ಯೂರಿಯಾ ಅಕ್ರಮ ದಾಸ್ತಾನಿದ್ದ ಲಾರಿ ವಶ: ಆರೋಪಿಗಳಿಗಾಗಿ ಶೋಧ

| Published : Mar 22 2024, 01:07 AM IST

ಸಾರಾಂಶ

ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದ ಕೆಂಪೇಗೌಡ ಕಲ್ಯಾಣ ಮಂಟಪವನ್ನು ಬಾಡಿಗೆ ಪಡೆದು ಸುಮಾರು 282 ಬ್ಯಾಗ್ ಯೂರಿಯಾ ರಸಗೊಬ್ಬರವನ್ನು ಟೆಕ್ನಿಕಲ್ ಗ್ರೇಡ್ ಯೂರಿಯಾ ಫರ್ ಇಂಡಸ್ಟ್ರೀಯಲ್ ಯೂಸ್ ಓನ್ಲಿ ಎಂಬ ಕಂಪೆನಿಯ ಹೆಸರಿನಲ್ಲಿ ವಿವಿಧ ಉದ್ದೇಶಗಳಿಗೆ ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಕೇರಳ ಮೂಲದ ಲಾರಿಯನ್ನು ಕೊಪ್ಪ ಬಳಿಯ ಭಾರತ್ ಮಾತಾ ಕಾನ್ವೆಂಟ್ ಪಕ್ಕದ ಪೆಟ್ರೋಲ್ ಬಂಕ್ ಬಳಿ ವಶಕ್ಕೆ ಪಡೆದು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣತಾಲೂಕಿನ ಆವರ್ತಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ಅಕ್ರಮವಾಗಿ ಯೂರಿಯಾ ರಸಗೊಬ್ಬರವನ್ನು ಸಂಗ್ರಹಿಸಿ ನಂತರ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ತಾಲೂಕು ಆಡಳಿತ, ಕೃಷಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ದಾಳಿ ನಡೆಸಿ ಯೂರಿಯಾ ತುಂಬಿದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳು ಪರಾರಿಯಾಗಿರುವ ಘಟನೆ ನಡೆದಿದೆ.

ತಾಲೂಕಿನ ಆವರ್ತಿ ಗ್ರಾಮದ ಕೆಂಪೇಗೌಡ ಕಲ್ಯಾಣ ಮಂಟಪವನ್ನು ಬಾಡಿಗೆ ಪಡೆದು ಸುಮಾರು 282 ಬ್ಯಾಗ್ ಯೂರಿಯಾ ರಸಗೊಬ್ಬರವನ್ನು ಟೆಕ್ನಿಕಲ್ ಗ್ರೇಡ್ ಯೂರಿಯಾ ಫರ್ ಇಂಡಸ್ಟ್ರೀಯಲ್ ಯೂಸ್ ಓನ್ಲಿ ಎಂಬ ಕಂಪೆನಿಯ ಹೆಸರಿನಲ್ಲಿ ವಿವಿಧ ಉದ್ದೇಶಗಳಿಗೆ ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಕೇರಳ ಮೂಲದ ಲಾರಿಯನ್ನು ಕೊಪ್ಪ ಬಳಿಯ ಭಾರತ್ ಮಾತಾ ಕಾನ್ವೆಂಟ್ ಪಕ್ಕದ ಪೆಟ್ರೋಲ್ ಬಂಕ್ ಬಳಿ ವಶಕ್ಕೆ ಪಡೆದು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ದಾಸ್ತಾನು, ದಾಖಲೆ ಪರಿಶೀಲನೆ:

ಖಚಿತ ದೂರನ್ನು ಆಧರಿಸಿ ದಾಳಿ ನಡೆಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಹಾಗೂ ಅಧಿಕಾರಿಗಳು, ಆವರ್ತಿ ಗ್ರಾಮದ ಕೆಂಪೇಗೌಡ ಕಲ್ಯಾಣ ಮಂಟಪಕ್ಕೆ ಧಾವಿಸಿ ದಾಸ್ತಾನು ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಯೂರಿಯಾ ರಸಗೊಬ್ಬರವನ್ನು ವಿವಿಧ ಉದ್ದೇಶಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಇಂಡಸ್ಟ್ರೀಯಲ್ ಯೂಸ್ ಕಂಪನಿಯ ಯೂರಿಯವನ್ನು ಸಂಗ್ರಹಿಸಿ, ನೊಂದಣಿಯಾಗಿರದ ಕಂಪನಿ ಹೆಸರಿನಲ್ಲಿ ಮಾರಾಟ ಮಾಡಲು ಕಂಪನಿಗಳ ಹೆಸರನ್ನು ಅದಲು ಬದಲು ಮಾಡಿ ಮಾರಾಟ ಮಾಡಲು ತೀರ್ಮಾನಿಸಿದ್ದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ವೈ. ಪ್ರಸಾದ್, ಬೈಲಕುಪ್ಪೆ ಸಬ್ ಇನ್ಸ್ ಪೆಕ್ಟರ್ ಜಿತೇಂದ್ರ ಕುಮಾರ್ ಹಾಗೂ ಕೃಷಿ ಅಧಿಕಾರಿ ಹೀತೇಶ್ ನೇತೃತ್ವದಲ್ಲಿ ದಾಳಿ ನಡೆಸಿ, ಲಾರಿಯನ್ನು ವಶಕ್ಕೆ ಪಡೆದು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಹೆಚ್ಚಿನ ಬೆಲೆಗೆ ಮಾರಾಟ:

ಆರೋಪಿಗಳು ಚೀಲಗಳನ್ನು ಟೆಕ್ನಿಕಲ್ ಗ್ರೇಡ್ ಯೂರಿಯಾ ಫರ್ ಇಂಡಸ್ಟ್ರೀಯಲ್ಯೂಸ್ ಓನ್ಲಿ ಎಂಬ ಹೆಸರಿನ ವಿಳಾಸ ನೀಡಿ ಕೇರಳದಲ್ಲಿ ಪ್ರಿಂಟ್ ಮಾಡಿಸಿ, ಯೂರಿಯಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಈ ಜಾಗವನ್ನು ಬಾಡಿಗೆ ಪಡೆದು ಕಂಪನಿ ಚೀಲಗಳನ್ನು ಬದಲಿಸಿ, ಜಾಗವನ್ನು ಬಾಡಿಗೆ ಪಡೆದು ಕಂಪನಿ ಚೀಲಗಳನ್ನು ಬದಲಿಸಿ, ಬೇರೆಬೇರೆ ಕಂಪನಿ ಹೆಸರಿನಲ್ಲಿ ಮಾರಾಟ ಮಾಡಲು ತೀರ್ಮಾನಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಯೂರಿಯಾ ರಸಗೊಬ್ಬರವನ್ನು ಪಟ್ಟಣದ ಎಪಿಎಂಸಿ ಗೋಡೌನ್‌ಗೆ ಸಾಗಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ತಿಳಿಸಿದ್ದಾರೆ.