ಸಾರಾಂಶ
ನೆಲಮಂಗಲ ಸಂಚಾರಿ ಪೊಲೀಸರ ಸಹಕಾರದಿಂದ ಕ್ರೇನ್ ಮೂಲಕ ಹಳ್ಳಕ್ಕೆ ಬಿದ್ದ ಲಾರಿಯನ್ನು ಮೇಲೆತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಬಸ್‍ಪೇಟೆ: ರಿಸರ್ವ್ ಬ್ಯಾಂಕಿನಿಂದ ನಾಣ್ಯಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಹೆದ್ದಾರಿ ರಸ್ತೆ ಬದಿ ನಿಲ್ಲಿಸಲು ಹೋಗಿ ಮಣ್ಣು ಕುಸಿದು ಲಾರಿ ಪಲ್ಟಿ ಹೊಡೆದಿರುವ ಘಟನೆ ಸೋಂಪುರ ಹೋಬಳಿಯ ರಾಯರಪಾಳ್ಯ ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು-ಬೆಂಗಳೂರು ಬಳಿ ನಡೆದಿದೆ.
ಬೆಂಗಳೂರಿನಿಂದ ರಾಯಚೂರಿಗೆ ತಲುಪಬೇಕಿದ್ದ ಲಾರಿಯಲ್ಲಿ ಬರೋಬ್ಬರಿ 57 ಲಕ್ಷ ಮೌಲ್ಯದ ಚಿಲ್ಲರೆ ಹಣ, ಒಂದು, ಎರಡು ರುಪಾಯಿ ಮುಖಬೆಲೆಯ ನಾಣ್ಯಗಳಿದ್ದು, ರಸ್ತೆಬದಿ ಪಾರ್ಕಿಂಗ್ ಮಾಡಲು ಹೋಗಿ ಮಣ್ಣು ಕುಸಿದು ಲಾರಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಲಾರಿ ಚಾಲಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದು, ನೆಲಮಂಗಲ ಸಂಚಾರಿ ಪೊಲೀಸರ ಸಹಕಾರದಿಂದ ಕ್ರೇನ್ ಮೂಲಕ ಹಳ್ಳಕ್ಕೆ ಬಿದ್ದ ಲಾರಿಯನ್ನು ಮೇಲೆತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಪೋಟೋ 5 : ನಾಣ್ಯಗಳು ತುಂಬಿದ್ದ ಲಾರಿ ರಾಯರಪಾಳ್ಯ ಗ್ರಾಮದ ರಾಷ್ಟ್ರೀಯ ಹೆದ್ದಾರಿ48ರಲ್ಲಿ ಪಲ್ಟಿಯಾಗಿರುವುದು