ಸಹಕಾರಿ ಸಂಘಗಳಲ್ಲಿ ಸುಲಭವಾಗಿ ಸಾಲ ಪಡೆಯಬಹುದು. ನಂಬಿಕೆ, ಸರಳ ಷರತ್ತುಗಳ ಅಡಿಯಲ್ಲಿ ಸಹಕಾರಿ ಸಂಘಗಳು ಸಾಮಾನ್ಯ ಜನರಿಗೆ ಸಾಲ ನೀಡುತ್ತವೆ. ಸದಸ್ಯರು ಸಾಲ ಸರಿಯಾದ ಸಮಯಕ್ಕೆ ವಾಪಸ್ ನೀಡುವುದರಿಂದ ಸಂಘಕ್ಕೆ ಲಾಭ ಹಾಗೂ ಬೇರೆಯವರಿಗೂ ಸಾಲ ನೀಡಲು ಅನುಕೂಲವಾಗುತ್ತದೆ.

ಕನ್ನಡಪ್ರಭವಾರ್ತೆ ತಿಪಟೂರು

ಸಹಕಾರಿ ಸಂಘಗಳು ಸಾಮಾನ್ಯ ಜನತೆ ಆಶೋತ್ತರ ಸುಲಭವಾಗಿ ಈಡೇರಿಸುವುದರಿಂದ ಸಂಘಗಳು ಆರ್ಥಿಕವಾಗಿ ಪ್ರಬಲವಾಗಿ ಬೆಳೆಯಬೇಕೆಂದು ನಗರದ ಶ್ರೀ ವಿನಾಯಕ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಅರುಣ್‌ಕುಮಾರ್ ತಿಳಿಸಿದರು.

ನಗರದ ದೊಡ್ಡಪೇಟೆ ಶ್ರೀ ಬಸವೇಶ್ವರ ದೇವಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಘದ ೨೦೨೫-೨೬ನೆ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರಿ ಸಂಘಗಳಲ್ಲಿ ಸುಲಭವಾಗಿ ಸಾಲ ಪಡೆಯಬಹುದು. ನಂಬಿಕೆ, ಸರಳ ಷರತ್ತುಗಳ ಅಡಿಯಲ್ಲಿ ಸಹಕಾರಿ ಸಂಘಗಳು ಸಾಮಾನ್ಯ ಜನರಿಗೆ ಸಾಲ ನೀಡುತ್ತವೆ. ಸದಸ್ಯರು ಸಾಲ ಸರಿಯಾದ ಸಮಯಕ್ಕೆ ವಾಪಸ್ ನೀಡುವುದರಿಂದ ಸಂಘಕ್ಕೆ ಲಾಭ ಹಾಗೂ ಬೇರೆಯವರಿಗೂ ಸಾಲ ನೀಡಲು ಅನುಕೂಲವಾಗುತ್ತದೆ. ಸಂಘ ೬೨ವರ್ಷಗಳಿಂದ ಅತ್ಯುತ್ತಮ ಸೇವೆ ಸಲ್ಲಸಿಸುತ್ತಿದ್ದು ಈ ಬಾರಿ ೬ಲಕ್ಷಕ್ಕೂ ಹೆಚ್ಚು ನಿವ್ವಳ ಲಾಭ ಗಳಿಸಿದೆ. ನಮ್ಮ ಸಂಘದಿಂದ ಟೈಟಾನ್, ಸೊನಾಟ, ಫಾಸ್ಟ್ರ್ಯಾಕ್ ಹಾಗೂ ಟೈಮೆಕ್ಸ್ ವಾಚುಗಳ ಮಾರಾಟ ಮಾಡುತ್ತಿದ್ದು ಇದರಿಂದ ಸಂಘಕ್ಕೆ ಅನುಕೂಲವಾಗಿದೆ. ಸಂಘದಿಂದ ಸದಸ್ಯರಿಗೆ ನಗದು, ಸ್ಥಿರಾಸ್ತಿ ಸಾಲಗಳನ್ನು ನಿಡುತ್ತಿದ್ದು ಇದರ ಉಪಯೋಗ ಪಡೆಯಬೇಕು. ಈ ಬಾರಿ ಸದಸ್ಯರಿಗೆ ಶೇ.೧೫ ಡಿವಿಡೆಂಟ್ ನಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಟಿ.ವಿ. ವಿಶಾಲ್, ಆಡಳಿತ ಮಂಡಳಿ ನಿರ್ದೇಶಕರಾದ ವರುಣ್, ಬಿ.ಸಿ. ರವಿಶಂಕರ್, ಅನೂಪ್‌ಭೂಷಣ್ ಡಿ.ಎನ್., ಬಿ.ಎನ್. ಅಜಯ್, ಸ್ವರ್ಣಲತ ಎ.ಎಸ್., ದೀಪ್ತಿಅಮಿತ್, ಜ್ಯೋತಿಪ್ರಕಾಶ್ ಹಾಗೂ ಸರ್ವಸದಸ್ಯರು ಹಾಜರಿದ್ದರು.