ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಒಕ್ಕೂಟಕ್ಕೆ ಕಡಿಮೆ ಗುಣಮಟ್ಟದ ಹಾಲು ಪೂರೈಕೆ ಬಗ್ಗೆ ಬಂದ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಶಾಸಕ ಹಾಗೂ ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು ಪಟ್ಟಣದ ಹೊರವಲಯದ ಹೊನ್ನೇನಹಳ್ಳಿ ಬಳಿಯ ಹಾಲು ಶಿಥಿಲೀಕರಣ ಘಟಕಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.ತಾಲೂಕಿನ 136 ಸಂಘಗಳಿಂದ ಒಕ್ಕೂಟಕ್ಕೆ ಹಾಲು ಪೂರೈಕೆಯಾಗುತ್ತಿದೆ. ಇದರಲ್ಲಿ ಕನಿಷ್ಠ 20- 25 ಹಾಲು ಉತ್ಪಾದರ ಸಹಕಾರ ಸಂಘಗಳಿಂದ ಪೂರೈಕೆಯಾಗುತ್ತಿರುವ ಹಾಲು ಗುಣಮಟ್ಟದ ಪರಿಶೀಲನೆಯಲ್ಲಿ ಕಡಿಮೆ ಆಗುತ್ತಿದೆ. ಆದರೆ, ಈ ಹಾಲನ್ನು ಒಕ್ಕೂಟ ತಿರಸ್ಕರಿಸುವುದಿಲ್ಲ. ಜಿಡ್ಡಿನ ಅಂಶದ ಮೇಲೆ ರೈತರಿಗೆ ಹಣ ನೀಡುವುದರಿಂದ ಸಹಕಾರ ಸಂಘಗಳ ಲೋಪದಿಂದ ರೈತರಿಗೆ ನಷ್ಟವಾಗುತ್ತಿದೆ ಎಂದರು.
ಗುಣಮಟ್ಟ ಕಡಿಮೆಯಾದರೆ ಸಹಕಾರ ಸಂಘಗಳಿಂದ ಪೂರೈಕೆಯಾದ ಹಾಲಿಗೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನ ಸಿಗುವುದಿಲ್ಲ. ಪದೇ ಪದೇ ಕೆಲವು ಸಹಕಾರ ಸಂಘಗಳು ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿ ರೈತರಿಗೆ ಕಡಿಮೆ ಹಣ ಪಾವತಿಯಾಗುತ್ತಿದೆ. ಇದರಿಂದ ರೈತರಿಗೂ ನಷ್ಟವಾಗುತ್ತಿದೆ ಎಂದರು.ಯಾವುದೇ ಒಂದು ಸಂಘದಿಂದ ಒಂದು ಅಥವಾ ಎರಡು ಬಾರಿ ಹಾಲು ಗುಣಮಟ್ಟ ಕಡಿಮೆಯಾದರೆ ತಕ್ಷಣವೇ ಮಾರ್ಗ ಸೂಪರ್ ವೈಸರ್‌ಗಳು ಅಂತಹ ಸಹಕಾರ ಸಂಘಗಳಿಗೆ ಭೇಟಿ ನೀಡಿ ಪರಿಶೀಲಿಸಿಬೇಕು. ಶಿಥಿಲೀಕರಣ ಘಟಕದ ವ್ಯವಸ್ಥಾಪಕರು ಈ ಬಗ್ಗೆ ಒಕ್ಕೂಟಕ್ಕೆ ಪತ್ರ ಬರೆದು ಮಾಹಿತಿ ನೀಡಬೇಕು. ಆದರೆ, ಒಕ್ಕೂಟದ ಮಾರ್ಗಧಿಕಾರಿಗಳಾಗಲಿ ಅಥವಾ ಶಿಥಿಲೀಕರಣ ಘಟಕದ ವ್ಯವಸ್ಥಾಪಕರಾಗಲಿ ಯಾವುದೇ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಕರ್ತವ್ಯ ಲೋಪದಿಂದ ರೈತರು ನಷ್ಟ ಅನುಭವಿಸಬೇಕಾಗಿದೆ. ತಕ್ಷಣವೇ ಕಡಿಮೆ ಗುಣಮಟ್ಟದ ಹಾಲು ಪೂರೈಕೆಯಾದ ಸಹಕಾರ ಸಂಘಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ತಾಕೀತು ಮಾಡಿದರು.ಈ ವೇಳೆ ಶಿಥಿಲೀಕರಣ ಘಟಕದ ವ್ಯವಸ್ಥಾಪಕ ಮಾನ್‌ಸಿಂಗ್, ವಿಸ್ತರಣಾಧಿಕಾರಿ ಸ್ವರೂಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಂದು ನಗರಸಭೆ ಆಯವ್ಯಯದ ಬಗ್ಗೆ ಪೂರ್ವಭಾವಿ ಸಭೆಮಂಡ್ಯ: ನಗರಸಭೆ 2025-26ನೇ ಸಾಲಿನ ಆಯವ್ಯಯ (ಬಜೆಟ್) ದ ಬಗ್ಗೆ ಪೂರ್ವಭಾವಿಯಾಗಿ ಚರ್ಚಿಸಲು ಜ.20ರಂದು ಬೆಳಗ್ಗೆ 11 ಗಂಟೆಗೆ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ನಗರಸಭಾ ಕಾರ್ಯಾಲಯದ ಅಮೃತ ಭವನ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ. ಸಭೆಗೆ ಆಗಮಿಸಿ ತಮ್ಮ ಸೂಕ್ತ ಸಲಹೆಗಳನ್ನು ನೀಡಲು ಚುನಾಯಿತ ಪ್ರತಿನಿಧಿಗಳು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ನಗರದ ನೋಂದಾಯಿತ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು, ಹಿರಿಯ ನಾಗರೀಕರು, ಸಮಾಜ ಸೇವಕರು ಮತ್ತು ಗಣ್ಯರು ಹಾಗೂ ಎಲ್ಲಾ ಆಸಕ್ತ ನಾಗರೀಕರನ್ನು ಗೌರವ ಪೂರ್ವಕವಾಗಿ ಸಭೆಗೆ ಪಾಲ್ಗೊಳ್ಳಬಹುದು ಎಂದು ಪೌರಾಯುಕ್ತರು ಕೋರಿದ್ದಾರೆ.