ಕೆಬಿಜೆಎನ್‌ಎಲ್ ಎಂಜಿನೀಯರ್ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
KannadaprabhaNewsNetwork | Published : Oct 31 2023, 01:16 AM IST
ಕೆಬಿಜೆಎನ್‌ಎಲ್ ಎಂಜಿನೀಯರ್ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ಸಾರಾಂಶ
ಶಹಾಪುರ ತಾಲೂಕಿನ ಭೀಮರಾಯನಗುಡಿಯ ಕೆಬಿಜೆಎಎನ್‌ಎಲ್-ಕಾರ್ಯಪಾಲಕ ಇಂಜಿನಿಯರ್ ತಿಪ್ಪಣ್ಣಗೌಡ ಅನ್ನದಾನಿ ಅಧಿಕಾರಿ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿರುವುದು.
ಶಹಾಪುರ: ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ತಾಲೂಕಿನ ಭೀಮರಾಯನ ಗುಡಿಯ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್‌ಎಲ್) ಕಾರ್ಯಪಾಲಕ ಎಂಜಿನೀಯರ್ ತಿಪ್ಪಣ್ಣಗೌಡ ಅನ್ನದಾನಿ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು. ತಿಪ್ಪಣ್ಣಗೌಡ ಅನ್ನದಾನಿ ಅವರು ವಾಸಿಸುತ್ತಿದ್ದ ಕ್ವಾರ್ಟರ್ಸ್ ನಂ. ಪಿ.ಡಿ. 25 ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದ ಲೋಕಾಯುಕ್ತರಿಗೆ, ಕೆಲವು ತಿಂಗಳಿಂದ ಅಧಿಕಾರಿ ಈ ಕ್ವಾರ್ಟರ್ಸ್‌ಗೆ ಬಂದಿರುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಭೀಮರಾಯನ ಗುಡಿಯ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದ ಮನೆಯಲ್ಲಿ ಯಾವುದಾದರು ದಾಖಲೆ ಇಟ್ಟಿದ್ದಾರಾ ಅಥವಾ ಮಹತ್ವದ ಮಾಹಿತಿ ಕಲೆ ಹಾಕುತ್ತಿರುವ ಲೋಕಾಯುಕ್ತ ತಂಡ, ಕೆಲವೊಂದು ದಾಖಲೆಗಳು ಲಭ್ಯವಿರುವುದಾಗಿ ತಿಳಿದು ಬಂದಿದೆ. ಸದ್ಯ ಅವರು ದೇವದುರ್ಗ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಕಲಬುರಗಿಯ ಲೋಕಾಯುಕ್ತ ಸರ್ಕಲ್ ಇನ್ಸ್‌ಪೆಕ್ಟರ್ ನಾನೇಗೌಡ, ಯಾದಗಿರಿಯ ಲೋಕಾಯುಕ್ತ ಎಎಸ್‌ಐ ವಿಷ್ಣು, ಪಿ.ಸಿ. ಅನಿಲ್ ಕುಮಾರ್ ಇದ್ದರು.