ಅಲ್ಪಾವಧಿಯಲ್ಲೇ ಲೋಕನಾಯಕ ಸಹಕಾರಿ ಸಾಧನೆ ಅಮೋಘ: ಎಸ್‌.ಆರ್. ಪಾಟೀಲ

| Published : Aug 12 2025, 12:32 AM IST

ಅಲ್ಪಾವಧಿಯಲ್ಲೇ ಲೋಕನಾಯಕ ಸಹಕಾರಿ ಸಾಧನೆ ಅಮೋಘ: ಎಸ್‌.ಆರ್. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕನಾಯಕ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘ ದಶಕದ ಅವಧಿಯಲ್ಲಿ 6ನೇ ಶಾಖೆ ಪ್ರಾರಂಭಿಸಿರುವುದು ಸಾಮಾನ್ಯ ಸಂಗತಿಯಲ್ಲ. ಅಶೋಕ ಪಾಟೀಲರ ಶ್ರಮ ಹಾಗೂ ಆಡಳಿತ ಮಂಡಳಿಯ ಸಮರ್ಥ ಆಡಳಿತವೇ ಯಶಸ್ಸಿಗೆ ಕಾರಣವೆಂದು ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕೆರೂರ

ಲೋಕನಾಯಕ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘ ದಶಕದ ಅವಧಿಯಲ್ಲಿ 6ನೇ ಶಾಖೆ ಪ್ರಾರಂಭಿಸಿರುವುದು ಸಾಮಾನ್ಯ ಸಂಗತಿಯಲ್ಲ. ಅಶೋಕ ಪಾಟೀಲರ ಶ್ರಮ ಹಾಗೂ ಆಡಳಿತ ಮಂಡಳಿಯ ಸಮರ್ಥ ಆಡಳಿತವೇ ಯಶಸ್ಸಿಗೆ ಕಾರಣವೆಂದು ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಹೇಳಿದರು.

ಕೆರೂರ ಪಟ್ಟಣದಲ್ಲಿ ಸೋಮವಾರ ಮುಧೋಳದ ಲೋಕನಾಯಕ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘ ಕೆರೂರ ಶಾಖೆ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಪಡೆಯಬೇಕಾದರೆ ದಾಖಲೆ ಹೊಂದಿಸುವಲ್ಲಿ ಸುಸ್ತಾಗಬೇಕಾಗುತ್ತದೆ. ಕಡು ಬಡವನಿಗೂ ಸುಲಭವಾಗಿ ಸಹಾಯ ಸಿಗುವುದು ಸಹಕಾರಿ ಸಂಘಗಳಲ್ಲಿ ಮಾತ್ರ. ಸಹಕಾರಿ ಸಂಘಗಳು ಮೊದಲು ಠೇವಣಿದಾರರ ಹಿತಾಸಕ್ತಿ ಕಾಪಾಡುವುದು ಗುರುತರ ಜವಾಬ್ದಾರಿ ಜೊತೆಗೆ ಸಾಲಗಾರರನ್ನು ಗೌರವದಿಂದ ಕಾಣಬೇಕು. ಸಂಸ್ಥೆಯ ಬೆಳವಣಿಗೆಗೆ ಸಾಲಗಾರರು ಪ್ರಮುಖರು. ಬದ್ಧತೆ, ನಿಷ್ಠೆ, ಹಿತಾಸಕ್ತಿ ಸಹಕಾರಿ ಸಂಘಗಳ ಬೆಳವಣಿಗೆಗೆ ಪ್ರಮುಖ ಅಂಶಗಳು ಎಂಬುದನ್ನು ಆಡಳಿತ ಮಂಡಳಿ ಸದಾ ನೆನಪಿನಲ್ಲಿಟ್ಟುಕೊಂಡು ನಡೆದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಾಲಗಾರರು ಕೊಡುವ ಬಡ್ಡಿಯಿಂದಲೇ ಸಿಬ್ಬಂದಿಯ ವೇತನ, ಕಚೇರಿಯ ಖರ್ಚು ವೆಚ್ಚ ಲಾಭಾಂಶವೆಂಬುದನ್ನು ಆಡಳಿತ ಮಂಡಳಿ ಅರಿಯಬೇಕು. ಇಂದು ಅವಳಿ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳು ಅಭಿವೃದ್ಧಿ ಪಥದಲ್ಲಿ ನಡೆಯುತ್ತಿರುವುದಕ್ಕೆ ಸಹಕಾರಿ ಬ್ಯಂಕುಗಳ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಲೋಕನಾಯಕ ಸಹಕಾರಿ ಸಂಘ ಅಲ್ಪ ಅವಧಿಯಲ್ಲೇ 6ನೇ ಶಾಖೆ ಪ್ರಾರಂಭಿಸುತ್ತಿರುವುದನ್ನು ನೋಡಿದರೆ ಆಡಳಿತ ಮಂಡಳಿಯ ಪ್ರಭುದ್ಧತೆ ಎದ್ದು ಕಾಣುತ್ತದೆ. ಇದು ಉತ್ತರೋತ್ತರ ಅಭಿವೃದ್ಧಿ ಹೊಂದಿ 100 ಶಾಖೆ ತೆರೆಯುವತ್ತ ದಾಪುಗಾಲು ಇಡಲಿ ಎಂದು ಹಾರೈಸಿದರು.

ಸಂಘದ ಸಂಸ್ಥಾಪಕ ಅಶೋಕ ಪಾಟೀಲ ಪ್ರಾಸ್ತವಿಕವಾಗಿ ಮಾತನಾಡಿ, ಸಂಘ ಬೆಳೆದು ಬಂದ ದಾರಿ, ಪ್ರಗತಿಯ ಬಗ್ಗೆ ವಿವರಿಸಿ ನಮ್ಮೆಲ್ಲರ ಕಾರ್ಯಕ್ಕೆ ಜಿಲ್ಲೆಯ ಸಹಕಾರಿ ರಂಘದ ಭೀಷ್ಮ ಎಸ್‌.ಆರ್‌. ಪಾಟೀಲರು ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ಹೇಳಿದರು.

ಕೆರೂರ ಶಾಖೆಯ ಸಲಹಾ ಸಮಿತಿ ಸದಸ್ಯ ಶರಣಬಸಪ್ಪ ಪವಾಡಶೆಟ್ಟರ ಸ್ವಾಗತಿಸಿ ಪರಿಚಯಿಸಿದರು. ಚನ್ನಬಸಪ್ಪ ನಾಗನೂರ ನಿರೂಪಿಸಿದರು. ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಅಜಯಕುಮಾರ ಸರನಾಯಕ, ಬಸವೇಶ್ವರ ಸಹಕಾರಿ ಬ್ಯಾಂಕ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಜಿ.ಎನ್‌. ಪಾಟೀಲ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಸಂತೋಷ ರಾಠೋಡ ಆಗಮಿಸಿದ್ದರು.

ಸಾನ್ನಿಧ್ಯ ವಹಿಸಿದ್ದ ಕೆರೂರ ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷೆ ಭಾರತಿ ಅಶೋಕ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಮನ್‌ ಸತೀಶ ಕೋಲಾರ, ಕಾನೂನು ಸಲಹೆಗಾರ ರಾಮಕೃಷ್ಣ ಬುದ್ನಿ, ಆರ್ಥಿಕ ಸಲಹೆಗಾರ ಜಗದೀಶ ಪಾಟೀಲ, ಕಾಂತೇಶ ವಿಜಾಪೂರ, ಚಿದಾನಂದ ಅಂಕದ, ಅರುಣ ಕಟ್ಟಿಮನಿ, ನಾಗೇಶ ಚತ್ರಭಾನ, ಅಶೋಕ ಪಾಟೀಲ, ಅಶೋಕ ದಾಸಪ್ಪನವರ, ಮಹೇಶಗೌಡ ಓದುಗೌಡ್ರ, ನೀಲನಗೌಡ ದಾಸಪ್ಪನವರ ಇತರರು ಇದ್ದರು.