ಮಹಿಳಾ ಸಮಾವೇಶದಿಂದ ಬಿಜೆಪಿಗೆ ಹೆಚ್ಚಿನ ಬಲ: ಬಿ.ವೈ.ರಾಘವೇಂದ್ರ

| Published : Apr 02 2024, 01:01 AM IST

ಮಹಿಳಾ ಸಮಾವೇಶದಿಂದ ಬಿಜೆಪಿಗೆ ಹೆಚ್ಚಿನ ಬಲ: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಅಪಾರ ಸಂಖ್ಯೆಯ ಕಾರ್ಯಕರ್ತರ ಹೊಂದಿರುವ ದೊಡ್ಡ ಪಕ್ಷ. ದೇಶದಲ್ಲಿ ಬಿಜೆಪಿ, ಎನ್‌ಡಿಎ ಮೈತ್ರಿ ಕೂಟ 400ಕ್ಕೂ ಹೆಚ್ಚು ಸ್ಥಾನ ಗಳಿಸುವ ಮೂಲಕ ಮೋದಿಗೆ ಪಟ್ಟಾಭಿಷೇಕ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರಿಗೆ ನಿಮ್ಮ ಮತ ಕೊಟ್ಟು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು.

ಕನ್ನಡಪ್ರಭ ವಾರ್ತೆ ಆನಂದಪುರ

ಭಾರತ ದೇಶ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಿಳಿಸಿದರು.

ಆನಂದಪುರದ ಸೀತಾರಾಮ ಸಭಾಭವನದಲ್ಲಿ ಸೋಮವಾರ ಸಂಜೆ ನಡೆದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮಹಿಳಾ ಸಮಾವೇಶಗಳು ನಡೆಸಿದ್ದರಿಂದ ಬಿಜೆಪಿಗೆ ಹೆಚ್ಚಿನ ಬಲ ಬಂದಂತಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡು ಶ್ರೀ ರಾಮನ ಪ್ರತಿಷ್ಠಾಪನೆ ಯೊಂದಿಗೆ ಪಟ್ಟಾಭಿಷೇಕ ನಡೆದಿದೆ. ಹಾಗೆ ಭಾರತ ದೇಶಕ್ಕಾಗಿ ಚುನಾವಣೆ ನಡೆಯುತ್ತಿದ್ದು ದೇಶದೆಲ್ಲೆಡೆ ಮೋದಿಯನ್ನು ಜಪಿಸುತ್ತಿದ್ದಾರೆ. ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಯೂ ಸುರಕ್ಷಿತವಾಗಿರಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು.

ಬಿಜೆಪಿ ಅಪಾರ ಸಂಖ್ಯೆಯ ಕಾರ್ಯಕರ್ತರ ಹೊಂದಿರುವ ದೊಡ್ಡ ಪಕ್ಷ. ದೇಶದಲ್ಲಿ ಬಿಜೆಪಿ, ಎನ್‌ಡಿಎ ಮೈತ್ರಿ ಕೂಟ 400ಕ್ಕೂ ಹೆಚ್ಚು ಸ್ಥಾನ ಗಳಿಸುವ ಮೂಲಕ ಮೋದಿಗೆ ಪಟ್ಟಾಭಿಷೇಕ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರಿಗೆ ನಿಮ್ಮ ಮತ ಕೊಟ್ಟು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎಂದು ಮತಯಾಚಿಸಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಜಿ ಶಾಸಕ ಹರತಾಳ ಹಾಲಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ಹೋನಗೋಡು, ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಕುಮಾರ್, ಜಿಲ್ಲಾ ಮತ್ತು ತಾಲೂಕು ಮಹಿಳಾ ಪದಾಧಿಕಾರಿಗಳಾದ ಡಾ. ರಾಜ್ ನಂದಿನಿ, ಸುಮಾ, ಗಾಯಿತ್ರಿ, ವೀಣಾ, ಮಂಗಳ, ಪ್ರೇಮ, ಜ್ಯೋತಿ, ಭುವನಮ್ಮ ಮುಖಂಡರಾದ ದೇವೇಂದ್ರಪ್ಪ, ಲೋಕನಾಥ್ ಬಿಳಿಸಿರಿ, ಭರ್ಮಪ್ಪ, ಶಾಂತಕುಮಾರ್, ಪ್ರಶಾಂತ್ ಅನೇಕರು ಉಪಸ್ಥಿತರಿದ್ದರು.