ಲೋಕಸಭೆ ಚುನಾವಣೆ ಸೋಲಿಗೆ ಹೆದರುವುದಿಲ್ಲ -ವಿನೋದ ಅಸೂಟಿ

| Published : Jun 11 2024, 01:34 AM IST

ಸಾರಾಂಶ

ಅವನಿಂದ ಸೋಲಾಯಿತು, ಇವನಿಂದ ಸೋಲಾಯಿತು ಎಂಬುದು ನನಗೆ ಬೇಡ, ನನ್ನಿಂದ ಸೋಲಾಗಿದೆ ನನ್ನಿಂದಲೇ ಏನೋ ತಪ್ಪಾಗಿದೆ ಎಂದು ಭಾವಿಸಿದ್ದೇನೆ ಎಂದು ಧಾರವಾಡ ಲೋಕಸಭಾ ಪರಾಜಿತ ಅಭ್ಯರ್ಥಿ ವಿನೋದ ಅಸೂಟಿ ಪ್ರತಿಪಾದಿಸಿದರು.

ಶಿಗ್ಗಾಂವಿ:ಅವನಿಂದ ಸೋಲಾಯಿತು, ಇವನಿಂದ ಸೋಲಾಯಿತು ಎಂಬುದು ನನಗೆ ಬೇಡ, ನನ್ನಿಂದ ಸೋಲಾಗಿದೆ ನನ್ನಿಂದಲೇ ಏನೋ ತಪ್ಪಾಗಿದೆ ಎಂದು ಭಾವಿಸಿದ್ದೇನೆ ಎಂದು ಧಾರವಾಡ ಲೋಕಸಭಾ ಪರಾಜಿತ ಅಭ್ಯರ್ಥಿ ವಿನೋದ ಅಸೂಟಿ ಪ್ರತಿಪಾದಿಸಿದರು.ಶಿಗ್ಗಾಂವಿ ಪಟ್ಟಣದ ಹನುಮಂತಗೌಡ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾಂಗ್ರೆಸ್‌ನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ಸೋಲಿಗೆ ನಾನು ಹೆದರೊಲ್ಲ, ಇಂತಹ ಹತ್ತು ಚುನಾವಣೆ ಮಾಡುತ್ತೇನೆ ಎಂಬ ನಂಬಿಕೆ ನನಗೆ ಇದೆ. ಶಿಗ್ಗಾಂವಿ ಸವಣೂರಲ್ಲಿ ಕಾಂಗ್ರೆಸ್ ಗೆದ್ದಿದೆ, ಉಪಚುನಾವಣೆ ಮುಂದಿದೆ. ಕಾಂಗ್ರೆಸ್ ಚಿಹ್ನೆಯನ್ನು ಗೆಲ್ಲಿಸೋಣ, ೨೫ ವರ್ಷಗಳ ನಂತರ ೮ ಸಾವಿರಕ್ಕೂ ಹೆಚ್ಚು ಲೀಡ್ ಪಡೆದಿದ್ದೇವೆ, ಒಬ್ಬ ಹಿಂದುಳಿದ ಸಮುದಾಯದ ಯುವಕನಿಗೆ ೯೧ ಸಾವಿರ ಮತಗಳನ್ನು ಈ ಕ್ಷೇತ್ರದಿಂದ ನೀಡಿದ್ದೀರಿ, ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಕಾಂಗ್ರೆಸ್ ಇಲ್ಲಿ ಗೆಲ್ಲಿಸೋಣ, ಒಬ್ಬ ವ್ಯಕ್ತಿಗೆ ಅಭಿಮಾನಿಯಾಗಬೇಡಿ ಬದಲಾಗಿ ಕಾಂಗ್ರೆಸ್‌ ಅಭಿಮಾನಿಯಾಗಿರಿ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು. ಕಾಂಗ್ರೆಸ್ ಮುಖಂಡ ಯಾಸೀರ್‌ಅಹ್ಮದ್ ಖಾನ್ ಪಠಾಣ್ ಮಾತನಾಡಿ, ಇತಿಹಾಸ ನೋಡಿದರೆ ಈಗ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಹೆಚ್ಚಾಗಿದೆ, ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಯೋಜನೆಯ ಮಹತ್ವವನ್ನು ತಿಳಿಸಬೇಕು. ೧ ಲಕ್ಷ ೨೦ ಸಾವಿರ ಮತಗಳ ಟಾರ್ಗೆಟ್ ಇಟ್ಟು ಈ ಬಾರಿ ಕೆಲಸ ಮಾಡಿದರೆ ಕಾಂಗ್ರೆಸ್‌ಗೆ ಗೆಲುವು ನಿಶ್ಚಿತ, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಒಳ್ಳೆಯ ದಿನಗಳು ಬರುತ್ತವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.ಗಡಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ಸೊಮಣ್ಣ ಬೇವಿನಮರದ ಮಾತನಾಡಿ, ಆತ್ಮಾವಲೋಕನ ಸಭೆ ನಮ್ಮ ಕ್ಷೇತ್ರಕ್ಕೆ ಅಲ್ಲ, ಹಾವೇರಿ ಜಿಲ್ಲೆಗೆ ಆತ್ಮಾವಲೋಕನ ಸಭೆ ಬೇಕಿದೆ, ಗ್ಯಾರಂಟಿ ಯೋಜನೆಗಳ ಆಧಾರದ ಮೇಲೆ ಜನತೆ ಮತವನ್ನು ಕೊಟ್ಟಿದ್ದರೆ ಬಿಜೆಪಿ ಧೂಳಿಪಟವಾಗುತ್ತಿತ್ತು. ಪಕ್ಷಕ್ಕೆ ವ್ಯಕ್ತಿ ಮುಖ್ಯ ಅಲ್ಲ, ಪಕ್ಷಕ್ಕೆ ನಾವು ಯಾರೂ ಅನಿವಾರ್ಯ ಅಲ್ಲ, ಪಕ್ಷ ಇದ್ದರೆ ನಾವೆಲ್ಲರೂ. ಇದು ಗಮನದಲ್ಲಿರಲಿ ಎಂದರು.

