ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಕಡಿಮೆ ಫಲಿತಾಂಶ: ಕೆ.ಮಹದೇವು ವಿಷಾದ

| Published : Jul 27 2025, 12:00 AM IST

ಸಾರಾಂಶ

ಕನ್ನಡವನ್ನು ಮೈಗೂಡಿಸಿಕೊಂಡರೆ ಭಾಷೆ ಹೆಚ್ಚು ಮನಸಿಗೆ ಆನಂದವನ್ನು ಕೊಡುತ್ತದೆ. ಆದ್ದರಿಂದ ಭಾಷೆ ಕಲಿತಷ್ಟು ಮನುಷ್ಯ ಬುದ್ಧಿವಂತ. ಜ್ಞಾನವಂತನಾಗುತ್ತಾನೆ. ವಿದ್ಯಾರ್ಥಿಗಳು ಕನ್ನಡಕ್ಕೆ ಹೆಚ್ಚು ಒತ್ತು ನೀಡಿ ಕನ್ನಡ ಕಲಿಯುವುದರಿಂದ ಉತ್ತಮ ಫಲಿತಾಂಶ ಬರಲು ಕಾರಣವಾಗುತ್ತದೆ. ವಿದ್ಯಾರ್ಥಿಗಳು ಕನ್ನಡವನ್ನು ಗಮನವಿಟ್ಟು ಕಲಿಯಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವುದು ವಿಷಾದನೀಯ ಎಂದು ಮುಖ್ಯ ಶಿಕ್ಷಕ ಕೆ.ಮಹದೇವು ಅಭಿಪ್ರಾಯಪಟ್ಟರು.

ತಾಲೂಕಿನ ಗಾಮನಹಳ್ಳಿ ಜ್ಞಾನಭಾರತಿ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡವೆಂದರೆ ಅಮೃತವಿದ್ದಂತೆ. ಕನ್ನಡವನ್ನು ಕಲಿಯುವುದೆಂದರೆ ಬಾಳೆಹಣ್ಣಿನ ಸಿಪ್ಪೆ ಸುಲಿದು, ಬಾಳೆಹಣ್ಣು ತಿಂದ ಹಾಗೆ ಸುಲಭ ಎಂದರು.

ಕನ್ನಡವನ್ನು ಮೈಗೂಡಿಸಿಕೊಂಡರೆ ಭಾಷೆ ಹೆಚ್ಚು ಮನಸಿಗೆ ಆನಂದವನ್ನು ಕೊಡುತ್ತದೆ. ಆದ್ದರಿಂದ ಭಾಷೆ ಕಲಿತಷ್ಟು ಮನುಷ್ಯ ಬುದ್ಧಿವಂತ. ಜ್ಞಾನವಂತನಾಗುತ್ತಾನೆ. ವಿದ್ಯಾರ್ಥಿಗಳು ಕನ್ನಡಕ್ಕೆ ಹೆಚ್ಚು ಒತ್ತು ನೀಡಿ ಕನ್ನಡ ಕಲಿಯುವುದರಿಂದ ಉತ್ತಮ ಫಲಿತಾಂಶ ಬರಲು ಕಾರಣವಾಗುತ್ತದೆ. ವಿದ್ಯಾರ್ಥಿಗಳು ಕನ್ನಡವನ್ನು ಗಮನವಿಟ್ಟು ಕಲಿಯಬೇಕು ಎಂದರು.

ಸಭೆಯಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹದೇವಸ್ವಾಮಿ, ಕನ್ನಡ ಶಿಕ್ಷಕಿ ಶೃತಿ ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಕೆ. ಮಹದೇವು ಅವರನ್ನು ಸನ್ಮಾನಿಸಿ ಗೌರವಿಸಿದರು.

1.85 ಕೋಟಿ ರು. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗುದ್ದಲಿ ಪೂಜೆ

ಹಲಗೂರು:

ಮಯೂರ ಬೇಕರಿಯಿಂದ ಎಚ್.ಬಸಾಪುರ ಗೇಟ್ ಹಾಗೂ ಗೌರಿಶಂಕರ ಕಲ್ಯಾಣ ಮಂಟಪದಿಂದ ಜಿಲ್ಲಾಪುರದವರೆಗೂ 1.85 ಕೋಟಿ ರು. ವೆಚ್ಚದ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮನ್ಮಲ್ ಉಪಾಧ್ಯಕ್ಷರಾದ ಕೃಷ್ಣೆಗೌಡ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ಎಚ್.ವಿ.ಅಶ್ವಿನ್ ಕುಮಾರ್, ಎಂಜಿನಿಯರ್ ದಿನೇಶ್ ಕುಮಾರ್, ಗ್ರಾಪಂ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸಾ ಚಾರಿ, ಉಪಾಧ್ಯಕ್ಷೆ ಮಹಾದೇವಮ್ಮ, ಜಿಪಂ ಮಾಜಿ ಸದಸ್ಯ ಚಂದ್ರಕುಮಾರ್, ಮೋಹನ್ ಕುಮಾರ್, ಎಚ್‌.ವಿ.ರಾಜು ಶಿವನಂಜೇಗೌಡ, ಎಚ್.ಆರ್.ಪದ್ಮನಾಭ, ಮರಿಸ್ವಾಮಿ ಸೇರಿದಂತೆ ಇತರರು ಇದ್ದರು.