ಎಫ್‌ಡಿಸಿ ಅನಂತ್ ಮನೆ ಮೇಲೆ ಲೋಕಾ ದಾಳಿ

| Published : May 16 2025, 02:05 AM IST

ಎಫ್‌ಡಿಸಿ ಅನಂತ್ ಮನೆ ಮೇಲೆ ಲೋಕಾ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ತಾಲೂಕು ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ಅನಂತ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಹೊಸಕೋಟೆ: ತಾಲೂಕು ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ಅನಂತ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಅನಂತ್ ಅವರ ಮನೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಬೋಧನ ಹೊಸಹಳ್ಳಿ ಗ್ರಾಮದಲ್ಲಿದ್ದು, ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಲೋಕಾಯುಕ್ತ ಎಸ್‌ಪಿ ಪವನ್ ನಚ್ಚೂರು, ಡಿವೈಎಸ್ಪಿ ಗಿರೀಶ್, ಇನ್‌ಸ್ಪೆಕ್ಟರ್ ನಂದಕುಮಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಬೋಧನ ಹೊಸಹಳ್ಳಿ ಗ್ರಾಮದಲ್ಲಿರುವ ಅನಂತ ಅವರ ಮನೆ, ಅವರ ಬಾಮೈದ ಹಾಗೂ ಮಾವನ ಮನೆಯಲ್ಲಿ ಕೂಡ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿ ಮನೆಯಲ್ಲಿದ್ದಂತಹ ಆಸ್ತಿಪತ್ರಗಳು, ನಗದು, ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನ ಪರಿಶೀಲಿಸಿದ್ದಾರೆ.

ಹೊಸಕೋಟೆ ತಾಲೂಕು ಭೂ ಮಂಜೂರಾತಿ ಕಚೇರಿಯಲ್ಲಿ ಎಫ್‌ಡಿಸಿ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಅನಂತ್ ಅದಾಯಕ್ಕೂ ಮೀರಿ ಹಣ ಗಳಿಸಿದ್ದಾರೆ ಎಂಬ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಮನೆಯಲ್ಲಿ 3 ಲಕ್ಷ ನಗದು, 11 ಚಿನ್ನದ ಉಂಗುರ, 2 ಕೆಜಿ ಬೆಳ್ಳಿ, 2 ಬ್ರಾಸ್ ಲೈಟ್, ಚಿನ್ನದ ಡಾಬು ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೋಟೋ: 15 ಹೆಚ್‌ಎಸ್‌ಕೆ 5 ಮತ್ತು 6

5: ಹೊಸಕೋಟೆ ತಾಲೂಕು ಕಚೇರಿ ಪ್ರಥಮ ದರ್ಜೆ ಗುಮಾಸ್ತ ಅನಂತ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದೆ ವೇಳೆ ಲಭ್ಯವಾಗಿರುವ ನಗದು, ಚಿನ್ನ, ಬೆಳ್ಳಿ ವಸ್ತುಗಳು.

6: ಹೊಸಕೋಟೆ ತಾಲೂಕಿನ ಭೋದನಹೊಸಹಳ್ಳಿ ಗ್ರಾಮದಲ್ಲಿರುವ ಪ್ರಥಮ ದರ್ಜೆ ಗುಮಾಸ್ತ ಅನಂತ್ ಅವರ ಮನೆ.