ಗ್ರಾಮಸ್ಥರ ಪ್ರಶ್ನೆಗಳಿಗೆ ಸದಸ್ಯ ಅಡ್ಡಗಾಲು, ಗೊಂದಲದ ಗೂಡಾದ ದುಂಡಳ್ಳಿ ಗ್ರಾಪಂ ಗ್ರಾಮಸಭೆ

| Published : Jan 13 2024, 01:32 AM IST

ಗ್ರಾಮಸ್ಥರ ಪ್ರಶ್ನೆಗಳಿಗೆ ಸದಸ್ಯ ಅಡ್ಡಗಾಲು, ಗೊಂದಲದ ಗೂಡಾದ ದುಂಡಳ್ಳಿ ಗ್ರಾಪಂ ಗ್ರಾಮಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಭೆ ಹೆಮ್ಮನೆ ಗ್ರಾಮದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಅಧಿಕಾರಿಗಳಿಂದ ಮಾಹಿತಿಗೆ ಸಂಬಂಧಿಸಿ ಗ್ರಾಮಸ್ಥರು ಪ್ರಶ್ನಿಸಿದ್ದರು. ಸದಸ್ಯರೊಬ್ಬರು ಪದೇಪದೇ ಎದ್ದುನಿಂತು ಗ್ರಾಮಸ್ಥರ ಜೊತೆ ವಾಗ್ವಾದಕ್ಕಿಳಿಯುತ್ತಿದ್ದು ಕಂಡು ಬಂತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಭೆ ಶುಕ್ರವಾರ ಹೆಮ್ಮನೆ ಗ್ರಾಮದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸತ್ಯವತಿ ದೇವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಿಡಿಒ ಆಯಿಷಾಬಾನು ಹಿಂದಿನ ಗ್ರಾಮಸಭೆಯ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ತೋಟಗಾರಿಕೆ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಅಧಿಕಾರಿಗಳಿಂದ ಮಾಹಿತಿಗೆ ಸಂಬಂಧಿಸಿ ಪ್ರಶ್ನಿಸುತ್ತಿದ್ದರು. ಈ ವೇಳೆ ಗ್ರಾ.ಪಂ.ಸದಸ್ಯರೊಬ್ಬರು ಪದೇಪದೇ ಎದ್ದುನಿಂತು ಗ್ರಾಮಸ್ಥರ ಜೊತೆ ವಾಗ್ವಾದಕ್ಕಿಳಿಯುತ್ತಿದ್ದು ಕಂಡು ಬಂತು. ತೋಟಗಾರಿಕೆ ಇಲಾಖೆ ಸೇವೆ ಸೌಲಭ್ಯ ಕುರಿತು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಸಿಂದು ಮಾಹಿತಿ ನೀಡುತ್ತಿದ್ದರು ಮಾಹಿತಿಗೆ ಸಂಬಂಧ ಪಟ್ಟಂತೆ ಗ್ರಾಮಸ್ಥರು ತೋಟಗಾರಿಕೆ ಇಲಾಖೆಯಿಂದ ಅರ್ಹಫಲಾನುಭವಿಗಳಿಗೆ ಸಿಗುವ ಗಿಡಗಳನ್ನು ಕೆಲವು ಗ್ರಾ.ಪಂ.ಸದಸ್ಯರು ಪಡೆದುಕೊಳ್ಳುತ್ತಾರೆ ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಬೇಕು ಎಂದರು. ಆಗ ಗ್ರಾ.ಪಂ. ಸದಸ್ಯ ದೇವರಾಜ್ ವೇದಿಕೆಯಿಂದ ಎದ್ದುನಿಂತು ಗ್ರಾಮಸ್ಥರೊಂದಿಗೆ ವಾಗ್ವಾದಕ್ಕಿಳಿದರು. ಸಭೆ ಗೊಂದಲದ ಗೂಡಾಯಿತು. ಮಧ್ಯಪ್ರವೇಶಿಸಿದ ಪೋಲಿಸರು ಗ್ರಾಮಸ್ಥರರನ್ನು ಸಮಾಧಾನಪಡಿಸಿದರು. ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಸುಬ್ರಮಣಿ, ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ 2023 ರ ಸಾಲಿನಲ್ಲಿ ನಡೆದ ಕಾಮಗಾರಿ ಮತ್ತು ಆಗಬೇಕಿರುವ ಕಾಮಗಾರಿ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರದ ಪೂರ್ಣ ಮುಂತಾದವರು ತಮ್ಮ ಗ್ರಾಮದಲ್ಲಿ ಎಲ್ಲೆಲ್ಲಿ ರಸ್ತೆ ಕಾಮಗಾರಿ ಆಗಿದೆ ಇದರ ವಿವರಕೊಡಿ ಎಂದು ಇಲಾಖೆ ಅಧಿಕಾರಿಯನ್ನು ಕೇಳಿದರು. ಈ ವೇಳೆಯಲ್ಲೂ ಸದಸ್ಯ ದೇವರಾಜ್ ವೇದಿಕೆಯಿಂದ ಎದ್ದುನಿಂತು ವಿಷಯಾಂತರವಾಗಿ ಗ್ರಾಮಸ್ಥರ ಜೊತೆ ವಾಗ್ವಾದ ಮಾಡುತ್ತಿದ್ದರು ಸಭೆ ಮತ್ತೆ ಗೊಂದಲಂಟಾಯಿತು. ಆಗ ಮಧ್ಯಪ್ರವೇಶಿಸಿದ ಸಭೆಯ ನೋಡಲ್ ಅಧಿಕಾರಿ ಮಿಲನ ಭರತ್ ಗ್ರಾಮಸಭೆಯಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದ ಸಮಸ್ಯೆ, ವಿಷಯಗಳ ಬಗ್ಗೆ ಮಾಹಿತಿ ಕೇಳುವುದು ಸಹಜ. ಗ್ರಾಮಸ್ಥರ ಪ್ರಶ್ನೆ ಮುಗಿದ ನಂತರ ನೀವು ಉತ್ತರ ನೀಡಿ ಎಂದು ಸದಸ್ಯ ದೇವರಾಜ್ ಅವರಿಗೆ ಮನವಿ ಮಾಡಿದರೂ ಆದರೂ ಗ್ರಾಮಸ್ಥರೊಂದಿಗೆ ವಾಗ್ವಾದ ಮುಂದುವರಿಸಿದರು. ಗರಂ ಆದ ನೋಡಲ್ ಅಧಿಕಾರಿ ಮಿಲನ ಭರತ್‌, ಜನಪ್ರನಿಧಿಯಾಗಿರುವ ನೀವು ಗ್ರಾಮಸ್ಥರ ಪ್ರಶ್ನೆಗೆ ತಾಳ್ಮೆಯಿಂದ ಉತ್ತರಕೊಡಬೇಕು. ನೀವೇ ಗ್ರಾಮಸ್ಥರ ಜೊತೆ ವಾಗ್ವಾದ ನಡೆಸಿದರೆ ಹೇಗೆ ಕುಳಿತುಕೊಳ್ಳಿ ಎಂದು ಅವರನ್ನು ತರಾಟೆಗೆ ತೆಗೆದುಕೊಂಡು ಸುಗಮವಾಗಿ ಸಭೆಯನ್ನು ನಡೆಸುವಂತೆ ಮನವಿ ಮಾಡಿದರು.ಸಮಸ್ಯೆಗಳನ್ನು ತೆರೆದಿಟ್ಟ ಗ್ರಾಮಸ್ಥರು: ಅರಣ್ಯ ಹಕ್ಕು ಪತ್ರ ವಿಷಯದ ಕುರಿತು ಚಂದ್ರೇಗೌಡ ಸಭೆಯಲ್ಲಿ ಮಾಹಿತಿ ಕೇಳಿದರು. ಆಹಾರ ಇಲಾಖೆ ಅಧಿಕಾರಿ ಯಶಸ್ವಿನಿ ಮಾಹಿತಿಗೆ ಸಂಬಂಧಿಸಿದಂತೆ ದುಂಡಳ್ಳಿ ಗ್ರಾಮಸ್ಥರು ನಮ್ಮೂರಿನಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ನಿಗದಿತ ದಿನ ಮತ್ತು ಸಮಯದಂತೆ ಬಾಗಿಲು ತೆರೆಯುವುದಿಲ್ಲ ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ ಎಂದರು, ಈ ಕುರಿತು ನ್ಯಾಯಬೆಲೆ ಅಂಗಡಿಯವರಿಂದ ಮಾಹಿತಿ ಕೇಳುವುದಾಗಿ ತಿಳಿಸಿದರು. ಗೃಹಜ್ಯೋತಿ ಯೋಜನೆಯಿಂದ ದುಂಡಳ್ಳಿ ವ್ಯಾಪ್ತಿಯಲ್ಲಿ ಶೇ90 ರಷ್ಟು ಯೋಜನೆಯ ಫಲಾನುಭವಿಗಳಾಗಿದ್ದಾರೆ ಉಳಿದ ಫಲಾನುಭವಿಗಳು ಹೆಸರು ನೋದಾಯಿಸಿಕೊಳ್ಳುವಂತೆ ಸೆಸ್ಕಾಂ ಅಭಿಯಂತರ ಸುದೀಪ್ ಹೇಳಿದರು. ದುಂಡಳ್ಳಿ ಗ್ರಾ.ಪಂ.ಯನ್ನು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಬೇಕೆಂದು ಸಭೆಯಲ್ಲಿ ಮನವಿ ಮಾಡಿದರು. ಈ ಕುರಿತು ಕಂದಾಯ ಅಧಿಕಾರಿ ಚೈತ್ರಾ ಸರಕಾರ ಈಗಾಗಲೇ ಬರ ಪರಿಹಾರದಲ್ಲಿ ಭತ್ತ ಬೆಳೆಗೆ ಅಂಗೀಕಾರ ನೀಡಿದೆ ಉಳಿದಂತೆ ಕಾಫಿ, ಕಾಳು ಮೆಣಸು ಬೆಳೆಗೆ ಪರಿಹಾರ ಘೋಷಣೆ ಪ್ರಗತಿಯಲ್ಲಿದೆ ಎಂದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಸತ್ಯವತಿ ಮಾತನಾಡಿದರು. ಉಪಾಧ್ಯಕ್ಷೆ ಗೋಪಿಕಾ, ಗ್ರಾ.ಪಂ. ಸದಸ್ಯರು ಪಿಡಿಒ ಆಯಿಷಾ ಬಾನು, ಗ್ರಾ.ಪಂ. ಸಿಬ್ಬಂದಿ ಹಾಜರಿದ್ದರು.