ಶಾಲೆ ವಿಲೀನ ವಿರೋಧಿಸಿ ಬೀಗ ಜಡಿದು ಪ್ರತಿಭಟನೆ

| Published : Feb 16 2024, 01:45 AM IST

ಸಾರಾಂಶ

ಲೋಕಾಪುರ: ಎಲ್‌ಪಿಎಸ್ ಶಾಲೆಯನ್ನು ಎಚ್‌ಪಿಎಸ್ ಶಾಲೆಯೊಂದಿಗೆ ವಿಲೀನ ಮಾಡಿದ್ದನ್ನು ವಿರೋಧಿಸಿ ಗ್ರಾಮಸ್ಥರು ಗುರುವಾರ ಸಮೀಪದ ಲಕ್ಷಾನಟ್ಟಿ ಎಲ್‌ಪಿಎಸ್ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಗುರುವಾರ ನಡೆದಿದೆ. ಎಲ್‌ಪಿಎಸ್ ಶಾಲೆಯಲ್ಲಿ ಮೂಲ ಸೌಕರ್ಯಗಳು ಹಾಗೂ ವಿದ್ಯಾರ್ಥಿಗಳ ದಾಖಲಾತಿ ಸೇರಿ ಶಿಕ್ಷಕರ ಕೊರತೆಯೂ ಇಲ್ಲ, ಆದರೂ ಎಚ್‌ಪಿಎಸ್ ಶಾಲೆಗೆ ವಿಲೀನಗೊಳಿಸುವುದನ್ನು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಲೋಕಾಪುರ

ಎಲ್‌ಪಿಎಸ್ ಶಾಲೆಯನ್ನು ಎಚ್‌ಪಿಎಸ್ ಶಾಲೆಯೊಂದಿಗೆ ವಿಲೀನ ಮಾಡಿದ್ದನ್ನು ವಿರೋಧಿಸಿ ಗ್ರಾಮಸ್ಥರು ಗುರುವಾರ ಸಮೀಪದ ಲಕ್ಷಾನಟ್ಟಿ ಎಲ್‌ಪಿಎಸ್ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಗುರುವಾರ ನಡೆದಿದೆ.

ಎಲ್‌ಪಿಎಸ್ ಶಾಲೆಯಲ್ಲಿ ಮೂಲ ಸೌಕರ್ಯಗಳು ಹಾಗೂ ವಿದ್ಯಾರ್ಥಿಗಳ ದಾಖಲಾತಿ ಸೇರಿ ಶಿಕ್ಷಕರ ಕೊರತೆಯೂ ಇಲ್ಲ, ಆದರೂ ಎಚ್‌ಪಿಎಸ್ ಶಾಲೆಗೆ ವಿಲೀನಗೊಳಿಸುವುದನ್ನು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿದ್ದಾರೆ.

ಗ್ರಾಮಸ್ಥರು, ವಿದ್ಯಾರ್ಥಿಗಳು, ಪಾಲಕರು ಎಚ್‌ಪಿಎಸ್ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಡಿಮೆ ದಾಖಲಾತಿ ಇರುವ ಎಚ್‌ಪಿಎಸ್ ಸರ್ಕಾರಿ ಶಾಲೆಗೆ ವಿಲೀನ ಮಾಡಿ ಈ ಮೂಲಕ ಮಾದರಿ ಶಾಲೆ ರಚಿಸುತ್ತೇವೆ ಎಂಬ ನಿಲುವಿನ ಹಿಂದೆ ಶಾಶ್ವತವಾಗಿ ನಮ್ಮ ಶಾಲೆ ಮುಚ್ಚುವ ಹುನ್ನಾರವಿದೆ. ಈ ಅಪಾಯವನ್ನು ನಾವು ಕಡೆಗಣಿಸಲು ಸಾಧ್ಯವಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ನಾವು ಯಾವುದೇ ಕ್ಷಣಕ್ಕೂ ಎಚ್‌ಪಿಎಸ್ ಶಾಲೆಗೆ ಮಕ್ಕಳನ್ನು ಹೋಗಲು ಬಿಡಲ್ಲ. ಇದ್ದ ಶಾಲೆಗೆ ಇನ್ನೂ ಹೆಚ್ಚಿನ ಅನುದಾನ ನೀಡಿ, ವಿದ್ಯಾರ್ಥಿಗಳು ಇಲ್ಲೇ ಕಲಿಯಲು ಪ್ರೋತ್ಸಾಹಿಸಲಾಗುವುದು ಎಂದು ಎಸ್‌ಡಿಎಂಸಿ ಅಧ್ಯಕ್ಷ ಪರಮಾನಂದ ಕನಕಪ್ಪನವರ ಅಭಿಪ್ರಾಯಪಟ್ಟರು. ರಾಜ್ಯ ಹೆದ್ದಾರಿ ಇದ್ದು ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ ಎಂದರು.

ದಂಡಪ್ಪಗೌಡ ಪಾಟೀಲ, ಕಾಂತುಗೌಡ ಪಾಟೀಲ, ಮುದಕಪ್ಪ ಚಿಗರಡ್ಡಿ, ಗುರುನಾಥ ಪಾಟೀಲ, ರಮೇಶ ಪೂಜಾರ, ಕೃಷ್ಣಾ ಮಾಳೇದ, ಪಿಕೆಪಿಎಸ್ ಅಧ್ಯಕ್ಷ ಅರ್ಜುನ ಕೊಪ್ಪದ, ಅರ್ಜುನಗೌಡ ಪಾಟೀಲ, ಮಹಾದೇವಪ್ಪ ಕಿವಡಿ, ಲೋಕಣ್ಣಾ ಹೊಸಮನಿ, ಹಣಮಂತ ಭಜಂತ್ರಿ, ರಾಮಚಂದ್ರ ತುಳಿಸಿಗೇರಿ, ಅರ್ಜುನಪ್ಪ ಚಿಗರಡ್ಡಿ, ತಿಪ್ಪಣ್ಣ ಗದಿಗೆನ್ನವರ ಇದ್ದರು.