ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆತಾಲೂಕಿನಲ್ಲಿ ನಡೆಯುತ್ತಿರುವ ಬೂದಿಹಾಳ-ಫಿರಾಪೂರ ಏತ ನೀರಾವರಿ ಕಾಮಗಾರಿಯನ್ನು ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ(ಪಡೇಕನೂರ) ಪರಿಶೀಲಿಸಿದರು. ಅಲ್ಲದೇ, ಮುಂದೆ ಕೈಗೊಳ್ಳಲಾಗುವ ಎಫ್.ಐ.ಸಿ.ಕಾಲುವೆಗನ್ನು ಗುಣಮಟ್ಟದಿಂದ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು.ತಾಲೂಕಿನ ನಾವದಗಿ ಗ್ರಾಮದಲ್ಲಿ ನಡೆಯುತ್ತಿರುವ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕೊಡಗನೂರ ಕ್ರಾಸ್ ಬಳಿ ಯೋಜನೆಗೆ ಸಂಬಂಧಿಸಿದ ಮಾಹಿತಿ ಪಡೆದರು. ನೀರು ಹರಿಸುತ್ತಿರುವುದನ್ನು ಪರಿಶೀಲಿಸಿದ ಅವರು, ಸದ್ಯ ಕೈಗೊಳ್ಳಲಾಗಿರುವ ಕಾಮಗಾರಿಯ ಮಾಹಿತಿ ಸಂಗ್ರಹಿಸಿದರು. ಇದೇ ಸಮಯದಲ್ಲಿ ಗುತ್ತಿಗೆದಾರ ಶಂಕರ ನಾರಾಯಣ ಕಂಪನಿಯ ವ್ಯವಸ್ಥಾಪಕ ರಾಚಯ್ಯ, ಕೆಬಿಜೆಎನ್‌ಎಲ್‌ನ ಕಾರ್ಯಪಾಲಕ ಅಭಿಯಂತರ ಸಂಗಮೇಶ ಮುಂಡಾಸ ಅವರು ಈಗಾಗಲೇ 1060 ಔಟ್ ಲೈನ್ ಪೈಪ್‌ಲೈನ್ ಕಾಮಗಾರಿಯ ಮುಕ್ತಾಯಗೊಂಡಿದ್ದು, ಒಟ್ಟು 464 ಕಿಮೀ ಮುಖ್ಯ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಈ ಯೋಜನೆಯಿಂದ ಒಟ್ಟು 50 ಸಾವಿರ ಏಕರೆ ಪ್ರದೇಶ ನೀರಾವರಿಗೆ ಅನುಕೂಲವಾಗಲಿದೆ ಎಂಬ ಮಾಹಿತಿಯನ್ನು ಲೋಕಾಯುಕ್ತರಿಗೆ ನೀಡಿದರು. ಇದೇ ಸಮಯದಲ್ಲಿ ಕಾಮಗಾರಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಮತ್ತು ಪ್ರೋಜೆಕ್ಟ್ ಮಾಹಿತಿಯನ್ನು ಲೊಕಾಯುಕ್ತರು ಪರಿಶೀಲಿಸಿದರು. ಈ ಸಮಯದಲ್ಲಿ ಲೋಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ಮಲ್ಲೇಶ.ಟಿ, ಡಿವೈಎಸ್ಪಿ ಸುರೇಶ ರಡ್ಡಿ, ಇನ್ಸಪೆಕ್ಟರ್‌ಗಳಾದ ಆನಂದ ಟಕ್ಕಣ್ಣವರ, ಆನಂದ ಡೊಣಿ, ಕೆಬಿಜೆಎನ್‌ಎಲ್‌ನ ಎಇಇ ಶಂಕರ ಬಂಡಿವಡ್ಡರ, ಎಇ ವಿಶ್ವನಾಥ ಬಿರಾದಾರ, ಹಣಮಂತ ಗುಡಗುಂಟಾ, ಆಕಾಶ ಮೊದಲಾದವರು ಉಪಸ್ಥಿತರಿದ್ದರು.ಕೋಟ್...
ಈ ಭಾಗದಲ್ಲಿ 50 ಸಾವಿರ ಎಕರೆ ನೀರಾವರಿಗೆ ಒಳಪಡುತ್ತಿರುವುದರಿಂದ ಸದರಿ ಯೋಜನೆಯ ಬಗ್ಗೆ ರೈತಬಂಧುಗಳಿಗೆ ಸರಿಯಾದ ಮಾಹಿತಿ ಒದಗಿಸಿ. ಯಾವ ರೀತಿ ನೀರು ಬಳಕೆ ಮಾಡುವುದರಿಂದ ಜಮೀನಿನ ಫಲವತ್ತತೆ ಕಾಪಾಡಿಕೊಳ್ಳಬಹುದು ಎಂಬುವುದರ ಬಗ್ಗೆ ಮಾಹಿತಿ ನೀಡಿ. ಒಟ್ಟಾರೆ ಕಾಮಗಾರಿಯು ಗುಣಮಟ್ಟದಿಂದ ಕೂಡಿರಲಿ, ಕಾರಣ ಇದು ಪದೇ ಪದೇ ಮಾಡುವ ಕಾಮಗಾರಿಯಲ್ಲ. ಲೋಪವಾಗದಂತೆ ನೋಡಿಕೊಳ್ಳಿ.ನ್ಯಾ.ಬಿ.ಎಸ್.ಪಾಟೀಲ(ಪಡೇಕನೂರ), ಲೋಕಾಯುಕ್ತ ನ್ಯಾಯಮೂರ್ತಿ.