ಲಂಚ ಸ್ವೀಕರಿಸುವಾಗ ಆಲೂರು ಪಪಂ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

| Published : Feb 14 2025, 12:30 AM IST

ಲಂಚ ಸ್ವೀಕರಿಸುವಾಗ ಆಲೂರು ಪಪಂ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕೈಗಾರಿಕೋದ್ಯಮ ನಡೆಸಲು ಈ ಖಾತಾ ಮಾಡಿಕೊಡುವುದಕ್ಕಾಗಿ ಉದ್ಯಮಿ ಯುನಸ್ ಅವರಿಂದ ಎರಡು ಲಕ್ಷ ರು. ಬೇಡಿಕೆ ಇಟ್ಟು ₹70,000 ಸ್ವೀಕರಿಸುವಾಗ ಪಪಂ ಮುಖ್ಯಾಧಿಕಾರಿ ಗುರುವಾರ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.

ಆಲೂರು: ಕೈಗಾರಿಕೋದ್ಯಮ ನಡೆಸಲು ಈ ಖಾತಾ ಮಾಡಿಕೊಡುವುದಕ್ಕಾಗಿ ಉದ್ಯಮಿ ಯುನಸ್ ಅವರಿಂದ ಎರಡು ಲಕ್ಷ ರು. ಬೇಡಿಕೆ ಇಟ್ಟು ₹70,000 ಸ್ವೀಕರಿಸುವಾಗ ಪಪಂ ಮುಖ್ಯಾಧಿಕಾರಿ ಗುರುವಾರ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.

ಇಲ್ಲಿನ ಪಪಂ ಮುಖ್ಯಾಧಿಕಾರಿ ಬಸವರಾಜುರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಒಂದು ಎಕರೆ 17 ಗುಂಟೆ ಜಾಗದಲ್ಲಿ ಭೋಗ್ಯ ಕರಾರಿನ ಜಾಗದಲ್ಲಿ ಮರದ ಸಾಮಿಲ್ ನಡೆಸಲು ಈ ಖಾತಾಕ್ಕಾಗಿ 2 ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಹಾಸನ ನಗರದ ನಿವಾಸಿ ಯುನಸ್ ಎಂಬುವರ ದೂರಿನ ನೀಡಿದ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

ಈಗಾಗಲೇ ಎರಡು ಹಂತದಲ್ಲಿ ಹಣ ನೀಡಿದ್ದು, ಮತ್ತೊಮ್ಮೆ 70.000 ರು. ಪಡೆಯುವ ವೇಳೆ ಪಪಂ ಮುಖ್ಯಾಧಿಕಾರಿ ಬಸವರಾಜು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪಪಂಯಲ್ಲಿ ಅಧಿಕಾರ ಸ್ವೀಕರಿಸಿ ಕೇವಲ 3-4 ತಿಂಗಳಿನಲ್ಲೇ ಭ್ರಷ್ಟಾಚಾರದ ಬಲೆಯಲ್ಲಿ ಮುಖ್ಯಾಧಿಕಾರಿ ಸಿಕ್ಕಿಬಿದ್ದಿದ್ದಾರೆ. ಹಾಸನ ಜಿಲ್ಲಾ ಲೋಕಾಯುಕ್ತ ಎಸ್ಪಿ ನಂದಿರವರ ಮಾರ್ಗದರ್ಶನದಲ್ಲಿ ಲೋಕಯುಕ್ತ ಇನ್ಸ್‌ಪೆಕ್ಟರ್ ಬಾಲು ಹಾಗೂ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿದ್ದು ಅಧಿಕಾರಿಯನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.