ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಕೆ. ಎನ್. ರಾಜಣ್ಣನವರು ಮೃತ ರೈತರ ಸಾಲ ಮನ್ನಾ ಯೋಜನೆಯನ್ನು ರೂಪಿಸಿದ್ದು ಇದು ದೇಶಕ್ಕೆ ಮಾದರಿ

ತಿಪಟೂರು: ಸಾಲಗಾರ ರೈತ ಮೃತಪಟ್ಟ ನಂತರವೂ ಋಣಭಾರದಿಂದ ಮುಕ್ತವಾಗಬೇಕೆಂಬ ಯೋಚನೆಯೊಂದಿಗೆ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಕೆ. ಎನ್. ರಾಜಣ್ಣನವರು ಮೃತ ರೈತರ ಸಾಲ ಮನ್ನಾ ಯೋಜನೆಯನ್ನು ರೂಪಿಸಿದ್ದು ಇದು ದೇಶಕ್ಕೆ ಮಾದರಿಯಾಗಿದೆ. ಇಂತಹ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕೆಂದು ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷರಾದ ಕೆ ಆರ್ ದೇವರಾಜು ತಿಳಿಸಿದರು.

ಕರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೬ ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಡವರ ರೈತರ ಅಭಿವೃದ್ಧಿಗಾಗಿ ಮಾಜಿ ಸಹಕಾರ ಸಚಿವ ಕೆ ಎನ್ ರಾಜಣ್ಣ ಹಲವಾರು ಯೋಜನೆಗಳನ್ನು ರೂಪಿಸಿದ್ದು ಮೃತರ ಸಾಲ ಮನ್ನಾ ಯೋಜನೆಯನ್ನು ಮತ್ತೆ ಜಾರಿಗೆ ತಂದಿರುವುದು ಕೃಷಿ ಸಹಕಾರ ಸಂಘಗಳು ಹಾಗೂ ರೈತರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೈತರಿಗೆ ಹೊಸದಾಗಿ ಕೆ ಸಿ ಸಿ ಸಾಲ ನೀಡಬೇಕೆಂದು ಬ್ಯಾಂಕಿನ ಅಧ್ಯಕ್ಷರನ್ನು ಕೇಳಿಕೊಳ್ಳುವುದಾಗಿ ತಿಳಿಸಿದರು.

ಈ ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷರಾದ ನ್ಯಾಕೆನಹಳ್ಳಿ ವೀರಣ್ಣ ನಿರ್ದೇಶಕರಾದ ಶಿವಮೂರ್ತಿ ಬಸವರಾಜು ಉಪ್ಪಿನಹಳ್ಳಿ ಜಯಣ್ಣ ಕಟ್ಟೆಹಳ್ಳಿ ದೊಡ್ಡಲಿಂಗಯ್ಯ ಸಿಡ್ಲೆಹಳ್ಳಿ ಜಯಣ್ಣ ಮಲ್ಲೇಶಯ್ಯ ಕೃಷ್ಣಯ್ಯ ಶಿವಕುಮಾರ್ ಹೊನ್ನಯ್ಯ ಭಾರತಿ ಅಮೃತ ಶ್ರೀ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನು ಎಸ್ ಎಂ ಹಾಗೂ ಸಂಘದ ನೌಕರರು ಹಾಜರಿದ್ದರು.