ಸಾರಾಂಶ
ಶ್ರೀಕೃಷ್ಣನ ಸಂದೇಶಗಳು ಸರ್ವಕಾಲಕ್ಕೂ ಸತ್ಯ. ಎಲ್ಲಿ ಸತ್ಯ ಧರ್ಮನಿಷ್ಠೆಗೆ ಬೆಲೆ ಇದೆಯೋ, ಅಲ್ಲಿ ಕೃಷ್ಣನ ಆಶೀರ್ವಾದ ಇರುತ್ತದೆ ಎಂದು ಸಿದ್ಧಚೇತನಾಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದಶ್ರೀ ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಸೈದಾಪುರ
ಶ್ರೀಕೃಷ್ಣನ ಸಂದೇಶಗಳು ಸರ್ವಕಾಲಕ್ಕೂ ಸತ್ಯ. ಎಲ್ಲಿ ಸತ್ಯ ಧರ್ಮನಿಷ್ಠೆಗೆ ಬೆಲೆ ಇದೆಯೋ, ಅಲ್ಲಿ ಕೃಷ್ಣನ ಆಶೀರ್ವಾದ ಇರುತ್ತದೆ ಎಂದು ಸಿದ್ಧಚೇತನಾಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದಶ್ರೀ ಆಶೀರ್ವಚನ ನೀಡಿದರು.ಪಟ್ಟಣದ ಸಿದ್ಧಚೇತನಾಶ್ರಮದ ಶ್ರೀ ಸಿದ್ಧಾರೂಢ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ ಕಾರ್ಯಕ್ರಮದಲ್ಲಿ ಭಕ್ತರಿಗೆ ಶ್ರೀಗಳು ಕೃಷ್ಣನ ಸಂದೇಶ ನೀಡಿದರು. ಶ್ರೀಕೃಷ್ಣ ಧರ್ಮ ರಕ್ಷಣೆಗಾಗಿ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡು, ಧರ್ಮ-ನ್ಯಾಯಕ್ಕೆ ಜಯ ಕೊಡಿಸಿದ ಪುಣ್ಯವಂತ. ಈ ಮಾರ್ಗವನ್ನು ತಮ್ಮ ಮಕ್ಕಳಿಗೆ ತಿಳಿಸಿ ಮುಂದಿನ ಪೀಳಿಗೆಯಲ್ಲಿ ಧರ್ಮ ಸಂಸ್ಕೃತಿಯನ್ನು ಬೆಳಿಸಿ, ಪ್ರತಿಯೊಬ್ಬರು ಧರ್ಮಾಚರಣೆಯಲ್ಲಿ ತೊಡಗಿ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಸತ್ಕಾರ್ಯಗಳನ್ನು ಮಾಡಬೇಕು ಎಂದರು.
ಶ್ರೀಕೃಷ್ಣನ ತೊಟ್ಟಿಲೋತ್ಸವದಲ್ಲಿ ಶ್ರೀಕೃಷ್ಣನ 108 ಹೆಸರುಗಳನ್ನು ಉಚ್ಛರಿಸಿ ನಾಮಕರಣ ಮಾಡಲಾಯಿತು. ನಂತರ ಭಕ್ತರಿಂದ ಹಲವು ಜೋಗುಳ ಹಾಡುಗಳು ಹಾಗೂ ಮಕ್ಕಳು ಭಕ್ತಿ ಗೀತೆಗಳು ಹಾಡಿದರು. ಹಾಗೂ ಪೋಷಕರು ತಮ್ಮ ಮಕ್ಕಳನ್ನು ಕೃಷ್ಣ ರಾಧೆ ವೇಷ ತೊಡಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸುಭಾಷ್ ಶೇಠ ದೋಕಾ, ನಾರಾಯಣಪ್ಪ ಪಾಲಾದಿ, ವಿಶ್ವನಾಥರೆಡ್ಡಿ ಚಿಗಾನೂರು, ಬನ್ನಯ್ಯ ಕೆ.ಬಿ, ಮಲ್ಲುಗೌಡ ಸೈದಾಪುರ, ಬಾಲಪ್ಪ ವಿಶ್ವಕರ್ಮ, ವೀರರೆಡ್ಡಿಗೌಡ ಬಾಲಛೇಡ್, ದೇವು ಘಂಟಿ, ಚೈನರಾಮ್, ತಾಯಪ್ಪ ಚಿಗಿರಿ, ದೇವು ಕಲಾಲ್, ಹಾಗೂ ಹೆಗ್ಗಣಗೇರಾ, ನೀಲಹಳ್ಳಿ, ರಾಂಪೂರು, ಬೆಳಗುಂದಿ, ಗೊಂದಡಗಿ, ಬಾಲಛೇಡ್ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಇದ್ದರು.