ಬೈಕಿಗೆ ಲಾರಿ ಡಿಕ್ಕಿ: ಪೇದೆ ಸ್ಥಳದಲ್ಲೆ ಸಾವು

| Published : Jul 11 2024, 01:35 AM IST

ಸಾರಾಂಶ

ಹೊಸಕೋಟೆ: ಕರ್ತವ್ಯಕ್ಕೆ ಪೊಲೀಸ್ ಠಾಣೆಗೆ ತೆರಳುತ್ತಿದ್ದ ಪೇದೆಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪೇದೆ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಚನ್ನಸಂದ್ರ ಬಳಿ ನಡೆದಿದೆ.

ಹೊಸಕೋಟೆ: ಕರ್ತವ್ಯಕ್ಕೆ ಪೊಲೀಸ್ ಠಾಣೆಗೆ ತೆರಳುತ್ತಿದ್ದ ಪೇದೆಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪೇದೆ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಚನ್ನಸಂದ್ರ ಬಳಿ ನಡೆದಿದೆ. ತಾಲೂಕಿನ ಅನುಗೊಂಡನಹಳ್ಳಿ ಠಾಣೆಯ ಪೇದೆ ದಾದಾವಲಿ(33) ಮೃತ ಪಟ್ಟವರು. ಮೃತರು ಮೂಲತಃ ಬಳ್ಳಾರಿ ಜಿಲ್ಲೆಯ ಶಿರಗುಪ್ಪದವರಾಗಿದ್ದು ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ರಾತ್ರಿ ಕಾಡುಗೋಡಿಯ ಪೊಲೀಸ್ ವಸತಿ ಸಮುಚ್ಚಯದಿಂದ ಕರ್ತವ್ಯಕ್ಕೆ ಬರುವ ವೇಳೆ ಚನ್ನಸಂದ್ರ ಬಸ್ ನಿಲ್ದಾಣದ ಬಳಿ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತ ಪೇದೆ ದಾದಾವಲಿಯ ಅಂತ್ಯಸಂಸ್ಕಾರ ಸ್ವಗ್ರಾಮ ಶಿರಗುಪ್ಪದಲ್ಲಿ ನೆರವೇರಿಸಲಾಯಿತು.