ಕೆನ್ನಾಳು ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಲೋಕೇಶ್ ಗೌಡ, ಉಪಾಧ್ಯಕ್ಷರಾಗಿ ಕಲಾವತಿ ಆಯ್ಕೆ

| Published : Apr 24 2025, 11:51 PM IST

ಕೆನ್ನಾಳು ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಲೋಕೇಶ್ ಗೌಡ, ಉಪಾಧ್ಯಕ್ಷರಾಗಿ ಕಲಾವತಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಸಂಘದಲ್ಲಿ 12 ಮಂದಿ ನಿರ್ದೇಶಕರಲ್ಲಿ 10 ಮಂದಿ ಜೆಡಿಎಸ್ ಹಾಗೂ ಇಬ್ಬರು ರೈತಸಂಘ-ಕಾಂಗ್ರೆಸ್ ಬೆಂಬಲಿತರಿದ್ದರು. ಚುನಾವಣೆ ನಡೆದು ಕೆ.ಎಚ್.ಲೋಕೇಶ್‌ಗೌಡ ಹಾಗೂ ಕಲಾವತಿ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕೆನ್ನಾಳು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೆ.ಎಚ್.ಲೋಕೇಶ್ ಗೌಡ, ಉಪಾಧ್ಯಕ್ಷರಾಗಿ ಕಲಾವತಿ ಅವಿರೋಧವಾಗಿ ಆಯ್ಕೆಯಾದರು.

ಸಂಘದಲ್ಲಿ 12 ಮಂದಿ ನಿರ್ದೇಶಕರಲ್ಲಿ 10 ಮಂದಿ ಜೆಡಿಎಸ್ ಹಾಗೂ ಇಬ್ಬರು ರೈತಸಂಘ-ಕಾಂಗ್ರೆಸ್ ಬೆಂಬಲಿತರಿದ್ದರು. ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕೆ.ಎಚ್.ಲೋಕೇಶ್‌ಗೌಡ ಹಾಗೂ ಕಲಾವತಿ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಿರ್ಮಲ ಘೋಷಿಸಿದರು.

ಅಧ್ಯಕ್ಷ - ಉಪಾಧ್ಯಕ್ಷರಾಗಿ ಕೆ.ಎಚ್.ಲೋಕೇಶ್‌ಗೌಡ, ಕಲಾವತಿ ಆಯ್ಕೆಯಾಗುತ್ತಿದ್ದಂತೆಯೇ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ನಂತರ ಎಲ್ಲಾ ನಿರ್ದೇಶಕರು, ಮುಖಂಡರು ಅಭಿನಂದಿಸಿದರು.

ಅಧ್ಯಕ್ಷ ಕೆ.ಎಚ್.ಲೋಕೇಶ್‌ಗೌಡ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಶೀರ್ವಾದ ಹಾಗೂ ಎಲ್ಲಾ ನಿರ್ದೇಶಕರ ಬೆಂಬಲದಿಂದ ಅಧ್ಯಕ್ಷನಾಗಿದ್ದೇನೆ. ನಮ್ಮ ನಾಯಕರ ಸಲಹೆ, ಸೂಚನೆ, ಮಾರ್ಗದರ್ಶನದಂತೆ ಸಂಘದ ಅಭಿವೃದ್ಧಿಗೆ ಶ್ರಮಿಸುವ ಜತೆಗೆ ಸರ್ಕಾರದಿಂದ ರೈತರಿಗೆ ದೊರೆಯುವ ಸಾಲಸೌಲಭ್ಯ, ರಸಗೊಬ್ಬರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ನಿರ್ದೇಶಕರಾದ ಅಭಿನಂದನ್, ರಾಜೇಶ್, ಬೆಟ್ಟೇಗೌಡ, ದೊಡ್ಡೇಗೌಡ, ಎಂ.ಸ್ವಾಮಿ, ರಾಮೇಗೌಡ, ಗಿರೀಶ್, ಕೆ.ಕೆ.ಕಾಳಯ್ಯ, ಬಸವರಾಜು, ಪದ್ಮಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಆರ್.ರುದ್ರೇಶ್, ಕೆ.ಟಿ.ವಿಶ್ವನಾಥ್, ಮುಖಂಡರಾದ ವೇಣುಗೋಪಾಲ್, ಪುಟ್ಟೇಗೌಡ, ನಂದೀಶ್, ಅನಿಲ್‌ಕುಮಾರ್, ಲಕ್ಷ್ಮೀನಾರಾಯಣ್, ರಾಜೇಶ್, ಪ್ರಸನ್ನ, ಹರ್ಷ, ರಾಜೀವ್, ಅನೀಲ್, ಮಂಜು(ಕುಳ್ಳು), ಎಪಿಎಂಸಿ ನಾಗಣ್ಣ, ಶ್ರೀಧರ, ಕಾರ್‍ಯದರ್ಶಿ ಮೀನಾಕ್ಷಿ ಸೇರಿದಂತೆ ಹಲವರು ಹಾಜರಿದ್ದರು.