ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೇಂದ್ರ ಸರ್ಕಾರ ಕೊಡುವ ಅತ್ಯುತ್ತಮ ವೈಜ್ಞಾನಿಕ ಶ್ರೇಷ್ಠ ಪ್ರಶಸ್ತಿಗೆ ಹೊಸದುರ್ಗ ಮೂಲದ ಬಿ.ಎನ್.ಲೋಕೇಶ್ ಭಾಜನರಾಗಿದ್ದಾರೆ. ಜ.26ರ ಗಣರಾಜ್ಯೋತ್ಸವದಂದು ದೆಹಲಿಯ ಡಿಆರ್‌ಡಿಒ ಕೇಂದ್ರ ಕಚೇರಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
- ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶಸ್ತಿ ಪ್ರದಾನ
- ಪ್ರಮಾಣಪತ್ರ, ಪದಕ, ₹5 ಲಕ್ಷ ನಗದು ಒಳಗೊಂಡ ಪ್ರಶಸ್ತಿ- - -
ಕನ್ನಡಪ್ರಭ ವಾರ್ತೆ ಹೊಸದುರ್ಗವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೇಂದ್ರ ಸರ್ಕಾರ ಕೊಡುವ ಅತ್ಯುತ್ತಮ ವೈಜ್ಞಾನಿಕ ಶ್ರೇಷ್ಠ ಪ್ರಶಸ್ತಿಗೆ ಹೊಸದುರ್ಗ ಮೂಲದ ಬಿ.ಎನ್.ಲೋಕೇಶ್ ಭಾಜನರಾಗಿದ್ದಾರೆ. ಜ.26ರ ಗಣರಾಜ್ಯೋತ್ಸವದಂದು ದೆಹಲಿಯ ಡಿಆರ್‌ಡಿಒ ಕೇಂದ್ರ ಕಚೇರಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಲೋಕೇಶ್ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಪಾರ್ವತಮ್ಮ ಮತ್ತು ನಾಗಪ್ಪ ದಂಪತಿ ಪುತ್ರ. ಸ್ವಗ್ರಾಮ ಹೊನ್ನೇನಹಳ್ಳಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಪ್ರೌಢ ಶಿಕ್ಷಣವನ್ನು ಜಾನಕಲ್ ಶಂಕರ ಶಾಲೆಯಲ್ಲಿ, ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ, ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿ, ಕೊಯಮತ್ತೂರಿನಲ್ಲಿ ಎಂ.ಟೆಕ್. ಮುಗಿಸಿದ್ದಾರೆ.1996ರಲ್ಲಿ ಡಿಆರ್‌ಡಿಒಗೆ ಸೇರಿದ ಅವರು ಯುದ್ಧ ವಿಮಾನಗಳಾದ ಎಲ್‌ಸಿಎ, ಎಂಐಜಿ-27, ಎಂಐಜಿ-29 ಮತ್ತು ಎಸ್‌ಯು-30, ಎಂಕೆಐ ಏರ್ ಕ್ರಾಫ್ಟ್ ಗಳಿಗಾಗಿ ಏವಿಯಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ ವಾರ್ ಫೇರ್ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ 30 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ.
ಲೋಕೇಶ್ ಅವರ ಕ್ಯಾಡಿಕ್ (ಡೇರ್), ಫೈಟರ್ ಏರ್ ಕ್ರಾಫ್ಟ್‌ಗಾಗಿ ಏವಿಯಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಂಗಳ ವಿನ್ಯಾಸ, ಅಭಿವೃದ್ಧಿ, ಏಕೀಕರಣ ಮತ್ತು ಪರೀಕ್ಷೆಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗೆಗಾಗಿ ಡಿಆರ್‌ಡಿಒಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಅತ್ಯುತ್ತಮ ವೈಜ್ಞಾನಿಕ ಶ್ರೇಷ್ಠ ಪ್ರಶಸ್ತಿ ನೀಡಲಾಗುತ್ತದೆ. ಅತ್ಯುತ್ತಮ ವೈಜ್ಞಾನಿಕ ಶ್ರೇಷ್ಠ ಪ್ರಶಸ್ತಿಯು ಪ್ರಮಾಣಪತ್ರ, ಪದಕ ಮತ್ತು ₹5 ಲಕ್ಷ ನಗದು ಮೊತ್ತವನ್ನು ಒಳಗೊಂಡಿದೆ.- - -
(ಕೋಟ್) ನನ್ನ ಕಾರ್ಯ ಸಾಧನೆಗೆ ಕೈ ಜೋಡಿಸಿದ ತಂಡ, ನನ್ನ ಕುಟುಂಬ ವರ್ಗ, ಬೆನ್ನುತಟ್ಟಿ ಪ್ರೋತ್ಸಾಹಿಸಿದ ಹಿರಿಯರ ಸಹಕಾರ ಮತ್ತು ಪ್ರೇರಣೆ ಸಿಕ್ಕಿದ್ದರಿಂದ ಪ್ರಶಸ್ತಿ ಲಭಿಸಿದೆ. ಹೊಸದುರ್ಗ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ಜನಿಸಿದ ಇಂತಹದೊಂದು ಪ್ರಶಸ್ತಿಯನ್ನು ಪಡೆದುಕೊಳ್ಳುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಅವಾರ್ಡ್ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ.- ಲೋಕೇಶ್, ಪ್ರಶಸ್ತಿ ಪುರಸ್ಕೃತ
- - --30ಎಚ್‌ಎಸ್‌ಡಿ2:
ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿಯ ಡಿಆರ್‌ಡಿಒ ಕೇಂದ್ರ ಕಚೇರಿಯಲ್ಲಿ ಗಣರಾಜ್ಯೋತ್ಸವ ದಿನದಂದು ಹೊನ್ನೇನಹಳ್ಳಿ ಗ್ರಾಮದ ಲೋಕೇಶ್ ಅವರಿಗೆ ಅತ್ಯುತ್ತಮ ವೈಜ್ಞಾನಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದರು.