ಕನ್ನಡದ ಕುರಿತು ಪ್ರೀತಿ ಕಾಳಜಿ ಮುಖ್ಯ: ಡಿಪಿ ರಾಜು

| Published : Jul 11 2024, 01:38 AM IST

ಸಾರಾಂಶ

ವಿದ್ಯಾರ್ಥಿಗಳಾದ ಎಂ.ಡಿ. ವಸುಧಾ, ವಿ.ಆರ್.ರೋಹಿತ್ ಗೌಡ, ಬಿ.ಟಿ.ಶಿಲ್ಪಶ್ರೀ, ಎಂ.ಮೋನಿಕಾ, ಡಿ.ಪಿ.ಮನ್ವಿತಾ, ಹೆಚ್.ಎನ್.ಹಿತಶ್ರೀ, ಎಂ.ಎನ್.ದಿವ್ಯ, ಸಿ.ಆರ್. ರಮ್ಯ, ಸಿ.ರಕ್ಷಿತಾ, ಆರ್.ರಾಹುಲ್ ಅವರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ನಮ್ಮ ಕನ್ನಡ ನಾಡು ನುಡಿ, ಭಾಷೆಯ ಬಗ್ಗೆ ಪ್ರತಿಯೊಬ್ಬರು ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿದ್ದರೆ ಮಾತ್ರ ಕನ್ನಡ ಭಾಷೆ ಬೆಳೆವಣಿಗೆ ಆಗಲು ಸಾಧ್ಯ ಎಂದು ಕಸಾಪ ತಾಲೂಕು ಅಧ್ಯಕ್ಷ ಡಿ.ಪಿ. ರಾಜು ಅಭಿಪ್ರಾಯಪಟ್ಟರು.

ತಾಲೂಕಿನ ಮಾಯಸಂದ್ರದ ಕನ್ನಡ ಭವನದಲ್ಲಿ ಕಸಾಪ ಹೋಬಳಿ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ೧೨೫ ಕ್ಕೆ ೧೨೫ ಅಂಕಗಳಿಸಿದ ೧೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಗದು ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮಾಯಸಂದ್ರ ಹೋಬಳಿ ಮಟ್ಟದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ೧೨೫ ಕ್ಕೆ ೧೨೫ ಅಂಕಗಳಿಸಿರುವ ೧೦ ಮಕ್ಕಳು ಇರುವುದು ಸಾಧನೆಯ ಸಂಗತಿಯೇ. ಹಳ್ಳಿಗಾಡಿನಲ್ಲಿರುವ ಪ್ರತಿಭಾವಂತರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ ಎಂದರು.

ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಾದ ಎಂ.ಡಿ. ವಸುಧಾ, ವಿ.ಆರ್.ರೋಹಿತ್ ಗೌಡ, ಬಿ.ಟಿ.ಶಿಲ್ಪಶ್ರೀ, ಎಂ.ಮೋನಿಕಾ, ಡಿ.ಪಿ.ಮನ್ವಿತಾ, ಹೆಚ್.ಎನ್.ಹಿತಶ್ರೀ, ಎಂ.ಎನ್.ದಿವ್ಯ, ಸಿ.ಆರ್. ರಮ್ಯ, ಸಿ.ರಕ್ಷಿತಾ, ಆರ್.ರಾಹುಲ್ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕಸಾಪ ಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್ ಹಾಗೂ ಮಾಯಸಂದ್ರ ಹೋಬಳಿ ಘಟಕದ ಅಧ್ಯಕ್ಷ ಹನುಮಂತಯ್ಯ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮ ವಾಸು, ಲೀಲಾವತಿಗಿಡ್ಡಯ್ಯ, ಶ್ರೀಧರ್ ಮೂರ್ತಿ, ಜವರೇಗೌಡರು, ನಂಜುಂಡಪ್ಪ, ಶಿವರಾಮಯ್ಯ, ಪುಟ್ಟೇಗೌಡ, ಸಿ.ಪಿ.ಪ್ರಕಾಶ್, ರಹಮತ್, ಪುಟ್ಟಸ್ವಾಮಿ ಗೌಡ, ಕಸಾಪ ಕಾರ್ಯದರ್ಶಿ ಮುನಿರಾಜು, ಎಸ್.ಡಿಎಂ.ಸಿ ಅಧ್ಯಕ್ಷ ಕರಿಬಸವಯ್ಯ, ರಂಗಕಲಾವಿದ ನಾಗರಾಜ್ ಸೇರಿದಂತೆ ಶಿಕ್ಷಕರು, ಪೋಷಕರು ಇತರರು ಇದ್ದರು. ಮುಖ್ಯ ಶಿಕ್ಷಕ ಶಿವಲಿಂಗೇಗೌಡ ಸ್ವಾಗತಿಸಿದರು. ಮುನಿರಾಜು ನಿರೂಪಿಸಿದರು. ನಿವೃತ್ತ ಶಿಕ್ಷಕ ಪ್ರಕಾಶ್ ವಂದಿಸಿದರು.

-----------

ಫೋಟೋ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡಕ್ಕೆ ೧೨೫ ಕ್ಕೆ ೧೨೫ ಅಂಕಗಳಿಸಿದ ವಿದ್ಯಾರ್ಥಿಗಳನ್ನು ತುರುವೆಕೆರೆ ಕಸಾಪದಿಂದ ಅಭಿನಂದಿಸಲಾಯಿತು.