ಹರಿಹರ ನ್ಯಾಯಾಲಯದಲ್ಲಿ ಲೋಕ್ ಅದಾಲತ್‌: 69450 ಪ್ರಕರಣ ಇತ್ಯರ್ಥ

| Published : Dec 18 2024, 12:45 AM IST

ಸಾರಾಂಶ

ಹರಿಹರ ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಲೋಕ್ ಅದಾಲತ್‍ನಲ್ಲಿ 69451 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಒಟ್ಟು ₹5,04,75,913 ಮೊತ್ತದ ಪರಿಹಾರ ಘೋಷಿಸಲಾಗಿದೆ.

- ಒಟ್ಟು ₹5,04,75,913 ಕೋಟಿ ಪರಿಹಾರ ಕಲ್ಪಿಸಿ ತೀರ್ಪು - - - ಹರಿಹರ: ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಲೋಕ್ ಅದಾಲತ್‍ನಲ್ಲಿ 69451 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಒಟ್ಟು ₹5,04,75,913 ಮೊತ್ತದ ಪರಿಹಾರ ಘೋಷಿಸಲಾಗಿದೆ. ಇಲ್ಲಿನ ಹಿರಿಯ ಸಿವಿಲ್, ಪ್ರಧಾನ ಸಿವಿಲ್, 1 ಮತ್ತು 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯಗಳಲ್ಲಿನ ಬಾಕಿ ಇರುವ ಪ್ರಕರಣಗಳ ಪೈಕಿ 2743 ಪ್ರಕರಣಗಳ ವಿಚಾರಣೆ ನಡೆದು 1429 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹1,04,36,750 ಮೊತ್ತದ ಪರಿಹಾರ ಘೋಷಿಸಲಾಯಿತು.

ನ್ಯಾಯಾಲಯಗಳ ವ್ಯಾಜ್ಯಪೂರ್ವ 68817 ಪ್ರಕರಣಗಳ ಪೈಕಿ 68021 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹4,00,39,163 ಮೊತ್ತದ ಪರಿಹಾರ ಘೋಷಿಸಲಾಯಿತು. ಪ್ರಭಾರ ಪ್ರಧಾನ ಸಿವಿಲ್ ಹಾಗೂ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ವೀಣಾ ಕೋಳೆಕರ ಅವರು ವಿಚ್ಛೇದನ ಪ್ರಕರಣವೊಂದರಲ್ಲಿ ರಾಜಿ ಸಂಧಾನ ಮೂಲಕ ದಂಪತಿಯನ್ನು ಪುನಃ ದಾಂಪತ್ಯಕ್ಕೆ ಒಂದುಗೂಡಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಪದ್ಮಶ್ರೀ ಮುನ್ನೋಳಿ, ಪ್ರಭಾರ ಪ್ರಧಾನ ಸಿವಿಲ್ ಹಾಗೂ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ವೀಣಾ ಕೋಳೆಕರ ಮತ್ತು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜ್ಯೋತಿ ಅಶೋಕ್ ಪತ್ತಾರ್ ಹಾಗೂ ಹಲವು ಹಿರಿಯ, ಕಿರಿಯ ವಕೀಲರು, ನ್ಯಾಯಾಲಯಗಳ ಸಿಬ್ಬಂದಿ ಭಾಗವಹಿಸಿದ್ದರು.

- - -

-17ಎಚ್‍ಆರ್‍ಆರ್01.ಜೆಪಿಜಿ:

ಹರಿಹರದ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಪದ್ಮಶ್ರೀ ಮುನ್ನೋಳಿ ಪ್ರಕರಣಗಳ ವಿಚಾರಣೆ ನಡೆಸಿದರು.