ಸಾರಾಂಶ
- ಹೊನ್ನಾಳಿ ಧರ್ಮಸಭೆಯಲ್ಲಿ ಹೊನ್ನಾಳಿ ಹಿರೇಕಲ್ಮಠ ಸ್ವಾಮೀಜಿ ಆಶೀರ್ವಚನ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮನುಷ್ಯ ದೇಹದ ಕೊಳೆಯನ್ನು ಸ್ನಾನ ಎಂಬ ಸಂಸ್ಕಾರದಿಂದ ಕಳೆಯುತ್ತಾನೆ. ಇದೇ ರೀತಿ ಮನದ ಕೊಳೆಯನ್ನು ಸದ್ಭಕ್ತಿ, ಸತ್ಕಾರ್ಯಗಳ ಮೂಲಕ ಕಳೆದುಕೊಳ್ಳಬೇಕು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ಪಟ್ಟಣದ ಹಿರೇಕಲ್ಮಠದ ಶಿವಾನುಭವ ಮಂಟಪದಲ್ಲಿ ಮಂಗಳಾರ ರಾತ್ರಿ ಆಯೋಜಿಸಲಾಗಿದ್ದ ಶ್ರಾವಣ ಮಾಸದ ಪೂಜೆ ಮತ್ತು ರಥೋತ್ಸವ ಅಂಗವಾಗಿ ಪ್ರತಿದಿನ ವೀರಶೈವ ಸಿದ್ಧಾಂತ ಶಿಖಾಮಣಿ ಪ್ರವಚನದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಶ್ರಾವಣ ಮಾಸ ಪ್ರತಿಯೊಬ್ಬರಿಗೆ ಪುಜ್ಯಮಾಸವಾಗಿದೆ. ದೇಶ ಹಾಗೂ ನಾಡಿನಾದ್ಯಾಂತ ಭಕ್ತಿ ಸಂಭ್ರಮ ಮನೋಜ್ಞಾನವಾಗಿದೆ. ನೂರಾರು ವರ್ಷಗಳಿಂದ ಮಠ- ಮಂದಿರಗಳಲ್ಲಿ ಧಾರ್ಮಿಕ ಪರಂಪರೆಯಿಂದ ಬಂದಿರುವ ಶ್ರಾವಣ ಮಾಸ ಸದ್ಭಕ್ತರಿಗೆ ದೈವ ಮನೋಭಾವನೆ ಮೂಡಿಸುತ್ತದೆ ಎಂದು ತಿಳಿಸಿದರು.ಹಿರೇಕಲ್ಮಠದಲ್ಲಿ ಹಿಂದಿನಿಂದಲೂ ಶ್ರಾವಣ ಮಾಸವನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ. ಭಕ್ತರ ಉದ್ಧಾರಕ್ಕೆ ಶ್ರೀ ಮಠದ ಲಿಂ. ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮತ್ತು ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಕಾಲದಿಂದಲೂ ನೂರಾರು ವರ್ಷದ ಪರಂಪರಾಗತ ಶ್ರಾವಣ ಮಾಸವನ್ನು ಶ್ರದ್ಧೆ-ಭಕ್ತಿಯಿಂದ ಆಚರಿಸಲಾಗುತ್ತಿದೆ ಎಂದರು.
ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ ಮಾತನಾಡಿ, ಶ್ರೀಮಠದಲ್ಲಿ ಶ್ರಾವಣ ಮಾಸದ ಉದ್ದಕ್ಕೂ ವೀರಶೈವ ಸಿದ್ಧಾಂತ ಶಿಖಾಮಣಿ ಪ್ರವಚನವನ್ನು ಮಠದ ಗುರುಕುಲ ಸಾಧಕರಾದ ಶ್ರೀಮಂಜುನಾಥ ದೇವರು ಪ್ರವಚನ ಮಾಡುವರು. ಶ್ರೀ ಚನ್ನಮಲ್ಲಿಕಾರ್ಜನ ಪುರಾಣ ಪ್ರವಚನವನ್ನು ಪುಟ್ಟರಾಜ ಗವಾಯಿ ಶಿಷ್ಯರಾದ ಹಾವೇರಿ ಜಿಲ್ಲೆಯ ಆಲದಕಟ್ಟೆ ಹಿರೇಮಠದ ವೇದಪಂಡಿತ ಬಸವರಾಜ ಶಾಸ್ತ್ರಿಗಳು ಪ್ರವಚನ ಮಾಡುವರು. ಶ್ರೀ ಮಠದಲ್ಲಿ ನಡೆಯುವ ಧರ್ಮ ಕಾರ್ಯವನ್ನು ಸದ್ಭಕ್ತರು ಜ್ಞಾನ ಹಾಗೂ ಭಕ್ತಿ ಹೆಚ್ಚಿಸಿಕೊಳ್ಳಲು ಧಾರ್ಮಿಕ ಭಾವನೆ ರೂಢಿಸಿಕೊಳ್ಳಲು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಮಠದ ವ್ಯವಸ್ಥಾಪಕ ಎಂ.ಪಿ.ಎಂ. ಚನ್ನಬಸಯ್ಯ, ಕೋರಿ ಮಲ್ಲಿಕಾರ್ಜನಪ್ಪ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ, ದಾನಪ್ಪ ಕಡದಕಟ್ಟೆ, ಎಂ.ಎಸ್. ಮಂಜುಳಾ, ಮಂಜುನಾಥ, ಶಿವಾನಂದಯ್ಯ, ಮಲ್ಲಿಕಾರ್ಜನ ಸ್ವಾಮಿ, ನರಸನಹಳ್ಳಿ ಗುರುಪ್ರಸಾದ, ಪಂಕಜ, ಆರ್.ಮಂಜುನಾಥ ಹಿರೇಮಠ ಬಸವರಾಜಪ್ಪ ನಿಜಗುಣ ಶಿವಯೋಗಿ ಶಾಸ್ತ್ರಿ, ಶ್ರೀಚನ್ನೇಶ್ವರ ಗಾನ ಕಲಾ ಬಳಗದವರು ಇದ್ದರು.
- - - -7ಎಚ್.ಎಲ್.ಐ1:ಹಿರೇಕಲ್ಮಠದಲ್ಲಿ ಶ್ರಾವಣ ಮಾಸದ ಪುಜಾ ಮತ್ತು ರಥೋತ್ಸವ ಅಂಗವಾಗಿ ಪ್ರತಿ ದಿನ ವೀರಶೈವ ಸಿದ್ದಾಂತ ಶಿಖಾಮಣಿ ಪ್ರವಚನದ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.