ರಾಜ್ಯ ಮಹಿಳಾ ಮುಖಂಡರಾದ ರಾಜೇಶ್ವರಿ ಪಾಟೀಲ,ಜಿಲ್ಲಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿದ್ದು ಬೇರೆ ಪಕ್ಷಕ್ಕೆ ಬೆಂಬಲಿಸುವವರು ಪಾರ್ಟಿ ಬಿಟ್ಟು ಮೊದಲು ಹೋಗಿ, ಗುಂಪುಗಾರಿಕೆ ಮಾಡುವವರಿಗೆ ಪಾರ್ಟಿಯಲ್ಲಿ ಅವಕಾಶ ಇಲ್ಲ, ಪಾರ್ಟಿಗೆ ಶ್ರಮಿಸುವ ಕಾರ್ಯಕರ್ತರು ಶಿಗ್ಗಾಂವಿ ಕ್ಷೇತ್ರದಲ್ಲಿ ಹೆಚ್ಚು ಇದ್ದಾರೆ. ಬಹಳ ಕಡಿಮೆ ಅಂತರದಿಂದ ಸೋತಿದ್ದೇವೆ ಎಂದರು.

ಶಿಗ್ಗಾಂವಿ ಬ್ಲಾಕ್ ಅಧ್ಯಕ್ಷ ಬಿ.ಸಿ. ಪಾಟೀಲ, ಸವಣೂರ ಬ್ಲಾಕ್ ಅದ್ಯಕ್ಷ ಎಂ.ಎಂ. ಮುಲ್ಲಾ, ಮುಖಂಡರಾದ ಎಸ್. ಎಫ್. ಮಣಕಟ್ಟಿ ಸುಭಾಸ್ ಮಜ್ಜಗಿ, ಶಿವಾನಂದ ರಾಮಗೇರಿ, ಬಾಬರ್ ಭೋವಾಜಿ, ಕರೀಂಸಾಬ್ ಮೊಗಲಲ್ಲಿ, ಜಿಲ್ಲಾ ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷೆ ಪ್ರೇಮಾ ಪಾಟೀಲ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಲ್ಲಮ್ಮ ಸೋಮನಕಟ್ಟಿ, ಚಂದ್ರಣ್ಣ ನಡುವಿನಮನಿ, ನಾಗಪ್ಪ ತಿಪ್ಪಕ್ಕನವರ, ಯೂಸುಬ್ ಸಾಬ್ ಭಾವಿಕಟ್ಟಿ, ಸುಧೀರ ಲಮಾಣಿ, ಮಾಲತೇಶ ಸಾಲಿ, ಗುಡ್ಡಪ್ಪ ಜಲದಿ, ಗೌಸಖಾನ್ ಮುನಶಿ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.