ಸಾರಾಂಶ
ಗದಗ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಲೋಕಸಭಾ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಲ್ಲಿನ ಭರವಸೆಗಳಲ್ಲಿ ಶೇಕಡಾ ೯೫% ರಷ್ಟು ಈಡೇರಿಸಲಾಗಿದ್ದು, ಇನ್ನುಳಿದ ೫% ರಷ್ಟು ಭರವಸೆಗಳು ಕಾರ್ಯಗತಗೊಳ್ಳುವ ಪ್ರಕ್ರಿಯಲ್ಲಿರುತ್ತವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂಕಲ್ಪ ಪತ್ರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.೩ನೇ ಬಾರಿ ಬಿಜೆಪಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ೨೦೨೪ರಲ್ಲಿ ಜರುಗುವ ಲೋಕಸಭೆ ಚುನಾವಣೆ ಈ ಬಾರಿ ಸಂಕಲ್ಪ ಪತ್ರವಾಗಿ ಅನುಷ್ಠಾನಗೊಳ್ಳಲಿದೆ. ಎಲ್ಲ ವರ್ಗದ ಜನರ ಜನಾಭಿಪ್ರಯವನ್ನು ಜಿಲ್ಲೆಯಾದ್ಯಂತ ಹಾಗೂ ಗ್ರಾಮಗಳಲ್ಲಿ ಸಲಹೆಗಳನ್ನು ಪಡೆದುಕೊಳ್ಳಲು ಪ್ರಕ್ರಿಯೆ ಪ್ರಾರಂಭವಾಲಿದ್ದು, ಸಾರ್ವಜನಿಕರು ಸಲಹೆ ಪೆಟ್ಟಿಗೆಯ ಮೂಲಕ ಅಭಿಪ್ರಾಯ ನೀಡಬಹುದು ಹಾಗೂ ೯೦೯೦೯೦೨೦೨೪ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಅಥವಾ ಎಸ್‌ಎಂಎಸ್ ಮೂಲಕ ಸಲಹೆ ನೀಡಬಹುದು ಮತ್ತು ನಮೋ ಆಪ್ ಮೂಲಕ ತಮ್ಮ ಮೊಬೈಲ್‌ಗಳಲ್ಲಿ ನೇರವಾಗಿ ಆನ್‌ಲೈನಲ್ಲಿ ಸಲಹೆ ನೀಡಬಹುದು ಹೀಗೆ ಸಾರ್ವಜನಕರು ತಮಗೆ ಅನುಕೂಲವಾದ ರೀತಿಯಲ್ಲಿ ಸಲಹೆ ನೀಡಲು ವಿನಂತಿಸಿದರು.
ಈ ಅಭಿಯಾನವು ಮಾರ್ಚ್ ವರೆಗೆ ೧೫ ದಿನಗಳ ಕಾಲ ನಡಯಲಿದ್ದು ಬಿಜೆಪಿ ಕಾರ್ಯಕರ್ತರು ಸಮಾಜದ ವಿವಿಧ ಕ್ಷೇತ್ರದ ನಾಗರಿಕರಿಂದ ಸಲಹೆಗಳನ್ನು ಪಡೆಯಲ್ಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಜನ ಸಂಪರ್ಕ ಅಭಿಯಾನ ಪ್ರಕೋಷ್ಠ ಕಾರ್ಯಕ್ರಮ ಫಲಾನುಭವಿಗಳ ಸಂಪರ್ಕ ಮಾಧ್ಯಮ ಮಿಲನ ಹಾಗೂ ಸಂವಾದದೊಂದಿಗೆ ಸಲಹೆಗಳನ್ನು ಪಡೆದುಕೊಂಡು ಈ ಭಾರಿ ಲೋಕಸಭಾ ಚುನಾವಣೆ ಪ್ರಣಾಳಿಕೆ ಸಂಕಲ್ಪ ಪತ್ರವಾಗಿ ಹೊರಹೊಮ್ಮಲಿದೆ. ಕಾರಣ ಗದಗ ಜಿಲ್ಲೆಯ ಪ್ರತಿಯೊಬ್ಬ ನಾಗರಿಕನಿಗೂ ಸಲಹೆ ನೀಡುವ ಅವಕಾಶವನ್ನು ನರೇಂದ್ರ ಮೋದಿಯವರು ಅವಕಾಶ ನೀಡಿದ್ದು ಅಭಿಯಾನದಲ್ಲಿ ಸಾರ್ವಜನಿಕರು ಸಕ್ರೀಯವಾಗಿ ಪಾಲ್ಗೊಂಡು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಮತ್ತೊಮ್ಮೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವನ್ನು ವಿಶ್ವ ಗುರುವನ್ನಾಗಿಸಲು ಮತ್ತು ಭಾರತ ದೇಶ ಸುಭದ್ರ ದೇಶವನ್ನಾಗಿಸಲು ತಾವೆಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಪ್ರಕೋಷ್ಠಗಳ ಜಿಲ್ಲಾ ಸಂಚಾಲಕ ಶಶಿಧರ ದಿಂಡೂರ, ಸಹ ಸಂಚಾಲಕ ರಮೇಶ ಸಜ್ಜಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಿಹಳ್ಳಿ, ಲಿಂಗರಾಜ ಪಾಟೀಲ, ಆರ್.ಕೆ.ಚವಾಣ, ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ, ಪ್ರಮುಖರಾದ ರಾಘವೇಂದ್ರ ಯಳವತ್ತಿ, ಪ್ರಕಾಶ ಬಾಕಳೆ, ಮಹೇಶ ದಾಸರ, ಅಶೋಕ ಕರೂರ ಇದ್ದರು.