ಲಾರಿ ಡಿಕ್ಕಿ: ಕಾರು ಜಖಂ

| Published : Dec 27 2023, 01:30 AM IST

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಕೋಲೂರು ಬಳಿಯ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಹಿಂಬದಿಯಿಂದ ಬಂದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಜಖಂಗೊಂಡಿರುವ ಪ್ರಕರಣ ನಡೆದಿದ್ದು, ಇದಕ್ಕೆ ಪೊಲೀಸರ ಅವೈಜ್ಞಾನಿಕ ತಪಾಸಣೆಯೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕೋಲೂರು ಬಳಿಯ ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳ ತಪಾಸಣೆ ನಡೆಸಿದ್ದು, ಬೆಂಗಳೂರು ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಶ್ರೀಧರ್ ಕೋಲೂರು ಬಳಿ ಬ್ಯಾರಿಯರ್ ಹಾಗೂ ಇಂಟರ್‌ಸೆಪ್ಟರ್ ವಾಹನವನ್ನು ಕಂಡು ಕಾರಿನ ವೇಗವನ್ನು ತಗ್ಗಿಸಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಲಾರಿ ಕಾರಿನ ಬಲಪಾರ್ಶ್ವಕ್ಕೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಅಪಘಾತದಿಂದ ಕಾರಿನ ಬಲಭಾಗದ ಬಾಗಿಲು ಜಖಂಗೊಂಡಿದೆ.

ತಪಾಸಣೆ ವಿರುದ್ಧ ಆಕ್ರೋಶ:

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಪೊಲೀಸರ ಅವೈಜ್ಞಾನಿಕ ತಪಾಸಣೆಯಿಂದ ವಾಹನ ಸವಾರರಿಗೆ ಪ್ರಾಣ ಸಂಕಟ ಎದುರಾಗಿದೆ. ಎಕ್ಸ್‌ಪ್ರೆಸ್ ವೇನಲ್ಲಿ ಬ್ಯಾರಿಕೆಡ್ ಅಳವಡಿಸಿ ತಪಾಸಣೆ ಮಾಡುವುದು ಸರಿಯಲ್ಲ. ವೇಗವಾಗಿ ಬರುವ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ಮಾಡುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಟೊ೨೬ಸಿಪಿಟಿ೧:

ಕೋಲೂರು ಬಳಿ ಬ್ಯಾರಿಕೇಡ್ ಅಳವಡಿಸಿರುವುದು.

ಪೊಟೋ೨೬ಸಿಪಿಟಿ೨: ಜಖಂಗೊಂಡಿರುವ ಕಾರು.