ಲೋಕಸಭಾ ಚುನಾವಣೆ: ನೋಡಲ್ ಅಧಿಕಾರಿಗಳ ನೇಮಕ

| Published : Feb 05 2024, 01:48 AM IST

ಸಾರಾಂಶ

ಲೋಕಸಭಾ ಚುನಾವಣಾ ಸಂಬಂಧ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 16 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು ಚುನಾವಣೆ ಕೆಲಸಗಳಲ್ಲಿ ಭಾಗವಹಿಸುವ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು, ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೋಡಲ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಲೋಕಸಭಾ ಚುನಾವಣಾ ಸಂಬಂಧ ಜಿಲ್ಲೆಯಲ್ಲಿ ಒಟ್ಟು 16 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು ಚುನಾವಣೆ ಕೆಲಸಗಳಲ್ಲಿ ಭಾಗವಹಿಸುವ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಿ ಎಂದರು.

ಸ್ವೀಪ್ ಹಾಗೂ ಎಂಸಿಸಿ ಸಮಿತಿ - ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ, ಕಾನೂನು ಸುವ್ಯವಸ್ಥೆ, ರಕ್ಷಣೆ ಸಮಿತಿ- ಪೊಲೀಸ್ ವರಿಷ್ಠಾಧಿಕಾರಿ, ಮಾನವ ಸಂಪನ್ಮೂಲ- ಭೂದಾಖಲೆ ಇಲಾಖೆಯ ಉಪನಿರ್ದೇಶಕರು, ಚುನಾವಣೆ ತರಬೇತಿ- ಡಯಟ್ ಪ್ರಾಂಶುಪಾಲರು, ಸಂಪನ್ಮೂಲ ನಿರ್ವಹಣೆ- ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಸಾರಿಗೆ ವ್ಯವಸ್ಥೆ-ಪ್ರಾದೇಶಿಕ ಸಾರಿಗೆ ಅಧಿಕಾರಿ, ಸೈಬರ್, ವೆಬ್‌ಸೈಟ್- ಎನ್.ಐ.ಸಿ ಅಧಿಕಾರಿ, ಇವಿಎಂ ನಿರ್ವಹಣೆ- ಸಮಾಜ ಕಲ್ಯಾಣಾಧಿಕಾರಿ, ಚುನಾವಣಾ ವೆಚ್ಚ ಮೇಲ್ವಿಚಾರಣೆ- ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ, ಬ್ಯಾಲೆಟ್ ಮತ್ತು ಪೊಸ್ಟಲ್ ಬ್ಯಾಲೆಟ್- ಮಿಮ್ಸ್ ಆಡಳಿತಾಧಿಕಾರಿ, ಪೇಯ್ಡ್‌ ನ್ಯೂಸ್ ಹಾಗೂ ಮಾಧ್ಯಮ ಸಮನ್ವಯ - ವಾರ್ತಾಧಿಕಾರಿ, ಸಂವಾಹನ ಯೋಜನೆ- ಕೃಷಿ ಇಲಾಖೆಯ ಜಂಟಿ ನಿರ್ದೇಶಕ, ಮತದಾನ ಪ್ರಕ್ರಿಯೆ- ಉಪ ವಿಭಾಗಾಧಿಕಾರಿಗಳು, ಚುನಾವಣಾ ಸಂಬಂಧ ದೂರು ಕೋಶ- ತೋಟಗಾರಿಕೆಯ ಉಪ ನಿರ್ದೇಶಕರು, ಚುನಾವಣಾ ವೀಕ್ಷಕರರ ಸಮನ್ವಯ- ಲೋಕೋಪಯೋಗಿ ಇಲಾಖೆ ಕಾರ್ಯಾಪಾಲಕ ಅಭಿಯಂತರ ಸೇರಿದಂತೆ ಒಟ್ಟು 16 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವಿರ್ ಆಸಿಫ್‌, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಸೇರಿದಂತೆ ಚುನಾವಣಾ ನೊಡಲ್ ಅಧಿಕಾರಿಗಳು ಇದ್ದರು.