ಬಸ್ಸು ನಿಲ್ದಾಣಕ್ಕೆ ನುಗ್ಗಿದ ಲಾರಿ: ಚಾಲಕನಿಗೆ ಪೆಟ್ಟು

| Published : May 13 2025, 01:15 AM IST

ಸಾರಾಂಶ

ನರಸಿಂಹರಾಜಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದು ಡಿವೈಡರ್ ಮೇಲೆ ಹತ್ತಿ ಬಸ್ಸು ನಿಲ್ದಾಣಕ್ಕೆ ನುಗ್ಗಿದ ಘಟನೆ ಮಿನಿ ವಿಧಾನ ಸೌಧದ ಹತ್ತಿರ ಭಾನುವಾರ ಸಂಜೆ 4.30ರ ಸಮಯದಲ್ಲಿ ನಡೆದಿದೆ.

ಬಸ್ಸು ನಿಲ್ದಾಣದಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರು

ನರಸಿಂಹರಾಜಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದು ಡಿವೈಡರ್ ಮೇಲೆ ಹತ್ತಿ ಬಸ್ಸು ನಿಲ್ದಾಣಕ್ಕೆ ನುಗ್ಗಿದ ಘಟನೆ ಮಿನಿ ವಿಧಾನ ಸೌಧದ ಹತ್ತಿರ ಭಾನುವಾರ ಸಂಜೆ 4.30ರ ಸಮಯದಲ್ಲಿ ನಡೆದಿದೆ.

ಲಾರಿ ಚಾಲಕನ ಮುಖಕ್ಕೆ ಪೆಟ್ಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಲ್ದೂರು ಭಾಗದ ಲಾರಿಯೊಂದು ಶಿವಮೊಗ್ಗದ ಕಡೆಗೆ ಹೊಗುತ್ತಿತ್ತು. ಸಿಂಸೆ ರಸ್ತೆಯ ಎಡ ಭಾಗದಲ್ಲಿ ಮೆಸ್ಕಾಂ ಇಲಾಖೆಯವರು ವಿದ್ಯುತ್ ಕಂಬ, ಲೈನ್ ದುರಸ್ತಿ ಮಾಡುತ್ತಿರುವುದರಿಂದ ಎಡ ಭಾಗದ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಎಲ್ಲಾ ವಾಹನಗಳು ಒಂದೇ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಈ ಲಾರಿ ಸಹ ಸಿಂಸೆಯಿಂದ ಬಲಾ ಭಾಗದ ರಸ್ತೆಯಲ್ಲೇ ಬಂದು ನಂತರ ತಾಲೂಕು ಕಚೇರಿ ಎದುರು ಎಡ ಭಾಗದ ರಸ್ತೆಗೆ ತಿರುಗಿದೆ. ಸ್ವಲ್ಪ ದೂರ ಹೋದ ನಂತರ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ಮೇಲೆ ಹತ್ತಿ ಬಲ ಭಾಗದ ರಸ್ತೆಗೆ ಹೋಗಿ ನಂತರ ಅಲ್ಲಿದ್ದ ಮದರ್ ತೆರೇಸಾ ಬಸ್ಸು ನಿಲ್ದಾಣಕ್ಕೆ ನುಗ್ಗಿದೆ.

ಬಸ್ಸು ನಿಲ್ದಾಣದಲ್ಲಿ ಬಸ್ಸು ಕಾಯುತ್ತಿದ್ದ 3- 4 ಜನ ದಿಕ್ಕಾ ಪಾಲಾಗಿ ಓಡಿದ್ದಾರೆ. ಸಮೀಪದಲ್ಲಿದ್ದ ಹಣ್ಣಿನ ಅಂಗಡಿ, ಕಬ್ಬಿನ ಹಾಲು ಮಾರುವ ಅಂಗಡಿಯವರು ಸಹ ತಪ್ಪಿಸಿಕೊಂಡಿದ್ದಾರೆ. ಯಾರಿಗೂ ಅಪಾಯ ಆಗಿಲ್ಲ. ಬಸ್ಸು ನಿಲ್ದಾಣದ 4 ಪಿಲ್ಲರ್ ಸಹ ಜಕಂ ಆಗಿದೆ. ಡಿವೈಡರ್ ಸಹ ಕಿತ್ತು ಹೋಗಿದೆ. ಲಾರಿ ಜಖಂ ಗೊಂಡಿದೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸೋಮವಾರ ಪೊಲೀಸರಿಗೆ ದೂರು ನೀಡಿದ್ದಾರೆ.