ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಪೊಲೀಸ್ ಇಲಾಖೆಯ ಸಿಬ್ಬಂದಿ ಸ್ಕರಿಯ ಎಂ.ಎ, ಪ್ರಶಾಂತ್ ರೈ ಮತ್ತು ಪತ್ರಕರ್ತ ಫಾರೂಕ್ ಶೇಖ್ ಮುಕ್ವೆ ನೇತೃತ್ವದಲ್ಲಿ, ಭಾಂಧವ್ಯ ಫ್ರೆಂಡ್ಸ್ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ೮ನೇ ವರ್ಷದ ನಾಕೌಟ್ ಮಾದರಿಯ ೧೬ ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನೆಹರೂನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಿತು.ಪಂದ್ಯಾಟ ಉದ್ಘಾಟಿಸಿದ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರು ಮಾತನಾಡಿ, ಪ್ರೀತಿ ಮತ್ತು ಬಾಂಧವ್ಯ ಉಳಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿರುವುದು ಮಾದರಿ ವಿಚಾರ. ಎಲ್ಲರಲ್ಲೂ ಎಂದಿಗೂ ಪ್ರೀತಿ ಮತ್ತು ಬಾಂಧವ್ಯ ಉಳಿಯಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಇಂತಹ ಕ್ರೀಡಾಕೂಟಗಳ ಅವಶ್ಯಕತೆಯಿದೆ. ಇದು ಬಹುಮಾನಕ್ಕಾಗಿ ನಡೆಸುತ್ತಿರುವ ಕ್ರೀಡಾಕೂಟವಲ್ಲ, ಮನುಷ್ಯ ಮನಸ್ಸುಗಳನ್ನು ಬೆಸೆಯಲು ನಡೆಸುವ ಕ್ರೀಡಾಕೂಟವಾಗಿದೆ ಎಂದರು.ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ಅಧ್ಯಕ್ಷತೆ ವಹಿಸಿ ಪಂದ್ಯಾಟಕ್ಕೆ ಶುಭ ಹಾರೈಸಿದರು.
ಪೊಲೀಸ್ ನಿರೀಕ್ಷಕ ಜಾನ್ಸನ್ ಕಿರಣ್ ಡಿಸೋಜ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್, ಪೊಲೀಸ್ ಉಪನಿರೀಕ್ಷಕರಾದ ಸೇಸಮ್ಮ, ಸವಿತಾ, ಎಸಿಸಿಇ(ಐ) ಪುತ್ತೂರು ಸೆಂಟರ್ ಅಧ್ಯಕ್ಷ ಪ್ರಮೋದ್ ಕುಮಾರ್, ಉದ್ಯಮಿ ಸಹಜ್ ರೈ ಬಳಜ್ಜ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿ ಶಿವರಾಮ ಆಳ್ವ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮಾತನಾಡಿ, ಕಳೆದ ೮ ವರ್ಷಗಳಿಂದ ಯಶಸ್ವಿಯಾಗಿ ಬಾಂಧವ್ಯ ಟ್ರೋಫಿ ಪಂದ್ಯಾಟವನ್ನು ಸಂಘಟಕರು ಆಯೋಜಿಸುತ್ತಿದ್ದಾರೆ. ಮುಂದೆ ಇನ್ನಷ್ಟು ಹೆಚ್ಚು ತಂಡಗಳೊಂದಿಗೆ ಯಶಸ್ವಿಯಾಗಿ ಕ್ರೀಡಾಕೂಟ ಆಯೋಜಿಸುವಂತಾಗಬೇಕು. ಇಲ್ಲಿ ಆಟವಾಡಿದ ಕ್ರೀಡಾಳುಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಬೇಕು ಎಂದು ಹೇಳಿದರು.ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ್ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಉಪನಿರೀಕ್ಷಕ ಜಂಬೂರಾಜ್ ಮಹಾಜನ್, ಎಸಿಸಿಇ(ಐ) ಪುತ್ತೂರು ಸೆಂಟರ್ ಅಧ್ಯಕ್ಷ ಪ್ರಮೋದ್ ಕುಮಾರ್, ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿದರು.
ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್, ಉದಯ ರವಿ, ಕುಟ್ಟಿ ಎಂ.ಕೆ., ಉದ್ಯಮಿಗಳಾದ ಸೀತಾರಾಮ ರೈ, ಅಮೃತಾ, ಸುರೇಶ್ ನಾಡಾಜೆ, ಜನಾರ್ದನ ಪೂಜಾರಿ ಮಂಗಳೂರು, ಜುನೈದ್ ಬಿ.ಜಿ., ಸಂದೀಪ್ ಮುಖ್ಯ ಅತಿಥಿಗಳಾಗಿದ್ದರು.ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಜಾಕ್ ಬಪ್ಪಳಿಗೆ, ಪುತ್ತೂರು ತಾಲೂಕು ಯುವ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ಪೊರ್ದಾಲ್, ರಾಷ್ಟ್ರೀಯ ಈಜುಪಟು ಪ್ರಾಧಿ ಕ್ಲೇರ್ ಪಿಂಟೊ, ಬೀರಮಲೆ ಆಶ್ರಮದ ಅನ್ನಪ್ಪ ವಿ.ಎಂ. ಅವರನ್ನು ಗೌರವಿಸಲಾಯಿತು.