ನ್ಯಾಯಾಲಯದ ಸಂಕೀರ್ಣದಲ್ಲಿ ಮಾ.8 ರಂದು ಲೋಕಾ ಅದಾಲತ್: ನ್ಯಾ.ಆರ್.ಮಹೇಶ್

| Published : Feb 28 2025, 12:46 AM IST

ಸಾರಾಂಶ

ಪ್ರಸ್ತುತ ನ್ಯಾಯಾಲಯದಲ್ಲಿ145 ಎಂವಿಸಿ ಪ್ರಕರಣಗಳು, 17 ಎಂಎಂಆರ್‌ಡಿ ಪ್ರಕರಣ, 12 ಎಲ್‌ವಿಸಿ ಪ್ರಕರಣ, 115 ವಿಭಾಗದ ದಾವೆ ಪ್ರಕರಣಗಳು, 125 ಇತರೆ ಸಿವಿಲ್ ಪ್ರಕರಣ, 185 ನಿರ್ದಿಷ್ಟ ಪರಿಹಾರಕ್ಕಾಗಿ ದಾವೆ ಪ್ರಕರಣ, 25 ಕ್ರಿಮಿನಲ್ ಪ್ರಕರಣ, 310 ಎನ್‌ಐ ಆಕ್ಟ್ ಪ್ರಕರಣಗಳನ್ನು ಸೇರಿದಂತೆ ಒಟ್ಟು 934 ಪ್ರಕರಣಗಳು ರಾಜೀ ಆಗಲು ಅವಕಾಶ ಇರುವ ಪ್ರಕರಣ ಗುರುತಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಲಯದ ಸಂಕೀರ್ಣದಲ್ಲಿ ಮಾ.8ರಂದು ಲೋಕಾ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಸೂಚನೆಯಂತೆ ಪ್ರತಿವರ್ಷ ನ್ಯಾಯಾಲದಲ್ಲಿ ಬಾಕಿ ಇರುವ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀಸಂದಾನದ ಮೂಲಕ ಇತ್ಯರ್ಥ ಪಡಿಸಿಲು ಲೋಕಾ ಅದಾಲತ್ ನಡೆಸಲಾಗುತ್ತಿದೆ ಎಂದರು.

ಮಾ.8ರಂದು ಪನಡೆಯಲಿರುವ ಲೋಕಾ ಅದಾಲತ್ ದಲ್ಲಿ ಕಕ್ಷಿಧಾರರು, ಸಾರ್ವಜನಿಕರು ಇದರ ಪ್ರಯೋಜನ ಮಾಡಿಕೊಳ್ಳಬೇಕು. ಲೋಕಾ ಅದಾಲತ್‌ನಲ್ಲಿ ರಾಜೀ ಆಗುವಂತಹ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ ಎಂದರು.

ಪ್ರಸ್ತುತ ನ್ಯಾಯಾಲಯದಲ್ಲಿ145 ಎಂವಿಸಿ ಪ್ರಕರಣಗಳು, 17 ಎಂಎಂಆರ್‌ಡಿ ಪ್ರಕರಣ, 12 ಎಲ್‌ವಿಸಿ ಪ್ರಕರಣ, 115 ವಿಭಾಗದ ದಾವೆ ಪ್ರಕರಣಗಳು, 125 ಇತರೆ ಸಿವಿಲ್ ಪ್ರಕರಣ, 185 ನಿರ್ದಿಷ್ಟ ಪರಿಹಾರಕ್ಕಾಗಿ ದಾವೆ ಪ್ರಕರಣ, 25 ಕ್ರಿಮಿನಲ್ ಪ್ರಕರಣ, 310 ಎನ್‌ಐ ಆಕ್ಟ್ ಪ್ರಕರಣಗಳನ್ನು ಸೇರಿದಂತೆ ಒಟ್ಟು 934 ಪ್ರಕರಣಗಳು ರಾಜೀ ಆಗಲು ಅವಕಾಶ ಇರುವ ಪ್ರಕರಣ ಗುರುತಿಸಲಾಗಿದೆ ಎಂದರು.

ಪಂಚಾಯ್ತಿಗಳು, ಪುರಸಭೆಗಳಲ್ಲಿ ನೀರಿನ ಬಿಲ್ ಪಾವತಿ, ಟೆಲಿಫೋನ್ ಬಿಲ್, ವಿದ್ಯುತ್‌ಬಿಲ್, ಹಾಗೂ ಸಣ್ಣಪುಟ್ಟ ಬ್ಯಾಂಕ್‌ ಸಾಲ ವಸೂಲಾತಿ, ಚೆಕ್‌ಬೌನ್ಸ್ ಪ್ರಕರಣಗಳನ್ನು ಸಹ ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು. ಕಳೆದ ಲೋಕಾ ಅದಾಲತ್‌ನಲ್ಲಿ 6908 ಪ್ರಕರಣಗಳ ಪೈಕಿ 233 ಪ್ರಕರಣ ಇತ್ಯರ್ಥ ಪಡಿಸಲಾಗಿದೆ. ಕೋರ್ಟ್‌ನಲ್ಲಿ ದಾವೆ ಹಾಕದ 5186 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲಾಗಿದೆ ಎಂದರು.

ಲೋಕಾ ಅದಾಲತ್‌ನಲ್ಲಿ ಪಾಲ್ಗೊಂಡು ರಾಜಿ ಮಾಡಿಕೊಳ್ಳುವ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯ ಹಾಜರಾತಿ ಅವಶ್ಯಕತೆ ಇರುವುದಿಲ್ಲ. ದೂರುದಾರರು ಬಂದು ರಾಜೀ ಮಾಡಿಕೊಳ್ಳುತ್ತೇವೆ ಎಂದರೆ ಆರೋಪಿ ಗೈರಿನಲ್ಲಿ ರಾಜೀ ಮಾಡಿಕೊಡಲಾಗುವುದು. ಜತೆಗೆ ಲೋಕಾ ಅದಕಾಲ್‌ನಲ್ಲಿ ಭಾಗವಹಿಸುವ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳುವ ಕೆಲಸ ಮಾಡೋದಿಲ್ಲ. ಸಾರ್ವಜನಿಕರು, ಕಕ್ಷೀದಾರರು ಯಾವುದೇ ಆತಂಕ ಇಲ್ಲದೆ ಲೋಕಾಅದಾಲತ್‌ನಲ್ಲಿ ಭಾಗವಹಿಸಬಹುದು ಎಂದರು.

ಲೋಕಾ ಅದಾಲತ್ ಬಗ್ಗೆ ಸಾರ್ವಜನಿಕರಿಗೆ ಅಧಿಕಾರಿಗಳು, ಗ್ರಾಪಂಗಳ ಬ್ಯಾನರ್, ಕರಪತ್ರಗಳನ್ನು ಹಾಕುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಅರಿವು ಮೂಡಿಸಿಕೊಂಡು ಅದಾಲತ್ ಕಾರ್‍ಯಕ್ರಮದಲ್ಲಿ ಪಾಲ್ಗೊಂಡು ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು, ಕಿರಿಯ ಶ್ರೇಣಿ ನ್ಯಾಯಾಧೀಶರಾದ ಬಿ.ಪಾರ್ವತಮ್ಮ, ಕೆ.ಎಸ್.ಕಿಶೋರ್, ಎಂ.ಪದ್ಮ ಪಾಲ್ಗೊಂಡಿದ್ದರು.