ಸಾರಾಂಶ
ನೊಂದ ಯುವತಿಯ ಕಡೆಯವರ ಬಳಿ ಪಿಎಸ್‌ಐ ಜಗದೇವಿ 75 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 55 ಸಾವಿರವನ್ನು ಮುಗಂಡವಾಗಿ ನೀಡಿದ್ದಾರೆ.
ದೇವನಹಳ್ಳಿ: ಇಲ್ಲಿನ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಅಂಬರೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 70 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅಂಬರೀಶ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನೊಂದ ಯುವತಿ ಕಡೆಯವರ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ನೊಂದ ಯುವತಿಯ ಕಡೆಯವರ ಬಳಿ ಪಿಎಸ್‌ಐ ಜಗದೇವಿ 75 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 55 ಸಾವಿರವನ್ನು ಮುಗಂಡವಾಗಿ ನೀಡಿದ್ದಾರೆ ಉಳಿದ ಮೊತ್ತವನ್ನು ಜಗದೇವಿ ಪರವಾಗಿ ಅಂಬರೀಶ್ 70 ಸಾವಿರ ಪಡೆಯುವಾಗ ದಾಳಿ ಮಾಡಲಾಗಿದೆ. ಅಂಬರೀಶ್ ಬಲೆಗೆ ಬೀಳುತ್ತಿದ್ದಂತೆ ಪಿಎಸ್‌ಐ ಜಗದೇವಿ ಮತ್ತು ಪಿ.ಸಿ ಮಂಜುನಾಥ ಪರಾರಿಯಾಗಿದ್ದಾರೆ. ಪಿ.ಸಿ ಅಂಬರೀಶ್‌ನನ್ನು ಪೊಲೀಸರು ವಶಕ್ಕೆ ಪಡೆದು ದೇವನಹಳ್ಳಿ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ.೦೪ ದೇವನಹಳ್ಳಿ ಚಿತ್ರಸುದ್ದಿ: ೦೧
ಪಿ.ಎಸ್.ಐ ಜಗದೇವಿ