31ರಂದು ಲವ್ ಲೆಟರ್ಸ್- ನಿನ್ನ ಪ್ರೀತಿಯ ನಾನು ನಾಟಕ ಪ್ರದರ್ಶನ

| Published : May 28 2025, 12:04 AM IST / Updated: May 28 2025, 12:05 AM IST

31ರಂದು ಲವ್ ಲೆಟರ್ಸ್- ನಿನ್ನ ಪ್ರೀತಿಯ ನಾನು ನಾಟಕ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು: ನಗರದ ರಂಗವಲ್ಲಿ ಮೈಸೂರು ವತಿಯಿಂದ ಮೇ 31ರಂದು ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಸಂಸ್ಥೆಯ ಕಲಾವಿದರು ಅಭಿನಯಿಸುವ ಲವ್ ಲೆಟರ್ಸ್ – ನಿನ್ನ ಪ್ರೀತಿಯ ನಾನು ನಾಟಕ ಪ್ರದರ್ಶನವನ್ನು ಆಯೋಜಿಸಿದೆ.

ಈ ನಾಟಕದಲ್ಲಿ ಕನ್ನಡ ಚಲನಚಿತ್ರ ರಂಗದ ಪ್ರತಿಭಾವಂತ ನಟ ಕಿಶೋರ್ ಕುಮಾರ್ ಹಾಗೂ ನಟಿ ಸಿರಿ ರವಿಕುಮಾರ್ ಅಭಿನಯಿಸಿರುತ್ತಾರೆ. ಎ.ಆರ್. ಗರ್ನಿ ರಚನೆಯ ಈ ನಾಟಕದ ರೂಪಾಂತರ ಮತ್ತು ರಂಗಕರ್ಮಿ ವೆಂಕಟೇಶ್ ಪ್ರಸಾದ್ ನಿರ್ದೇಶಿಸಿದ್ದಾರೆ. ವಿನ್ಯಾಸ- ಜಯಂತ್ ಜಿ. ನಿಶಾಂತ್ ಗುರುಮೂರ್ತಿ, ಬೆಳಕು: ಡಿ.ಟಿ. ಅರುಣ್, ನಿರ್ಮಾಣ: ಸುಷ್ಮ, ನಿರ್ವಹಣೆ : ಭೈರವ, ಸಹಾಯ: ಅವಿನಾಶ್ ಶಿವಪುರೆ. ಮೇ 31 ರಂದು ಸಂಜೆ 4 ಹಾಗೂ ಸಂಜೆ 7 ಕ್ಕೆ ಎರಡು ಪ್ರದರ್ಶನಗಳನ್ನು ಏರ್ಪಡಿಸಿದ್ದು, ಪ್ರವೇಶ ದರ ರು. 150 ನಿಗದಿಪಡಿಸಲಾಗಿದೆ. ಟಿಕೆಟ್ಗಳಿಗಾಗಿ ಮೊ. 9900182400 ಸಂಪರ್ಕಿಸುವುದು.