ಸಾರಾಂಶ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್. ಅವರಿಗೆ ಸೇರಿದ ಆರು ಸ್ಥಳಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿಯ ಬಗ್ಗೆ ಪರಿಶೀಲನೆ ನಡೆಸಿದ್ದು,ಈ ವೇಳೆ ಮೂರು ವಾಸದ ಮನೆಗಳು ಸೇರಿದಂತೆ ಚಿನ್ನಾಭರಣ, ಪತ್ತೆಯಾಗಿದೆ.
ಜಮೀನು ಮಾಡಿಕೊಂಡಿರುವುದು, ಮೈಸೂರು, ಬೆಂಗಳೂರು ಸೇರಿದಂತೆ ಮೂರು ಮನೆಗಳಿವೆ. ಇದಲ್ಲದೆ ನಾಲ್ಕು ಎಕರೆ 27 ಗುಂಟೆ ಕೃಷಿ ಜಮೀನು ಹೊಂದಿದ್ದಾರೆ. ಇದರ ಆಸ್ತಿ ಮೌಲ್ಯ 2.12 ಕೋಟಿ ರು. ಆಗಿರುತ್ತದೆ. 19.40 ಲಕ್ಷ ರು. ಮೌಲ್ಯದ ಚಿನ್ನಾಭರಣಗಳು, 20.50 ಲಕ್ಷ ರು.ಮೌಲ್ಯದ ವಾಹನಗಳು, ಜಮೀನು ಖರೀದಿಸಲು 10 ಲಕ್ಷ ರು. ಮುಂಗಡ ಹಣ ನೀಡಿರುವುದು, ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ 16 ಲಕ್ಷ ರು. ಬ್ಯಾಂಕ್ ಬ್ಯಾಲೆನ್ಸ್ ಇರುವುದು ಪತ್ತೆಯಾಗಿದೆ.
ಆನಂದ್ ಸಿ.ಎಲ್. ಅವರ ಒಟ್ಟು ಆಸ್ತಿ ಮೌಲ್ಯ 2.77 ಕೋಟಿ ರು. ಆಗಿರುತ್ತದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.ಪಾಲಿಕೆ ಆಯುಕ್ತ ಆನಂದ ಅವರು ಈ ಹಿಂದೆ ಬೇರೆ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೂ ಅಕ್ರಮ ಸಂಪತ್ತಿನ ಬಗ್ಗೆ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ಇತ್ತೀಚೆಗೆ ಆಯುಕ್ತ ಆನಂದ್ ಅವರಿಗೆ ವರ್ಗಾವಣೆಯಾಗಿದ್ದರೂ ಅದನ್ನು ಅರ್ಧದಲ್ಲೇ ತಡೆದು, ಇಲ್ಲೇ ಆಯುಕ್ತರಾಗಿ ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದರು.