ಲಾರಿಗೆ ಬೆಂಕಿ: ಕೋಟ್ಯಂತರ ಮೌಲ್ಯದ ರೆಫ್ರಿಜಿರೇಟರ್ ಭಸ್ಮ

| Published : Oct 29 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಮಹಾರಾಷ್ಟ್ರದ ರಂಜನಗಾಂವನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೆಫ್ರಿಜಿರೇಟರ್‌ ಸಾಗಾಟ ಮಾಡುತ್ತಿದ್ದ ಲಾರಿಯ ಇಂಜಿನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಾರಿ ಹೊತ್ತಿ ಉರಿದ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಟೋಲ್ ಪ್ಲಾಜಾ ಬಳಿ ಭಾನುವಾರ ರಾತ್ರಿ ನಡೆದಿದೆ.

ಘಟನೆ ಮಾಹಿತಿ ತಿಳಿದು ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲೆತ್ನಿಸಿದರೂ ಸಹ, ಸರಕು ಸಾಗಣೆ ಲಾರಿಯಲ್ಲಿದ್ದ ಹಲವಾರು ರೆಫ್ರಿಜಿರೇಟರ್ ಬೆಂಕಿಗಾಹುತಿಯಾಗಿವೆ. ಮಹಾರಾಷ್ಟ್ರದ ವಿವಿಧ ಲಾಜಿಸ್ಟಿಕ್‌ಗೆ ಸೇರಿದ ಲಾರಿಯಲ್ಲಿದ್ದ ಸುಮಾರು ಎರಡು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. ಈ ಘಟನೆ ಬಗ್ಗೆ ಜಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.