ಅಮಾನವೀಯ ಕಾನೂನು ಹಿಂಪಡೆಯಲು ಲಾರಿ ಚಾಲಕರು, ಮಾಲೀಕರ ಪ್ರತಿಭಟನೆ

| Published : Jan 19 2024, 01:48 AM IST

ಸಾರಾಂಶ

10 ವರ್ಷ ಜೈಲು, 7 ಲಕ್ಷ ರು. ದಂಡದ ಕಾನೂನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ತಾಲೂಕು ಲಾರಿ ಚಾಲಕರು ಮತ್ತು ಮಾಲೀಕರ ಸಂಘದವತಿಯಿಂದ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಹಿರಿಯೂರು: 10 ವರ್ಷ ಜೈಲು, 7 ಲಕ್ಷ ರು. ದಂಡದ ಕಾನೂನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ತಾಲೂಕು ಲಾರಿ ಚಾಲಕರು ಮತ್ತು ಮಾಲೀಕರ ಸಂಘದವತಿಯಿಂದ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 106 (1)(2) ಕಾಯ್ದೆ ಅನ್ವಯ ಹಿಟ್ ಅಂಡ್ ರನ್ ಕೇಸ್‌ಗೆ 10 ವರ್ಷ ಜೈಲು 7 ಲಕ್ಷ ರು. ದಂಡ ವಿಧಿಸುವ ಕಾನೂನು ಎಲ್ಲಾ ಮಾಲೀಕರು ಮತ್ತು ಚಾಲಕರಿಗೆ ಅಸಮಾಧಾನ ಉಂಟು ಮಾಡಿದೆ. ಈ ಹಿಂದೆ ಇದ್ದ 2 ವರ್ಷ ಜೈಲು ಶಿಕ್ಷೆ 10 ವರ್ಷಕ್ಕೆ ಏರಿಸಿದ್ದು, ಅಮಾನವೀಯ ಹಾಗೂ ಶೋಷಣೆಯದ್ದಾಗಿದೆ.

ಆದ್ದರಿಂದ ಚಾಲಕರ ಮತ್ತು ಮಾಲೀಕರ ಹಿತದೃಷ್ಟಿಯಿಂದ ಪ್ರಸ್ತುತ ಜಾರಿ ಮಾಡಿರುವ ಕಾನೂನನ್ನು ಮಾನವೀಯ ಹಿಂಪಡೆಯಬೇಕು ಎಂದು ತಾಲೂಕು ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್ ಏಜೆನ್ಸಿ ಅಸೋಸಿಯೇಷನ್‌ವತಿಯಿಂದ ಒತ್ತಾಯಿಸಲಾಯಿತು. ಪ್ರತಿಭಟನೆಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಕೆ.ರಾಮಚಂದ್ರ, ತಾಲೂಕು ಅಧ್ಯಕ್ಷ ರಾಘವೇಂದ್ರ, ಲಾರಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಜೆಜೆ ಹಳ್ಳಿ ಕೇಶವ, ಚಾಲಕರ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ, ತಾಲೂಕು ಸಂಚಾಲಕ ಆಟೋ ರಘು ಕಾರ್ಯಾಧ್ಯಕ್ಷ ಸಾದಿಕ್, ನಾಗರಾಜ್, ಕುಮಾರ್, ಮಣಿಕಂಠ,ರಘು, ಮಹಾಲಿಂಗ, ಮಸಿಯಣ್ಣ, ಮದನ್, ಲೋಕೇಶ್, ಕಿರಣ್ ಕುಮಾರ್, ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.