್ಲಿದ್ದು, ಕೂಡಿಬಿದ್ದ ಹಾನಿ ೭ ಕೋಟಿ ೬೪ ಲಕ್ಷದಷ್ಟಾಗುತ್ತದೆ. ಅದಕ್ಕಾಗಿ ಸಾಲ ಮರುಪಾವತಿ ಮಾಡಿ ಬ್ಯಾಂಕ್ ಬೆಳೆಸಿ ಎಂದು ಮನವಿ ಮಾಡಿದರು.ಈ ವೇಳೆ ಬ್ಯಾಂಕಿನ ಸದಸ್ಯರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಮಣ್ಣ ಡಾಣಗಲ್ ಅವರು ಬ್ಯಾಂಕಿಗೆ ನೂತನ ನಿರ್ದೇಶಕರು ಆಯ್ಕೆಯಾಗಿದ್ದು ಅವರನ್ನು ಸದಸ್ಯರಿಗೆ ಪರಿಚಯ ಮಾಡಿಕೊಡಿ ಎಂದು ತಿಳಿಸಿದರು. ಈ ವೇಳೆ ಮತ್ತೋರ್ವ ಸದಸ್ಯ ವಿರೂಪಾಕ್ಷಪ್ಪ ಅಣ್ಣಿಗೇರಿ, ಮತ್ತು ಶಿವರಾಜಗೌಡ ಪಾಟೀಲ ಮಾತನಾಡಿ, ಬ್ಯಾಂಕ್ ಚುನಾವಣೆ ವೇಳೆ ಮತದಾರರ ಯಾದಿ ಚುನಾವಣೆ ಘೋಷಣೆಯಾಗುವ ಸಂದರ್ಭದಲ್ಲಿ ಪ್ರಕಟಿಸುವದು, ಮತದಾರ ಯಾದಿ ತಯಾರಿಸುವಾಗ ಅದರಲ್ಲಿ ಬ್ಯಾಂಕಿನ ೨ ಅಥವಾ ೩ ಸಾಮಾನ್ಯ ಸಭೆಗಳಿಗೆ ಹಾಜರಾದವರಿಗೆ ಮಾತ್ರ ಎನ್ನುವ ನಿಯಮ ತೆಗೆದು ಹಾಕಿ. ಮತದಾರ ಪಟ್ಟಿಯಿಂದ ವಂಚಿತವಾದವರು ಕೋರ್ಟ ಮೆಟ್ಟಿಲೇರಿ ಅರ್ಹ ಮತದಾರರಾಗಿ ಬಂದು ಮತಚಲಾಯಿಸುವಂತಾಗುವ ಪ್ರಸಂಗಗಳು ಬರದಂತೆ ನೋಡಬೇಕು ಎಂದ ಅವರು ಸಾಲ ವಸೂಲಾತಿಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವದಕ್ಕೆ ಬ್ಯಾಂಕಿನ ಸಿಬ್ಬಂದಿಗಳ ಕೊರತೆ ಇದ್ದು, ಅದನ್ನು ನೀಗಿಸಿ ಸಾಲ ವಸೂಲಾತಿ ಮಾಡಿದರೆ ಬ್ಯಾಂಕ್ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯ ವಕ್ತಪಡಿಸಿದರು.ಸಭೆಯಲ್ಲಿ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕ ಬಸವರಾಜ ಜಾಲಗಾರ, ನೀಲಪ್ಪ ಹತ್ತಿ, ಜಗದೀಶ ಜೋಗೇರ, ಮಂಜುನಾಥ ಕೋಳಿವಾಡ, ಪರಶುರಾಮ ಕಟಗಿ, ಬಸನಗೌಡ ಪಾಟೀಲ, ಮಂಜುನಾಥ ಶಂಕಿನದಾಸರ, ಮಧುಚಂದ್ರ ಮರಡ್ಡಿ, ವಸಂತ ಜಗ್ಗಲರ, ಫಕ್ಕೀರಪ್ಪ ಇಚ್ಚಂಗಿ, ವಿನೋದರಡ್ಡಿ ಅಳವಂಡಿ, ಆಡಳಿತಾಧಿಕಾರಿ ಕೆ.ಸಿ. ಕೂಸನೂರಮಠ ಇದ್ದರು. ಎ.ವೈ. ಬಾಕಳೆ ಕಾರ್ಯಕ್ರಮ ನಿರ್ವಹಿಸಿದರು.