ಸಾರಾಂಶ
ತಡವಾಗಿ ಆದರೂ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಕ್ಕೆ ಸಿಗುತ್ತದೆ ಎನ್ನುವುದ್ನು ಕೃಷ್ಣನು ಕುರುಕ್ಷೇತ್ರದ ಯುದ್ಧದಲ್ಲಿ ಇಡೀ ಜಗತ್ತಿಗೆ ಸಾರಿ ಹೇಳಿದ್ದಾನೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಅಧರ್ಮವನ್ನು ನಾಶಮಾಡಿ ಧರ್ಮವನ್ನು ಧರೆಯ ಮೇಲೆ ಮರುಸ್ಥಾಪಿಸಲು ಭಗವಾನ ಶ್ರೀಕೃಷ್ಣನು ಭಾರತದ ಪೂಣ್ಯ ಭೂಮಿಯಲ್ಲಿ ಅವತರಿಸಿದ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಕರೆಯುತ್ತೇವೆ ಎಂದು ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಅನಾಲೀಸಾ ಬಾಸ್ಕೋ ಅಭಿಪ್ರಾಯಪಟ್ಟರು.ನಗರದ ವಜ್ರಹನುಮಾನ ನಗರದಲ್ಲಿರುವ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಬಾಲ ಶ್ರೀಕೃಷ್ಣ ವೇಷಭೂಷಣ ಧರಿಸಿದ ಸುಮಾರು 200 ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶ್ರೀಕೃಷ್ಣನು ಸತ್ಯ ಮತ್ತು ನ್ಯಾಯದ ಪ್ರತೀಕ, ತಡವಾಗಿ ಆದರೂ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಕ್ಕೆ ಸಿಗುತ್ತದೆ ಎನ್ನುವುದ್ನು ಕೃಷ್ಣನು ಕುರುಕ್ಷೇತ್ರದ ಯುದ್ಧದಲ್ಲಿ ಇಡೀ ಜಗತ್ತಿಗೆ ಸಾರಿ ಹೇಳಿದ್ದಾನೆ. ಅಧರ್ಮದ ಮೂಲಕ ಮನುಷ್ಯ ಜಯಗಳಿಸಿದರೆ ಆ ಜಯದ ಸಂತೋಷವನ್ನು ಅನುಭವಿಸಲು ಸಾಧ್ಯವಿಲ್ಲ ಎನ್ನುವುದನ್ನು ಕುರುಕ್ಷೇತ್ರ ಯುದ್ಧದ ಕೊನೆಗೆ ದುರ್ಯೋಧನ ದಾರುಣ ಸಾವಿನ ಮೂಲಕ ತಪ್ಪು ಮಾಡಿದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸನ್ನಡತೆಯ ಪಾಠವನ್ನು ಭಗವಾನ ಶ್ರೀಕೃಷ್ಣನು ಬೋಧಿಸಿದ್ದಾನೆ. ಆದ್ದರಿಂದ ವಿದ್ಯಾರ್ಥಿಗಳು ಸ್ಪರ್ಧಾಯುಗದಲ್ಲಿ ಅನ್ಯಮಾರ್ಗದ ಮೂಲಕ ಜಯಶೀಲರಾಗದೆ, ಭಗವಾನ ಶ್ರೀಕೃಷ್ಣನು ತೋರಿದ ನ್ಯಾಯಮಾರ್ಗದಲ್ಲಿ ಬದುಕನ್ನು ಮುನ್ನಡಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸೇಂಟ್ ಜೋಸೆಫ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಾಜು ಜೋಸೆಫ್, ಮಂಜುಳಾ ಪಾಟೀಲ ಮಯೂರಿ ಗದ್ಯಾಳ, ಶಿವಲೀಲಾ ತೆನೆಹಳ್ಳಿ, ಜ್ಯೋತಿ.ಬಿ.ಡಿ, ರಾಜೇಶ್ವರಿ ಬಂಕೂರ, ಅನಿತಾ ಬೆಳಗುಂಪಿ, ಆಡ್ಲಿನ್, ಮಂಗಳಾ ಪಡನಾಡ ಉಪಸ್ಥಿತರಿದ್ದರು.