ಸಾರಾಂಶ
ವೇಮನರ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ತಿಳಿಸುವಂತ ಕೆಲಸ ಆಗಬೇಕು.ಅವರ ಬಗ್ಗೆ ಹೆಚ್ವಿನ ಸಂಶೋಧನೆ ಆಗಬೇಕು
ಮುಂಡರಗಿ: ಮಹಾಯೋಗಿ ವೇಮನರು ಸಮಾಜದಲ್ಲಿನ ಜಾತೀಯತೆ, ಅಂಧಕಾರ ಹೋಗಲಾಡಿಸಲು ಶ್ರಮಿಸಿದರು. ವೇಮನರು ಮನಪರಿವರ್ತತೆ ಮಾಡಿಕೊಂಡು ಸಮಾಜ ಸುಧಾರಕನಾಗಿ ಮನುಕುಲ ಗೌರವಿಸುವಂತ ಕೆಲಸ ಮಾಡಿದ್ದಾರೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವೇಮನರ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ತಿಳಿಸುವಂತ ಕೆಲಸ ಆಗಬೇಕು.ಅವರ ಬಗ್ಗೆ ಹೆಚ್ವಿನ ಸಂಶೋಧನೆ ಆಗಬೇಕು. ನಮ್ಮ ಬದುಕು ಅರ್ಥಪೂರ್ಣವಾಗಬೇಕೆಂದರೆ ಇಂತಹ ಮಹಾನ್ ಚೇತನರ ವಿಚಾರ ಅಳವಡಿಸಿಕೊಳ್ಳಬೇಕು ಎಂದರು.
ನಿವೃತ್ತ ಉಪನ್ಯಾಸಕ ಎಸ್.ಆರ್. ಬಸಾಪೂರ ಮಾತನಾಡಿ, ರಾಜಯೋಗಿ ಆಗಿದ್ದ ವೇಮನರು ಮಹಾಯೋಗಿ ಆದರು. ವೇಮನರು ಮಹಾಯೋಗಿ ಆಗುವುದಕ್ಕೆ ಪೂರಕ ವಾತಾವರಣ ನಿರ್ಮಿಸಿಕೊಟ್ಟವರೇ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರು. ವೇಮನರು ತಮ್ಮ ಕಾವ್ಯಗಳ ಮೂಲಕ ಸಮಾಜದಲ್ಲಿನ ಮೂಢನಂಬಿಕೆ ದೂರ ಮಾಡಿ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದರು ಎಂದರು.ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷ ಡಾ. ಬಿ.ಎಸ್. ಮೇಟಿ, ಡಾ. ವೈ.ಎಸ್. ಮೇಟಿ, ವೀರಣ್ಣ ಮೇಟಿ, ಪ್ರಹ್ಲಾದ್‌ಗೌಡ ಮೂಗನೂರ, ವಿಶ್ವನಾಥಗೌಡ ಪಾಟೀಲ, ಬಾಬಣ್ಣ ಚನ್ನಳ್ಳಿ, ಉಮೇಶ ಮೇಟಿ, ವಿಜಯಕುಮಾರ ಬಣಕಾರ, ಮಹೇಶ ನಾಗರಹಳ್ಳಿ, ಮಂಜುನಾಥ ಮುಧೋಳ, ಜಂಬಣ್ಣ ಮಂಟಗೇರಿ, ಸೋಮಶೇಖರ ರಾಜೂರ, ಎಸ್.ಎಸ್. ಬಿಚ್ಚಾಲಿ ಇತರರು ಇದ್ದರು.