ನಾವು ಪ್ರತಿನಿತ್ಯ ನಮ್ಮ ಆರೋಗ್ಯಕ್ಕಾಗಿ ವಾಕಿಂಗ್, ರನ್ನಿಂಗ್ ಮತ್ತು ಯೋಗ ಮಾಡಬೇಕು. ಇತ್ತೀಚೆಗೆ ನಾವು ತಿನ್ನುವ ಆಹಾರದರಿಂದ ಆರೋಗ್ಯ ಸಂಪೂರ್ಣ ಹಾಳಾಗುತ್ತಿದೆ.
ಕುಕನೂರು: ನಮ್ಮ ಭಾಗದಲ್ಲಿ ಶಿಕ್ಷಣ ಪಡೆದು ಬೇರೊಂದು ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಸ್ಥಳೀಯ ಜನರಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ನಾಗರಾಜ ಬೆಣಕಲ್ ಹೇಳಿದರು.
ಪಟ್ಟಣದ ಜೈನ್ ಮಠದಲ್ಲಿ ಭಾನುವಾರ ಜರುಗಿದ ಭವರ್‌ಲಾಲ್ ಜೈನ್ ಸ್ಮರಣಾರ್ಥವಾಗಿ ಕೀಲು ನೋವು ಮತ್ತು ಸಂಧಿವಾತ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಾಲೂಕಿನಲ್ಲಿ ಅನೇಕರು ವೈದ್ಯರಾಗಿ ದೇಶ, ವಿದೇಶದಲ್ಲಿ ಉನ್ನತ ವೈದ್ಯ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯ ಪ್ರದೇಶದಲ್ಲಿರುವ ಬಡ ಜನರಿಗೆ ಇದು ನಮ್ಮ ಊರು, ನಮ್ಮ ಜನರು ಅವರಿಗೆ ನಾವು ವರ್ಷದಲ್ಲಿ ಅವರ ಕುಟುಂಬದ ಹಿರಿಯ ಹೆಸರಲ್ಲಿ ಆರೋಗ್ಯ ಸೇವೆ ಮಾಡಿಕೊಂಡು ಹೋದರೆ ಇಲ್ಲಿನ ಜನರು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿಯಂತಹ ನಗರ ಪ್ರದೇಶಕ್ಕೆ ಹೋಗಿ ಲಕ್ಷಾಂತರ ಖರ್ಚು ಮಾಡಲು ಸಾಧ್ಯವಾಗದ ಬಡವರಿಗೆ ಇಂತಹ ಉಚಿತ ಆರೋಗ್ಯ ಸೇವೆಯಿಂದ ಅನುಕೂಲವಾಗುತ್ತದೆ. ಜೈನ್ ಸಮುದಾಯವು ಸದಾ ಬಡವರಿಗಾಗಿ ವರ್ಷಪೂರ್ತಿಯಾಗಿ ಒಂದಿಲ್ಲ ಬಂದು ಹೆಸರಿನಲ್ಲಿ ಸೇವೆ ಮಾಡಿಕೊಂಡು ಬರುತ್ತಾರೆ ಮತ್ತು ಅವರು ಇತರೆ ಸಮಾಜಕ್ಕೆ ಹೋಲಿಸಿದರೆ ಶಾಂತಿ ಪ್ರೀಯರು ಅವರ ಸೇವಾ ಮನೋಭಾವ ಎಲ್ಲರೂ ಅನುಸರಿಸಬೇಕೆಂದು ಹೇಳಿದರು.ತಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪೂರಮಠ ಮಾತನಾಡಿ, ನಾವು ಪ್ರತಿನಿತ್ಯ ನಮ್ಮ ಆರೋಗ್ಯಕ್ಕಾಗಿ ವಾಕಿಂಗ್, ರನ್ನಿಂಗ್ ಮತ್ತು ಯೋಗ ಮಾಡಬೇಕು. ಇತ್ತೀಚೆಗೆ ನಾವು ತಿನ್ನುವ ಆಹಾರದರಿಂದ ಆರೋಗ್ಯ ಸಂಪೂರ್ಣ ಹಾಳಾಗುತ್ತಿದೆ. ಅವರಿವರ ಬಗ್ಗೆ ಮಾತನಾಡುವ ಬದಲು ನಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕೆಂದರು.
ಮಹಾವೀರ ಜೈನ್ ಅಧ್ಯಕ್ಷತೆ ವಹಿಸಿದ್ದರು, ಅಂಜುಮನ್ ಕಮಿಟಿಯ ಅಧ್ಯಕ್ಷ ರಶೀದ್‌ಸಾಬ ಹಣಜಗಿರಿ, ಡಾ. ವೀಕ್ರಂರಾಜ ಜೈನ್, ಡಾ. ಶೇಲಜ್, ಜಯವರ್ಧನ್, ಭಾನುಪ್ರಕಾಶ, ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಸವಂತ್ ರಾಜ ಜೈನ್, ವರ್ಧನಮಾನ ತಾಲೇಡಾ ಸೇರಿದಂತೆ ನೂರಾರು ಹಿರಿಯರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು.