ಸಾರಾಂಶ
ಕನ್ನಡಪ್ರಭ ವಾರ್ತೆ ಐಗಳಿ ಸಮೀಪದ ಬಾಡಗಿ ಗ್ರಾಮದ ಸುಪ್ರಸಿದ್ದ ಹನುಮಾನ ದೇವರ ಜಾತ್ರೆ ನಿಮಿತ್ತ ಹನುಮಾನ ದೇವರ ಪಲ್ಲಕ್ಕಿ ಉತ್ಸವ ಮತ್ತು ನೀರೋಕಳಿ ಅದ್ಧೂರಿ ಹಾಗೂ ಶಾಂತಿಯುತವಾಗಿ ನಡೆಯಿತು. ಮಧ್ಯಾಹ್ನದವರೆಗೂ ದೇವರಿಗೆ ನೈವೇದ್ಯ ಅರ್ಪಿಸಿದ ನೂರಾರು ಭಕ್ತರು ನಡೆದ ಭವ್ಯ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ತಮ್ಮ ಸೇವೆ ಸಲ್ಲಿಸಿ ಕೃತಾರ್ಥರಾದರು.ಉತ್ಸವದಲ್ಲಿ ಕುದುರೆ ಕುಣಿತ, ಡೋಳ್ಳು ಕುಣಿತ, ಕುಂಭಮೇಳ ಹಾಗೂ ವಿವಿಧ ಕಲಾವಿದರ ಕಲಾ ಪ್ರದರ್ಶನ ಜನಮನ ಸೆಳೆದವು. ನೂರಾರು ಹನುಮ ವೇಶದಾರಿಗಳು ನೂರಾರು ಅಡಿ ಎತ್ತರದ ಕಂಬದ ತುಟ್ಟ ತುದಿಗೆ ನೀರು ಎಸೆದು ತಮ್ಮ ಶಕ್ತಿ ಪ್ರದರ್ಶನ ತೋರಿದರು.ಹತ್ತಾರು ಗ್ರಾಮಗಳ ಹನುಮನ ಭಕ್ತರು ಜಾತ್ರಾಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಅನ್ನ ಸಂರ್ತಪಣೆ ಮಾಡುವುದರ ಮೂಲಕ ದೇವರಿಗೆ ತಮ್ಮ ಸೇವೆ ಸಲ್ಲಿಸಿ, ಸ್ವಯಂ ಸೇವಕರಾಗಿ ದುಡಿದು ಜನಮಣ್ಣನೆ ಪಡೆದರು.ಗ್ರಾಮದ ಹಿರಿಯರು, ಜಾತ್ರಾ ಕಮಿಟಿ ಸದಸ್ಯರು ಹಾಗೂ ಯುವಕರು ಸ್ವಯಂ ಸೇವಕರಾಗಿ ಅಚ್ಚುಕಟ್ಟಿನಿಂದ ಕಾರ್ಯನಿರ್ವಹಿಸಿ ಭಲೇ ಎನಿಸಿಕೊಂಡರು. ಬಾಡಗಿ, ಅರಟಾಳ, ತುಂಗಳ, ಕೊಕಟನೂರ, ಐಗಳಿ, ಕೋಹಳ್ಳಿ, ಸಾವಳಗಿ, ಹಾಲಳ್ಳಿ ಗ್ರಾಮಸ್ಥರು ಹನುಮಾನ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದರು.ತಾಲೂಕು ಪಂಚಾಯತಿ ಮಾಜಿ ಸದಸ್ಯ ಮಲ್ಲಪ್ಪ ಡಂಗಿ, ಸಿದ್ದು ಹಳ್ಳಿ, ಬಿ.ಆರ್.ಡಂಗಿ, ಶಿವಾನಂದ ನೇಮಗೌಡ, ರೇವಪ್ಪ ತೇಲಿ, ಸತ್ಯಪ್ಪ ಬಿರಾದಾರ, ಸಾಬು ತೇಲಿ, ರಾವಸಾಬ ಬಿರಾದಾರ, ಚಂದ್ರಕಾಂತ ಮಮದಾಪೂರ, ಸಿದ್ದಗೊಂಡ ಬಿರಾದಾರ, ರಾಮಣ್ಣ ಹುನ್ನೂರ, ರಾಮಚಂದ್ರ ಬಿಜ್ಜರಗಿ, ಮನೋಹರ ಜಂಬಗಿ, ಭೀಮರಾಯ ಪೂಜಾರಿ ಇದ್ದರು.