ಲೋಕಿಕೆರೆ ನಾಗರಾಜ್ ಜನ್ಮದಿನ: ಅಂಧ ಮಕ್ಕಳಿಗೆ ಅನ್ನದಾನ

| Published : Aug 24 2025, 02:00 AM IST

ಸಾರಾಂಶ

ಶಿವಪ್ರಸಾದ್ ಕುರುಡಿಮಠ ಅಭಿಮಾನಿ ಬಳಗದಿಂದ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ರವರ ಜನ್ಮದಿನಾಚರಣೆ ಪ್ರಯುಕ್ತ ಶನಿವಾರ ನಗರದ ಎಸ್.ಎಸ್.ಬಡಾವಣೆಯ ಅಂಗವಿಕಲ ಆಶಾಕಿರಣ ಟ್ರಸ್ಟಿನ ಅಂಧ ಮಕ್ಕಳ ಶಾಲೆಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ: ಶಿವಪ್ರಸಾದ್ ಕುರುಡಿಮಠ ಅಭಿಮಾನಿ ಬಳಗದಿಂದ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ರವರ ಜನ್ಮದಿನಾಚರಣೆ ಪ್ರಯುಕ್ತ ಶನಿವಾರ ನಗರದ ಎಸ್.ಎಸ್.ಬಡಾವಣೆಯ ಅಂಗವಿಕಲ ಆಶಾಕಿರಣ ಟ್ರಸ್ಟಿನ ಅಂಧ ಮಕ್ಕಳ ಶಾಲೆಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಲೋಕಿಕೆರೆ ನಾಗರಾಜ, ಅಭಿಮಾನಿ ಬಳಗದ ಹರೀಶ್ ಶಾಮನೂರ್, ಶಿವಕುಮಾರ ಹಲಗೇರಿ, ಪ್ರವೀಣ್ ಕೊರಟೆರ್, ಕಿರಣ್ ಸತ್ತುರ್, ಮಣಿಕಂಠ ತಲವಾರ್, ಗುರುದೀಪ್, ರಾಕೇಶ್, ಗಿರೀಶ್, ಬಾರ್ಗವ್, ಚನ್ನೇಶ್ ಹಾಗೂ ಬಿಜೆಪಿ ಮುಖಂಡರಾದ ಎನ್.ಎಚ್ ಹಾಲೇಶ್, ಶಿವಕುಮಾರ ಹಳೇಬಾತಿ, ಸಿದ್ದೇಶ್, ರೇವಣಸಿದ್ಧಪ್ಪ, ಶಂಕರಮೂರ್ತಿ, ರಾಜು ಶಾಮನೂರು, ಮಂಜುನಾಥ್ ಗುತ್ತೂರು, ಜಯರುದ್ರಪ್ಪ, ಮಂಜನಾಯ್ಕ್ ಇತರರು ಹಾಜರಿದ್ದರು.