ಬಿಜೆಪಿ, ಮೋದಿ ಅಲೆ ನನ್ನನ್ನು ಗೆಲ್ಲಿಸುತ್ತೆ: ಶ್ರೀರಾಮುಲು

| Published : Mar 28 2024, 12:48 AM IST

ಬಿಜೆಪಿ, ಮೋದಿ ಅಲೆ ನನ್ನನ್ನು ಗೆಲ್ಲಿಸುತ್ತೆ: ಶ್ರೀರಾಮುಲು
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಏಪ್ರಿಲ್‌ 12 ರಂದು ನಾಮಪತ್ರ ಸಲ್ಲಿಸುವೆ. ಇದಕ್ಕೂ ಪೂರ್ವದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಪ್ರತೀ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸುವೆ.

ಕೊಟ್ಟೂರು: ಕ್ಷೇತ್ರದಲ್ಲಿ ಚುರುಕಿನ ಪ್ರಚಾರ ಕೈಗೊಂಡಿರುವೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅಲೆ ನನ್ನನ್ನು ಗೆಲ್ಲಿಸುತ್ತೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.ತಾಲೂಕಿನ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಪಕ್ಷದ ಕಾರ್ಯಕರ್ತರೊಂದಿಗೆ ಮಂಗಳವಾರ ರಾತ್ರಿ ಭೇಟಿ ನೀಡಿ ಆರಾಧ್ಯ ದೈವ ಮರುಳಸಿದ್ದ ಸ್ವಾಮಿ ದರ್ಶನ ಪಡೆದರು. ನಂತರ ಜ.ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಬಳಿ ತೆರಳಿ ಶುಭಾರ್ಶೀವಾದ ಪಡೆದರು. ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಬಳ್ಳಾರಿ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಏಪ್ರಿಲ್‌ 12 ರಂದು ನಾಮಪತ್ರ ಸಲ್ಲಿಸುವೆ. ಇದಕ್ಕೂ ಪೂರ್ವದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಪ್ರತೀ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸುವೆ ಎಂದರು.ಈಗಾಗಲೇ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸಂಡೂರು ಶಾಸಕ ತುಕಾರಾಂ ಅವರನ್ನು ಕಣಕ್ಕಿಳಿಸುವ ತೀರ್ಮಾನವನ್ನು ಆ ಪಕ್ಷದ ಮುಖಂಡರು ಕೈಗೊಂಡಿದ್ದಾರೆ. ತುಕಾರಾಂ ಸ್ಪರ್ಧೆಯಿಂದ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದರು.ಜಿಪಂ ಮಾಜಿ ಅಧ್ಯಕ್ಷ ಜಿ.ಉಮೇಶ್‌, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಸ್.ಪಿ. ಪ್ರಕಾಶ್‌, ಕೂಡ್ಲಿಗಿ ಬಿಜೆಪಿ ಮಂಡಲ ಅಧ್ಯಕ್ಷ ನಾಗರಾಜ ಕಾಮಶೆಟ್ಟಿ, ಗುಳಿಗಿ ವೀರೇಂದ್ರ, ಚನ್ನಪ್ಪ, ಚಿನ್ನಾಪುರಪ್ಪ, ಪಪಂ ಸದಸ್ಯ ಸಚಿನಕುಮಾರ್, ಪಿಕಾರ್ಡ್ ಬ್ಯಾಂಕ್‌ ಮಾಜಿ ಅಧ್ಯಕ್ಷ ಸತೀಶ್‌, ಪಾಪೇಶ್, ವಕೀಲ ಮರುಳಸಿದ್ದಪ್ಪ ಇದ್ದರು.