ಸಾರಾಂಶ
ಕೇಂದ್ರ ಸರಕಾರ ನೂತನವಾಗಿ ಜಾರಿಗೊಳಿಸಿರುವ ಸಾರಥಿ ಸುರಕ್ಷಾ ಜಾಗೃತಿ ಕಾನೂನು ಲಾರಿ ಚಾಲಕರು ಹಾಗೂ ಮಾಲೀಕರಿಗೆ ಮಾರಕವಾಗಿದ್ದು, ಭಾರತೀಯ ನ್ಯಾಯ ಸಂಹಿತೆ ೨ನೇ ೨೦೨೩ ರ ಅಡಿ ಹಿಟ್ ಅಂಡ್ ರನ್ ಪ್ರಕರಣಗಳ ಸೆಕ್ಷನ್ ೧೦೬/೧ ಮತ್ತು ೧೦೬/೨ ನ್ನು ಕೂಡಲೇ ರದ್ದುಗೊಳಿಸಬೇಕು,
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಕೇಂದ್ರ ಸರ್ಕಾರದ ಸಾರಥಿ ಸುರಕ್ಷಾ ಜಾಗೃತಿ ಕಾನೂನು ಹಿಂಪಡೆಯಬೇಕೆಂದು ಒತ್ತಾಯಿಸಿ ಲಾರಿ ಮಾಲಿಕರ ಸಂಘ ಮಧ್ಯರಾತ್ರಿಯಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ಚಿಂತಾಮಣಿ ತಾಲೂಕು ಲಾರಿ ಮಾಲೀಕರ ಸಂಘದಿಂದ ಲಾರಿ ಹಾಗೂ ಬಸ್‌ಗಳಿಗೆ ಮುಷ್ಕರದ ಕರಪತ್ರಗಳನ್ನು ಅಂಟಿಸಿ,ಮುಷ್ಕರಕ್ಕೆ ಸಾರ್ವಜನಿಕರ ಬೆಂಬಲ ಕೋರಿದರು.ಕೇಂದ್ರ ಸರಕಾರ ನೂತನವಾಗಿ ಜಾರಿಗೊಳಿಸಿರುವ ಸಾರಥಿ ಸುರಕ್ಷಾ ಜಾಗೃತಿ ಕಾನೂನು ಲಾರಿ ಚಾಲಕರು ಹಾಗೂ ಮಾಲೀಕರಿಗೆ ಮಾರಕವಾಗಿದ್ದು, ಭಾರತೀಯ ನ್ಯಾಯ ಸಂಹಿತೆ ೨ನೇ ೨೦೨೩ ರ ಅಡಿ ಹಿಟ್ ಅಂಡ್ ರನ್ ಪ್ರಕರಣಗಳ ಸೆಕ್ಷನ್ ೧೦೬/೧ ಮತ್ತು ೧೦೬/೨ ನ್ನು ಕೂಡಲೇ ರದ್ದುಗೊಳಿಸಬೇಕು, ಶಿಕ್ಷೆಯ ಅವಧಿ ಹಾಗೂ ದಂಡವನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು. ರಾಜ್ಯ ಸರಕಾರ ರಾಜ್ಯದ ಗಡಿಗಳಲ್ಲಿನ ಆರ್.ಟಿ.ಓ ಕಚೇರಿಗಳನ್ನು ರದ್ದುಪಡಿಸಿ ಲಾರಿ ಚಾಲಕರ ಮತ್ತು ಮಾಲೀಕರ ಹಿತ ಕಾಯಬೇಕು ಹಾಗೂ ಲಾರಿ ಚಾಲಕರ ಮತ್ತು ಮಾಲೀಕರ ಹಲವು ಬೇಡಿಕೆಗಳ ಈಡೇರಿಕೆಯ ಒತ್ತಾಯಿಸಿ ನಡೆದಿರುವ ಮುಷ್ಕರದ ಹಿನ್ನೆಲೆ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ನಗರದ ಮುಷ್ಕರ ನಡೆಸಿದರು. ಚಿಂತಾಮಣಿ ತಾಲೂಕು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.