ಸಾರಾಂಶ
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಕಮಲ್ ರಾಜ್ ಅವರ ಶಕ್ತಿ ನಗರದ 3ನೇ ಕ್ರಾಸ್‌ನ ನಿವಾಸ ಮತ್ತು ಕಚೇರಿ ಮೇಲೆ ಮಂಗಳವಾರ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿದ ಘಟನೆ ವರದಿಯಾಗಿದೆ.
ದಾವಣಗೆರೆ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಕಮಲ್ ರಾಜ್ ಅವರ ಶಕ್ತಿ ನಗರದ 3ನೇ ಕ್ರಾಸ್‌ನ ನಿವಾಸ ಮತ್ತು ಕಚೇರಿ ಮೇಲೆ ಮಂಗಳವಾರ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿದ ಘಟನೆ ವರದಿಯಾಗಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಉಪಾಧೀಕ್ಷಕಿ ಕಲಾವತಿ, ಇನ್‌ಸ್ಪೆಕ್ಟರ್‌ಗಳಾದ ಪ್ರಭು ಸೂರಿನ, ಮಧುಸೂದನ್ ಹಾಗೂ ಸಿಬ್ಬಂದಿ ತಂಡಗಳು ಏಕಕಾಲಕ್ಕೆ ಅಕ್ರಮ ಆಸ್ತಿ ಸಂಪಾದನೆ ದೂರಿನ ಮೇರೆಗೆ ದಾಳಿ ನಡೆಸಿವೆ.ಲೋಕಾಯುಕ್ತರು ಪರಿಶೀಲನೆ ನಡೆಸಿದಾಗ, ಚಿತ್ರದುರ್ಗದಲ್ಲಿ 3 ಮನೆ, ಮೂರು ನಿವೇಶನ, ದಾವಣಗೆರೆಯಲ್ಲಿ 1 ಮನೆ, ಇನ್ನೋವಾ ಕಾರು, ₹1 ಲಕ್ಷ ನಗದು ಪತ್ತೆಯಾಗಿದೆ. ಮೂಲತಃ ಚಿತ್ರದುರ್ಗ ಜಿಲ್ಲೆ ಪಳಕಿಹಳ್ಳಿ ಗ್ರಾಮದ ಕಮಲರಾಜ್ ಅನುಕಂಪದ ಆಧಾರದಲ್ಲಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ವೃತ್ತಿಗೆ ಸೇರಿದ್ದರು. ಹಾಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
- - - -12ಕೆಡಿವಿಜಿ11:ದಾವಣಗೆರೆ ಶಕ್ತಿ ನಗರದಲ್ಲಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಕಮಲರಾಜ್ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ದಾಖಲೆ, ಆಸ್ತಿ ಪತ್ರ ಪರಿಶೀಲಿಸಿದರು.