ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೆ. ದರ್ಶನ್ ಗೌಡ ಅವರು ಕೆಲಸ ನಿರ್ವಹಿಸುತ್ತಿರುವ ಕಚೇರಿ, ಬೆಂಗಳೂರಿನ ಆರು ಮನೆಗಳು ಮತ್ತು ತುರುವೇಕೆರೆ ತಾಲೂಕಿನ ನಿವಾಸ ಸೇರಿ ಸುಮಾರು 8 ಕಡೆ ದಾಳಿ ನಡೆದಿದೆ.
ಚಿಕ್ಕಬಳ್ಳಾಪುರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಜೆ. ದರ್ಶನ್ ಗೌಡ ಅವರ ನಿವಾಸ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೆ. ದರ್ಶನ್ ಗೌಡ ಅವರು ಕೆಲಸ ನಿರ್ವಹಿಸುತ್ತಿರುವ ಕಚೇರಿ, ಬೆಂಗಳೂರಿನ ಆರು ಮನೆಗಳು ಮತ್ತು ತುರುವೇಕೆರೆ ತಾಲೂಕಿನ ನಿವಾಸ ಸೇರಿ ಸುಮಾರು 8 ಕಡೆ ದಾಳಿ ನಡೆದಿದೆ.ಬೆಂಗಳೂರಿನ ಬಗಲಗುಂಟೆಯ ಸೌಂದರ್ಯ ಬಡಾವಣೆಯಲ್ಲಿನ ಎರಡು ಮನೆಗಳು, ಮಲ್ಲಸಂದ್ರದಲ್ಲಿನ ಎರಡು ಮನೆಗಳು, ಹೆಸರಘಟ್ಟದ ಸೋಲದೇವನಹಳ್ಳಿಯಲ್ಲಿನ ಒಂದು ಮನೆ, ಯಶವಂತಪುರ, ತುಮಕೂರು ಜಿಲ್ಲೆಯ ತುರುವೇಕರೆ ತಾಲೂಕು ವಡನಘಟ್ಟದಲ್ಲಿನ ಅವರ ಮಾವನ ಮನೆಯ ಮೇಲೆಯೂ ಸಹಾ ದಾಳಿ ನಡೆದಿದೆ.
ಜೆ.ದರ್ಶನ್ ಗೌಡ ಅವರ ಆದಾಯದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಆದಾಯಕ್ಕಿಂತಲೂ ಆಸ್ತಿಯು ಶೇ. 138.22ರಷ್ಟು ಹೆಚ್ಚಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.ಸಿಕೆಬಿ-5 ಜೆ. ದರ್ಶನ್ ಗೌಡ
ಸಿಕೆಬಿ-6 ಲೋಕಾ ದಾಳಿಗೆ ಒಳಗಾದ ಬೆಂಗಳೂರಿನ ಬಗಲಗುಂಟೆಯ ಸೌಂದರ್ಯ ಬಡಾವಣೆಯಲ್ಲಿನ ಜೆ. ದರ್ಶನ್ ಗೌಡ ಮನೆ