ಸಾರಾಂಶ
ಮಂಗಳೂರು ಮಿನಿ ವಿಧಾನಸೌಧದಲ್ಲಿರುವ ಸರ್ವೇಯರ್ ಶೀತಲ್‌ರಾಜ್ ಎಂಬವರೇ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದವರು.
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಹೊರವಲಯದ ನೀರುಮಾರ್ಗ ಎಂಬಲ್ಲಿ ಲಂಚ ಸ್ವೀಕರಿಸುತ್ತಿದ್ದಾಗಲೇ ಸರ್ವೆಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಮಂಗಳೂರು ಮಿನಿ ವಿಧಾನಸೌಧದಲ್ಲಿರುವ ಸರ್ವೇಯರ್ ಶೀತಲ್‌ರಾಜ್ ಎಂಬವರೇ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದವರು.
29.02.2024 ರಂದು ಸರ್ವೇಯರ್ ಶೀತಲ್ ರಾಜ್ ಅವರು ಸ್ಥಳಕ್ಕೆ ಸರ್ವೆಗೆ ಬಂದಿದ್ದು, ಜಮೀನಿನ ಸರ್ವೆ ಕಾರ್ಯ ನಡೆಸಿ ಸ್ಥಳ ಮಹಜರು ನಡೆಸಿದ್ದರು. ಬಳಿಕ ಜಮೀನಿನ ನಕ್ಷೆ ನೀಡಲು ಸ್ವಲ್ಪ ಖರ್ಚು ಇದೆ ಎಂದು ತಿಳಿಸಿ ಸರ್ವೆಯರ್ ಶೀತಲ್ ರಾಜ್ ಅವರು 5 ಸಾವಿರ ರು. ವಂಚಕ್ಕೆ ಬೇಡಿಕೆ ಇರಿಸಿದ್ದರು. ಪಿರ್ಯಾದಿದಾರರು ಹಣ ಸ್ವಲ್ಪ ಕಡಿಮೆ ಮಾಡಿ ಎಂದು ಚರ್ಚೆ ಮಾಡಿದಾಗ 4 ಸಾವಿರ ರು. ಲಂಚದ ಹಣಕ್ಕೆ ಬೇಡಿಕೆ ಇರಿಸಿದ್ದರು. ಗುರುವಾರ ಸರ್ವೇಯರ್ ಶೀತಲ್ ರಾಜ್ ಅವರು 4 ಸಾವಿರ ರು. ಲಂಚದ ಮೊತ್ತ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ನಂತರ ಅವರನ್ನು ಬಂಧಿಸಿ ವಂಚದ ಮೊತ್ತವನ್ನು ವಶವಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಲೋಕಾಯುಕ್ತ ಎಸ್ಪಿ ಸಿ.ಎ.ಸೈಮನ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಚಲುವರಾಜು, ಡಾ. ಗಾನ ಪಿ. ಕುಮಾರ್, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ, ಸುರೇಶ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.